ರಾಜ್ಯ ಬಿಜೆಪಿಯ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರೋಪದಲ್ಲಿ ಭಾಗವಹಿಸಿ ರಾಜ್ಯ ಸರ್ಕಾರದ ವಿರುದ್ಧ ಪ್ರಧಾನಿ ಮೋದಿ ಮಾಡಿರುವ ಟೀಕೆಗಳಿಗೆ ಗೃಹ ಸಚಿವ ರಾಮಲಿಂಗ ರೆಡ್ಡಿ ತಿರುಗೇಟು ನೀಡಿದ್ದಾರೆ.

ಬೆಂಗಳೂರು: ರಾಜ್ಯ ಬಿಜೆಪಿಯ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರೋಪದಲ್ಲಿ ಭಾಗವಹಿಸಿ ರಾಜ್ಯ ಸರ್ಕಾರದ ವಿರುದ್ಧ ಪ್ರಧಾನಿ ಮೋದಿ ಮಾಡಿರುವ ಟೀಕೆಗಳಿಗೆ ಗೃಹ ಸಚಿವ ರಾಮಲಿಂಗ ರೆಡ್ಡಿ ತಿರುಗೇಟು ನೀಡಿದ್ದಾರೆ.

‘ಮೋದಿಯವರಿಗೆ ಆ ರೀತಿ ಮಾತನಾಡುವುದಕ್ಕೆ ನಾಚಿಕೆಯಾಗಬೇಕು, ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಅಪರಾಧ ಪ್ರಮಾಣ ಬಹಳ ಹೆಚ್ಚಾಗಿದೆ. ಪಕ್ಕದಲ್ಲೇ ಯಡಿಯೂರಪ್ಪರನ್ನು ಕೂರಿಸಿಕೊಂಡು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ, ಎಂದು ರಾಮಲಿಂಗ ರೆಡ್ಡಿ ವ್ಯಂಗ್ಯವಾಡಿದ್ದಾರೆ.

ರಾಜ್ಯದ ಕಾನೂನು ಸುವ್ಯವಸ್ಥೆ ದೇಶದಲ್ಲೇ ಉತ್ತಮವಾಗಿದೆ ಎಂದು ಹೇಳಿದ ರೆಡ್ಡಿ, ಬಿಜೆಪಿಯ ಅಧ್ಯಕ್ಷರೇ ಬಂದು ಗಲಾಟೆ ಮಾಡಿ ಎಂದು ಹೇಳುತ್ತಾರೆ ಎಂದು ತಿರುಗೇಟು ನೀಡಿದ್ದಾರೆ.

ಮೋದಿಯವರು 12 ವರ್ಷ ಗುಜರಾತಿನ ಮುಖ್ಯಮಂತ್ರಿಯಾಗಿದ್ದರು, ಅವರ ಆಡಳಿತಾವಧಿಯಲ್ಲಿ ಎರಡು ಸಾವಿರ ಕೊಲೆಗಳಾಯಿತು, ಕೊರೆಗಾಂವ್’ನಲ್ಲಿ, ರಾಮ್ ರಹೀಂ ಗಲಭೆಗಳಲ್ಲಿ ಕಗ್ಗೊಲೆಗಳಾಯಿತು. ಅದೇನಾ ಆಡಳಿತ? ಎಂದು ರಾಮಲಿಂಗ ರೆಡ್ಡಿ ಪ್ರಶ್ನಿಸಿದ್ದಾರೆ.

ರಾಜ್ಯದಲ್ಲಿ, ವಿಶೇಷವಾಗಿ ಬೆಂಗಳೂರಿನಲ್ಲಿ ಅಪರಾಧ ಬಹಳ ಹೆಚ್ಚಾಗಿದ್ದು, ‘ಈಸ್ ಆಫ್ ಡೂಯಿಂಗ್ ಮರ್ಡರ್’ ಸನ್ನಿವೇಶವಿದೆ, ರಾಜ್ಯವು ಅಪರಾಧಗಳ ಸ್ವರ್ಗವಾಗಿದೆ, ಎಂದು ಮೋದಿ ವಾಗ್ದಾಳಿ ನಡೆಸಿದ್ದಾರೆ.