ರಾಮನಗರ : ರಾಮನಗರದಲ್ಲಿ ಚುನಾವಣಾ ಕಣದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ಚಂದ್ರಶೇಖರ್ ಅವರು ಕಣದಿಂದಲೇ ನಿವೃತ್ತಿ ಪಡೆದುಕೊಂಡಿದ್ದಾರೆ. 

ಚಂದ್ರಶೇಖರ್ ಅಸಮಾಧಾನಗೊಂಡಿದ್ದಾರೆ ಎನ್ನುವುದು ಬಿಜೆಪಿಯ ಬಹುತೇಕ ನಾಯಕರಿಗೆ ತಿಳಿದಿತ್ತು ಎನ್ನಲಾಗಿದ್ದು, ಬಿಜೆಪಿ ನಾಯಕರಾದ ಯೋಗಿಶ್ವರ್ ಮತ್ತು ಸದಾನಂದ ಗೌಡರ ನಡುವೆ ವೈಮನಸ್ಸಿಗೆ ಚಂದ್ರಶೇಖರ್ ಬಲಿಯಾದರು ಎಂದು ಬಿಜೆಪಿ ಮೂಲಗಳು ಹೇಳುತ್ತಿವೆ. 

ಚುನಾವಣಾ ವೆಚ್ಚ ಬರಿಸುವ ಸಲುವಾಗಿ ಅಸಮಾಧಾನ ಹುಟ್ಟಿಕೊಂಡಿದ್ದು, ಸದಾನಂದ ಗೌಡ ಉಸ್ತುವಾರಿ ಆಗಿರುವುದು ಯೋಗಿಶ್ವರ್'ಗೆ ಇಷ್ಟ ಇರಲಿಲ್ಲ ಎನ್ನಲಾಗುತ್ತಿದೆ.  

ಯೋಗಿಶ್ವರ್ ಮತ್ತು ಸದಾನಂದ ಗೌಡ ನಡುವೆ ಹೊಂದಾಣಿಕೆ ಇರದ ಕಾರಣ ಪಕ್ಷ ಪಾರ್ಟಿ ಫಂಡ್ ಸಹ ನೀಡಿಲ್ಲ ಎನ್ನುವ ಅಸಮಾಧಾನ ಚಂದ್ರಶೇಖರ್ ಗೆ ಇತ್ತು.  ಚುನಾವಣಾ ವೆಚ್ಚ ಬರಿಸುವ ಸಮಯ ಬಂದಾಗ ಸದಾನಂದ ಗೌಡ ಮತ್ತು ಯೋಗಿಶ್ವರ್ ಸೈಲೆಂಟ್ ಆಗಿದ್ದರು. 

ಚಂದ್ರಶೇಖರ್ ಬುಧವಾರ ಪತ್ರಿಕಾಗೋಷ್ಠಿ ಮಾಡಿ ಯೋಗಿಶ್ವರ್ ಮೇಲೆ ಆರೋಪ ಮಾಡಲು ಸಿದ್ಧವಾಗಿದ್ದು, ಚಂದ್ರಶೇಖರ್ ಅವರನ್ನು ರುದ್ರೇಶ್ ಸಮಾಧಾನ ಪಡಿಸಿದ್ದರು. ಆದರೆ ಅವರು ಪಕ್ಷ ಬಿಡುವ ಬಗ್ಗೆ ಸಣ್ಣ ಸುಳಿವನ್ನೂ ಕೂಡ ನೀಡಿರಲಿಲ್ಲ. ಇನ್ನು ಚಂದ್ರಶೇಖರ್ ಅವರು ಬಿಜೆಪಿ ಬಿಡಲು ಸ್ವಾಮೀಜಿಯೊಬ್ಬರ ಸಲಹೆಯೂ ಕಾರಣ ಎಂದು ಹೆಳಲಾಗುತ್ತಿದೆ.