ಮೈಸೂರಿನಲ್ಲಿ ನಡೆಯುತ್ತಿರೋ ಮೂರು ದಿನಗಳ ಯೋಗ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಭಾಗವಹಿಸಿದ್ದ ಯೋಗ ಗುರು ಬಾಬಾ ರಾಮದೇವ್, ನಿನ್ನೆ ಸುತ್ತೂರು ಮಠಕ್ಕೆ ಭೇಟಿ ಕೊಟ್ಟರು.

ಮೈಸೂರು (ಡಿ.28): ಮೈಸೂರಿನಲ್ಲಿ ನಡೆಯುತ್ತಿರೋ ಮೂರು ದಿನಗಳ ಯೋಗ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಭಾಗವಹಿಸಿದ್ದ ಯೋಗ ಗುರು ಬಾಬಾ ರಾಮದೇವ್, ನಿನ್ನೆ ಸುತ್ತೂರು ಮಠಕ್ಕೆ ಭೇಟಿ ಕೊಟ್ಟರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಠದಲ್ಲಿ 52ನೇ ಹುಟ್ಟು ಹಬ್ಬ ಆಚರಿಸಿಕೊಂಡ ಬಾಬಾ ರಾಮದೇವ್ , ಸುತ್ತೂರು ಶ್ರೀ ದೇಶಿಕೇಂದ್ರ ಸ್ವಾಮೀಜಿ ಆಶೀರ್ವಾದ ಪಡೆದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಯೋಗ ಗುರು ಬಾಬಾ ರಾಮ್ ದೇವ್, ಪ್ರತಿದಿನವೂ ನನ್ನ ಜನ್ಮ ದಿನ. ಈ ವರ್ಷ ಸುತ್ತೂರಿನಲ್ಲಿ ಶ್ರೀಗಳ ಆಶೀರ್ವಾದ ಪಡೆಯಲು ಬಂದಿದ್ದೇನೆ ಎಂದಿದ್ದಾರೆ.

ಬಾಬಾ ರಾಮ್ ದೇವ್ ಹುಟ್ಟಿದ್ದು ರಾಮನವಮಿಯ ದಿನ ಅಲ್ಲ. ರಾಮದೇವ್ ಹುಟ್ಟಿದ್ದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯ್ ಹುಟ್ಟಿದ ದಿನ ಡಿಸೆಂಬರ್ 25 ರಂದು. ಬಾಬಾ ರಾಮ್'​ದೇವ್ 2 ದಿನಗಳ ಹಿಂದೆಯೇ ತಮ್ಮ ಹುಟ್ಟು ಹಬ್ಬ ಆಚರಿಸಬೇಕಿತ್ತು ಎಂದು ಶ್ರೀಗಳು ಹೇಳಿದರು.