ಇಂಡಿಯನ್ ಕ್ರಿಕೆಟ್‌ ಟೀಂನಲ್ಲಿ ಎಸ್‌'ಸಿ, ಎಸ್‌'ಟಿ ಗೆ ಮೀಸಲಾತಿ ನೀಡಬೇಕೆಂದು ಆಗ್ರಹಿಸಿದ್ದ ಕೇಂದ್ರ ಸಾಮಾಜಿಕ ನ್ಯಾಯ ಸಹಾಯಕ ಸಚಿವ ರಾಮ್‌ದಾಸ್‌ ಅಥವಾಲೆ ಅವರು ಇದೀಗ ಸೇನೆಯಲ್ಲೂ ಮೀಸಲಾತಿ ನೀಡುವ ಬಗ್ಗೆ ಬ್ಯಾಟ್‌ ಬೀಸಿದ್ದಾರೆ.

ನವದೆಹಲಿ(ಆ.20): ಇಂಡಿಯನ್ ಕ್ರಿಕೆಟ್‌ ಟೀಂನಲ್ಲಿ ಎಸ್‌'ಸಿ, ಎಸ್‌'ಟಿ ಗೆ ಮೀಸಲಾತಿ ನೀಡಬೇಕೆಂದು ಆಗ್ರಹಿಸಿದ್ದ ಕೇಂದ್ರ ಸಾಮಾಜಿಕ ನ್ಯಾಯ ಸಹಾಯಕ ಸಚಿವ ರಾಮ್‌ದಾಸ್‌ ಅಥವಾಲೆ ಅವರು ಇದೀಗ ಸೇನೆಯಲ್ಲೂ ಮೀಸಲಾತಿ ನೀಡುವ ಬಗ್ಗೆ ಬ್ಯಾಟ್‌ ಬೀಸಿದ್ದಾರೆ.

ಭಾರತೀಯ ಸೇನೆಯಲ್ಲೂ ಎಸ್‌ಸಿ, ಎಸ್‌ಟಿಗೆ ಮೀಸಲಾತಿ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡುತ್ತೇನೆ. ಜೊತೆಗೆ ಈ ಬಗ್ಗೆ ಪ್ರಧಾನಿ ಭೇಟಿಯಾಗಿ ಮಾತುಕತೆ ನಡೆಸುವುದಾಗಿ ಕೇಂದ್ರ ಸಚಿವ ರಾಮ್‌ದಾಸ್ ತಿಳಿಸಿದ್ದಾರೆ.

ನಾವೆಲ್ಲರೂ ದೇಶಕ್ಕಾಗಿ ಸೇವೆ ಸಲ್ಲಿಸಬೇಕೆಂಬ ಡಾ.ಅಂಬೇಡ್ಕರ್ ಅವರ ಉದ್ದೇಶವನ್ನು ನೆನೆದ ಸಚಿವರು, ಎಲ್ಲ ಯುವಕರು ಭಾರತೀಯ ಸೇನೆಗೆ ಸೇರಬೇಕೆಂದು ಪ್ರತಿಪಾದಿಸಿದರು. ಈ ಹಿಂದೆ ಕೂಡ ರಾಮ್‌ದಾಸ್ ಅವರು ಮೀಸಲಾತಿ ಬಗ್ಗೆ ಮಾತನಾಡಿದ್ದು. ಆಗ ಇಂಡಿಯನ್ ಕ್ರಿಕೆಟ್‌ ಟೀಂನಲ್ಲಿ ಮೀಸಲಾತಿ ಕೇಳಿದ್ದರು. ಇದೀಗ ಇಂಡಿಯನ್ ಆರ್ಮಿಯಲ್ಲಿ ಮೀಸಲಾತಿಗೆ ಒತ್ತಾಯಿಸಿದ್ದಾರೆ