Asianet Suvarna News Asianet Suvarna News

ರಾಮಸೇತು ಮಾನವ ನಿರ್ಮಿತ: ಅಮೆರಿಕ ತಜ್ಞರು

ಇಂದು ಸಂಜೆ 7.30ಕ್ಕೆ ‘ಡಿಸ್ಕವರಿ ಸೈನ್ಸ್’ನಲ್ಲಿ ವಿಶೇಷ ಕಾರ್ಯಕ್ರಮ | 11 ಲಕ್ಷ ಜನರಿಂದ ಪ್ರೋಮೋ ವೀಕ್ಷಣೆ

Rama Sethu is Manmade

ನವದೆಹಲಿ: ಭಾರತ-ಶ್ರೀಲಂಕಾ ನಡುವಿನ ರಾಮಸೇತುವಿನ ಇರುವಿಕೆ ಬಗ್ಗೆ ಭಾರತದಲ್ಲಿ ಪರ-ವಿರೋಧ ಚರ್ಚೆ ನಡೆದಿರುವ ನಡುವೆಯೇ, ಡಿಸ್ಕವರಿಯ ‘ಸೈನ್ಸ್ ಚಾನೆಲ್’ನಲ್ಲಿ ಬುಧವಾರ ಸಂಜೆ 7.30ಕ್ಕೆ ರಾಮಸೇತುವಿನ ಬಗ್ಗೆ ವಿಶೇಷ ಕಾರ್ಯಕ್ರಮವೊಂದು ಪ್ರಸಾರವಾಗಲಿದೆ.

ಈ ಕಾರ್ಯಕ್ರಮದಲ್ಲಿ, ಅಮೆರಿಕದ ಪುರಾತತ್ವ ತಜ್ಞರು ರಾಮಸೇತು ಎಂಬುದು ಮಾನವನಿರ್ಮಿತ ಎಂದು ಹೇಳಿರುವ ಪ್ರಚಾರದ ಪ್ರೋಮೋ ಈಗ ಬಿಡುಗಡೆಯಾಗಿದ್ದು, ವೈರಲ್ ಆಗಿದೆ.

ರಾಮೇಶ್ವರದಿಂದ ಶ್ರೀಲಂಕಾದ ಮನ್ನಾರ್ ದ್ವೀಪದ ನಡುವೆ 50 ಕಿ.ಮೀ. ಅಂತರದಲ್ಲಿ ಈ ಸೇತುವೆ ಚಾಚಿಕೊಂಡಿದೆ. ಇದು ಮಾನವನಿರ್ಮಿತ ಎಂದು ಅಮೆರಿಕದ ಪುರಾತತ್ವ ತಜ್ಞರು ಹೇಳಿದ್ದು, ಈ ಪ್ರೋಮೋವನ್ನು 11 ಲಕ್ಷ ಜನ ವೀಕ್ಷಿಸಿದ್ದಾರೆ.

ಕೇಂದ್ರ ಸಚಿವೆ ಸ್ಮತಿ ಇರಾನಿ ಕೂಡ ಈ ಪ್ರೋಮೋವನ್ನು ಟ್ವೀಟ್ ಮಾಡಿ, ‘ಜೈ ಶ್ರೀರಾಂ’ ಎಂದು ನಮಸ್ಕಾರದ ಎರಡು ಚಿತ್ರಗಳನ್ನು ಹಾಕಿದ್ದಾರೆ.

ರಾಮಸೇತುವನ್ನು ಒಡೆದು ಸೇತುಸಮುದ್ರಂ ಹಡಗು ಯೋಜನೆಯನ್ನು ಯುಪಿಎ-1 ಸರ್ಕಾರವು 2005ರಲ್ಲಿ ಕೈಗೆತ್ತಿಕೊಳ್ಳಲು ನಿರ್ಧರಿಸಿತ್ತು. ಆದರೆ ಇದು ಶ್ರೀರಾಮನು ಲಂಕೆಗೆ ತೆರಳುವಾಗ ವಾನರ ಸೇನೆ ನಿರ್ಮಿಸಿದ್ದು, ಇದನ್ನು ಒಡೆಯಬಾರದು ಎಂದು ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಆ ಕಾರಣ ಯೋಜನೆ ನನೆಗುದಿಗೆ ಬಿದ್ದಿತ್ತು.

 

 

Follow Us:
Download App:
  • android
  • ios