ಆ ಕರಾಳ ನೆನಪು ಗೃಹ ಸಚಿವರ ಕುಟುಂಬವನ್ನ ಇನ್ನೂ ಬಿಡದಂತೆ ಕಾಡ್ತಿದೆ

ಇಡೀ ನಾಡೇ ದೀಪಾವಳಿ ಸಂಭ್ರಮದಲ್ಲಿದ್ರೆ ಗೃಹ ಸಚಿವ ರಾಮಲಿಂಗಾರೆಡ್ಡಿ ಕುಟುಂಬಕ್ಕೆ ಮಾತ್ರ ಸಂಭ್ರಮಿಸೋ ಭಾಗ್ಯವಿಲ್ಲ. ಅದರಲ್ಲೂ ಪಟಾಕಿ ಅಂದ್ರೆ ಸಾಕು ರಾಮಲಿಂಗಾರೆಡ್ಡಿ ಬೆಚ್ಚಿ ಬೀಳ್ತಾರೆ. ದೀಪಾವಳಿ ಅಂದ್ರೆ ಭಯ ಕಾಡುತ್ತೆ. ಇದಕ್ಕೂ ಕಾರಣವಿದೆ 2000 ನೇ ಇಸ್ವಿಯಲ್ಲಿ ಮನೆಯಲ್ಲಿಟ್ಟ ಪಟಾಕಿಗೆ ಬೆಂಕಿ ತಗುಲಿ ರಾಮಲಿಂಗಾರೆಡ್ಡಿ ತಂದೆ ಸಾವನ್ನಪ್ಪಿದ್ದರು.ಆ ಕರಾಳ ನೆನಪು ಗೃಹ ಸಚಿವರ ಕುಟುಂಬವನ್ನ ಇನ್ನೂ ಬಿಡದಂತೆ ಕಾಡ್ತಿದೆ.ಹಾಗಾಗಿ ಗೃಹ ಸಚಿವರ ಮನೆಯಲ್ಲಿ ದೀಪಾವಳಿ ಸಡಗರವಿಲ್ಲ. ಜೊತೆಗೆ ಪಟಾಕಿ ಹೊಡೆಯೋದು ಬೇಡ ಅನ್ನೋ ಮನವಿಯನ್ನು ಮಾಡಲು ರಾಮಲಿಂಗಾರೆಡ್ಡಿ ಮರೆಯಲ್ಲ.