ಎನ್‌ಡಿಎ ಜೊತೆ ಸೇರಿದರೆ ಮುಂದಿನ ಚುನಾವಣೆಯ ಬಳಿಕ ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಲು ವೈಎಸ್‌ಆರ್ ಕಾಂಗ್ರೆಸ್ ಮುಖಂಡ ಜಗನ್ಮೋಹನ್ ರೆಡ್ಡಿಗೆ ಸಹಾಯ ಮಾಡುವುದಾಗಿ  ಸಚಿವ ರಾಮದಾಸ್ ಅಠಾವಳೆ ಭರವಸೆ ನೀಡಿದ್ದಾರೆ. 

ಹೈದರಾಬಾದ್: ಎನ್‌ಡಿಎ ಜೊತೆ ಸೇರಿದರೆ ಮುಂದಿನ ಚುನಾವಣೆಯ ಬಳಿಕ ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಲು ವೈಎಸ್‌ಆರ್ ಕಾಂಗ್ರೆಸ್ ಮುಖಂಡ ಜಗನ್ಮೋಹನ್ ರೆಡ್ಡಿಗೆ ಸಹಾಯ ಮಾಡುವುದಾಗಿ ಮೋದಿ ಮಂತ್ರಿಮಂಡಲದ ಸಚಿವ ರಾಮದಾಸ್ ಅಠಾವಳೆ ಭರವಸೆ ನೀಡಿದ್ದಾರೆ.

‘ಬಿಜೆಪಿ, ನಾನು ಸ್ಥಾಪಿಸಿದ ಆರ್‌ಪಿಐ ಮತ್ತು ವೈಎಸ್‌ಆರ್ ಕಾಂಗ್ರೆಸ್ ಪಕ್ಷ ಚುನಾವಣೆ ಜೊತೆಯಾಗಿ ಸ್ಪರ್ಧಿಸಿದರೆ, ಬಿಜೆಪಿ ಮತ್ತು ಆರ್‌ಪಿಐ ಜಗನ್ ಅವರನ್ನು ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಮಾಡಲು ಸಹಕರಿಸುತ್ತದೆ’ ಎಂದು ಸಚಿವರು ಹೇಳಿದ್ದಾರೆ.