ಹಲವು ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಟ್ಟ ಬಳಿಕ, ಯೋಗಗುರು ಬಾಬಾ ರಾಮ್'ದೇವ್‌ರ ಪತಂಜಲಿ ಆಯುರ್ವೇದ ಇದೀಗ ಡೈಪರ್ ಮತ್ತು ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ನಿರ್ಧರಿಸಿದೆ
ಹರಿದ್ವಾರ (ಡಿ.27): ಹಲವು ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಟ್ಟ ಬಳಿಕ, ಯೋಗಗುರು ಬಾಬಾ ರಾಮ್'ದೇವ್ರ ಪತಂಜಲಿ ಆಯುರ್ವೇದ ಇದೀಗ ಡೈಪರ್ ಮತ್ತು ಸ್ಯಾನಿಟರಿ ನ್ಯಾಪ್ಕಿನ್ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ನಿರ್ಧರಿಸಿದೆ.
ಮುಂದಿನ ಹಣಕಾಸು ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ 16 000 ಕೋಟಿ ರು. ಮಾರುಕಟ್ಟೆಯುಳ್ಳ ಮಕ್ಕಳ ಮತ್ತು ದೊಡ್ಡವರ ಡೈಪರ್ ಮತ್ತು ಸ್ಯಾನಿಟರಿ ನ್ಯಾಪ್ಕಿನ್ಗಳನ್ನು ಪತಂಜಲಿ ಬಿಡುಗಡೆ ಮಾಡಲಿದೆ ಎಂದು ಸಂಸ್ಥೆಯ ವಕ್ತಾರ ಎಸ್.ಕೆ. ಗುಪ್ತಾ ಹೇಳಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಕಂಪನಿಯು ಆಯುರ್ವೇದ
ಹೊರತಾದ ವಸ್ತು ಉತ್ಪಾದನೆಗೆ ಆಸಕ್ತಿ ತೋರಿದೆ.
