ಸ್ವಘೋಷಿತ ದೇವಮಾನವ ರಾಮ್ ರಹೀಂ ಸಿಂಗ್'ನ ರಾಜಕೀಯ ಪ್ರಭಾವದ ಬಗ್ಗೆ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ, ಆತನ ಮಗಳು, ಬಿಜೆಪಿ ತನ್ನ ತಂದೆಯೊಂದಿಗೆ ಡೀಲ್ ಮಾಡಿತ್ತು, ಆದರೆ ಅದನ್ನು ಪಾಲಿಸದೇ ಮೋಸ ಮಾಡಿದೆ ಎಂದು ಆರೋಪಿಸಿದ್ದಾಳೆಂದು ಹಿಂದಿ ದೈನಿಕ ಪ್ರದೇಶ್ ಟುಡೇ ವರದಿ ಮಾಡಿದೆ.
ಚಂಡೀಗಢ: ಸ್ವಘೋಷಿತ ದೇವಮಾನವ ರಾಮ್ ರಹೀಂ ಸಿಂಗ್'ನ ರಾಜಕೀಯ ಪ್ರಭಾವದ ಬಗ್ಗೆ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ, ಆತನ ಮಗಳು, ಬಿಜೆಪಿ ತನ್ನ ತಂದೆಯೊಂದಿಗೆ ಡೀಲ್ ಮಾಡಿತ್ತು, ಆದರೆ ಅದನ್ನು ಪಾಲಿಸದೇ ಮೋಸ ಮಾಡಿದೆ ಎಂದು ಆರೋಪಿಸಿದ್ದಾಳೆಂದು ಹಿಂದಿ ದೈನಿಕ ಪ್ರದೇಶ್ ಟುಡೇ ವರದಿ ಮಾಡಿದೆ.
ಸ್ಥಳೀಯ ಸುದ್ದಿ ವಾಹಿನಿಯೊಂದಿಗೆ ನೀಡಿದ ಸಂದರ್ಶನದಲ್ಲಿ ಬಾಬಾ ರಾಮ್ ರಹೀಮ್ ಸಿಂಗ್ ಮಗಳು ಹನಿಪ್ರೀತ್ ಹಂಸ ಈ ಆರೋಪವನ್ನು ಮಾಡಿರುವುದಾಗಿ ಹೇಳಲಾಗಿದೆ.

ಕಳೆದ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯ ರಾಜ್ಯ ಹಾಗೂ ರಾಷ್ಟ್ರ ನಾಯಕರು ತಂದೆಯೊಂದಿಗೆ ಸಭೆ ನಡೆಸಿದ್ದರು. ತಂದೆಯ ಪ್ರಭಾವವಿರುವ 28 ಕ್ಷೇತ್ರಗಳಲ್ಲಿ ಮತದಾರರು ಬಿಜೆಪಿ ಪರವಾಗಿ ಮತ ಚಲಾಯಿಸುವುದಾಗಿ, ಅದಕ್ಕೆ ಪ್ರತಿಯಾಗಿ ತಂದೆಯ ವಿರುದ್ಧ ದಾಖಲಾಗಿರುವ ಸುಳ್ಳು ರೇಪ್ ಕೇಸನ್ನು ವಾಪಾಸು ಪಡೆಯುವುದಾಗಿ ಬಿಜೆಪಿ ಡೀಲ್ ಮಾಡಿತ್ತು ಎಂದು ಅವರು ಹೇಳಿದ್ದಾರೆ.
ಈ ಪ್ರಕ್ರಿಯೆಯಲ್ಲಿ ಮನೋಹರ್ ಲಾಲ್ ಖಟ್ಟರ್, ರಾಷ್ಟ್ರೀಯ ಪದಾಧಿಕಾರಿಗಳಾದ ಅನಿಲ್ ಜೈನ್ ಹಾಗೂ ಅರುಣ್ ಸಿನ್ಹಾ ಎಂಬವರ ಹೆಸರನ್ನು ಅವರು ಪ್ರಸ್ತಾಪಿಸಿದ್ದಾರೆಂದು ವರದಿಯಾಗಿದೆ.
ತನ್ನ ತಂದೆಗೆ ಅನ್ಯಾಯವಾಗಿದೆ ಎಂದಿರುವ ಹಂಸಾ, ಬಿಜೆಪಿ ನಾಯಕರು ವೋಟಿನ ಆಸೆಗೆ ನನ್ನ ತಂದೆಗೆ ದ್ರೋಹ ಬಗೆದಿದ್ದಾರೆ ಎಂದು ಕಿಡಿ ಕಾರಿದ್ದಾರೆ.
