ಬಿಸಿಸಿಐ ಆಡಳಿತ ಅಧಿಕಾರಿಗಳ ಮಂಡಳಿಗೆ ರಾಮಚಂದ್ರ ಗುಹಾ ನಿನ್ನೆ ರಾಜಿನಾಮೆ ನೀಡಿದ್ದು, ರಾಜಿನಾಮೆ ಪತ್ರದಲ್ಲಿ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಎಂ.ಎಸ್ ಧೋನಿ, ಸುನಿಲ್ ಗವಾಸ್ಕರ್ ವಿರುದ್ಧ ಕಿಡಿಕಾರಿದ್ದಾರೆ.
ನವದೆಹಲಿ (ಜೂ.02): ಬಿಸಿಸಿಐ ಆಡಳಿತ ಅಧಿಕಾರಿಗಳ ಮಂಡಳಿಗೆ ರಾಮಚಂದ್ರ ಗುಹಾ ನಿನ್ನೆ ರಾಜಿನಾಮೆ ನೀಡಿದ್ದು, ರಾಜಿನಾಮೆ ಪತ್ರದಲ್ಲಿ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಎಂ.ಎಸ್ ಧೋನಿ, ಸುನಿಲ್ ಗವಾಸ್ಕರ್ ವಿರುದ್ಧ ಕಿಡಿಕಾರಿದ್ದಾರೆ.
ಒಂದು ಕಂಪನಿಯಲ್ಲಿ ಪಾಲನ್ನು ಹೊಂದಿದ್ದ ಧೋನಿ ಹೇಗೆ ಕ್ಯಾಪ್ಟನ್ ಆಗಿದ್ದರು ಎಂದು ಪ್ರಶ್ನಿಸಿದ್ದಾರೆ. ಅದೇ ರೀತಿ ಸುನೀಲ್ ಗವಾಸ್ಕರ್ ಪಿಎಂಜಿ ಎನ್ನುವ ಕಂಪನಿಯ ಹೆಡ್ ಆಗಿದ್ದು ಕ್ರಿಕೆಟಿಗರಾದ ಶಿಖರ್ ಧವನ್ ಕೂಡಾ ಇದರಲ್ಲಿದ್ದರು. ಆದರೂ ಸುನೀಲ್ ಗವಾಸ್ಕರ್ ಬಿಸಿಸಿಐ ಕಮೆಂಟರ್ ಆಗಿದ್ದಾರೆ. ಒಂದೋ ಅವರು ಪಿಎಂಜಿಯಿಂದ ಹೊರಬರಬೇಕು ಅಥವಾ ಬಿಸಿಸಿಐ ಕಾಮೆಂಟ್ರಿ ಮಾಡುವುದನ್ನು ನಿಲ್ಲಿಸಬೇಕು ಎಂದು ಗುಹಾರವರು ತಮ್ಮ ರಾಜಿನಾಮೆ ಪತ್ರದಲ್ಲಿ ಹೇಳಿದ್ದಾರೆ.
ಎಂ.ಎಸ್ ಧೋನಿ ಟೆಸ್ಟ್ ಗೆ ವಿದಾಯ ಹೇಳಿದ್ದರೂ ರಾಷ್ಟ್ರೀಯ ಒಪ್ಪಂದಗಳಲ್ಲಿ ಗ್ರೇಡ್ 1 ಸ್ಥಾನದಲ್ಲಿಯೇ ಮುಂದುವರೆಯಲು ಹೇಗೆ ಸಾಧ್ಯ? ಈ ಸೂಪರ್ ಸ್ಟಾರ್ ಸಂಸ್ಕೃತಿ ಅಂತ್ಯವಾಗಬೇಕು ಎಂದು ಗುಹಾರವರು ಹೇಳಿದ್ದಾರೆ.
