ಸುದ್ದಿಯ ಸತ್ಯಾಸತ್ಯತೆಯನ್ನು ಪರಿಶೀಲಿಸುವುದಕ್ಕಾಗಿ, ಈ ರೀತಿ ಕಾಯಿಲೆಗಳನ್ನು ಗುಣಪಡಿಸಲು ಸಾಧ್ಯವಾಗುತ್ತದೆಯೇ? ಎಂದು ತಜ್ಞರ ಬಳಿ ಪ್ರಶ್ನಿಸಿದಾಗ, ಇಲ್ಲಿ ವರೆಗೂ ಏಡ್ಸ್‌ನಂತಹ ಕಾಯಿಲೆ ಗುಣಮುಖ ಮಾಡಲು ವಿಜ್ಞಾನಕ್ಕೆ ಸಾಧ್ಯವಾಗಿಲ್ಲ ಎಂಬುದು ಸ್ಪಷ್ಟವಾಗಿದೆ.
ಗುರ್ಮೀತ್ ರಾಮ್ ರಹೀಂ ಸಿಂಗ್ ಅತ್ಯಾಚಾರ ಪ್ರಕರಣದಲ್ಲಿ ದೋಷಿಯಾಗಿ 20 ವರ್ಷ ಜೈಲು ಸೇರಿದ್ದಾನೆ. ಆದರೆ ಆತನ ಕುರಿತಂತೆ ದಿನಕ್ಕೊಂದು ಹೊಸ ಹೊಸ ಕತೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಡಲ್ಪಡುತ್ತಿವೆ.
ರಾಮ್ ರಹೀಂ ಎಚ್ಐವಿ ಮತ್ತು ಕ್ಯಾನ್ಸರ್ನಂತಹ ಗಂಭೀರ ಮಾರಣಾಂತಿಕ ಕಾಯಿಲೆಗಳನ್ನೂ ಗುಣಮುಖ ಮಾಡುತ್ತಿದ್ದನೆಂದು ಇದೀಗ ಸುದ್ದಿಯಾಗಿದೆ. ಅದೂ ಆತ ‘ರಾಮ ರಾಮ’ ಎಂದು ಪಠಣ ಮಾಡಿಸುವ ಮೂಲಕ ಕಾಯಿಲೆಗಳನ್ನು ಗುಣಮುಖ ಮಾಡುತ್ತಿದ್ದ ಎನ್ನಲಾಗಿದೆ. ಸುದ್ದಿಯ ಸತ್ಯಾಸತ್ಯತೆಯನ್ನು ಪರಿಶೀಲಿಸುವುದಕ್ಕಾಗಿ, ಈ ರೀತಿ ಕಾಯಿಲೆಗಳನ್ನು ಗುಣಪಡಿಸಲು ಸಾಧ್ಯವಾಗುತ್ತದೆಯೇ? ಎಂದು ತಜ್ಞರ ಬಳಿ ಪ್ರಶ್ನಿಸಿದಾಗ, ಇಲ್ಲಿ ವರೆಗೂ ಏಡ್ಸ್ನಂತಹ ಕಾಯಿಲೆ ಗುಣಮುಖ ಮಾಡಲು ವಿಜ್ಞಾನಕ್ಕೆ ಸಾಧ್ಯವಾಗಿಲ್ಲ ಎಂಬುದು ಸ್ಪಷ್ಟವಾಗಿದೆ.
ಏಡ್ಸ್ ಗುಣಮುಖ ಮಾಡುವವರಿಗೆ ನೊಬೆಲ್ ಪ್ರಶಸ್ತಿ ನೀಡಲಾಗುತಿತ್ತು. ರಾಮ್ ರಹೀಂಗೆ ಆ ಪುರಸ್ಕಾರ ಸಿಕ್ಕಿಲ್ಲವೆಂದಾದಲ್ಲಿ, ಆತ ಸುಳ್ಳು ಹೇಳುತ್ತಿದ್ದಾನೆ ಎಂದರ್ಥ ಎಂದು ತಜ್ಞರು ಹೇಳಿದ್ದಾರೆ. ಮೂಕ ವ್ಯಕ್ತಿಗಳಿಗೆ ‘ಮ್ಯಾಜಿಕ್ ನೀರು’ ಕುಡಿಸಿ ಧ್ವನಿ ಬರುವಂತೆ ರಾಮ್ ರಹೀಂ ಮಾಡುತ್ತಿದ್ದನೆಂದೂ ಆತನ ಬೆಂಬಲಿಗರು ಪ್ರತಿಪಾದಿಸುತ್ತಾರೆ. ಆದರೆ ವಿಜ್ಞಾನಿಗಳು ಇಂತಹ ಸಾಧ್ಯತೆಯನ್ನೂ ತಳ್ಳಿ ಹಾಕಿದ್ದಾರೆ. ತನ್ನನ್ನು ಕಣ್ಮುಚ್ಚಿ ಹಿಂಬಾಲಿಸುವ ಭಕ್ತರನ್ನು ರಾಮ್ ರಹೀಂ ಇಂತಹ ಸುಳ್ಳು ಪ್ರತಿಪಾದನೆಗಳಿಂದ ಮೂರ್ಖರನ್ನಾಗಿಸಿದ್ದಾನೆ ಎಂದು ತಜ್ಞರು ಹೇಳಿದ್ದಾರೆ. ಹೀಗಾಗಿ ರಾಮ್ ರಹೀಂ ಮಾರಣಾಂತಿಕ ಕಾಯಿಲೆಗಳನ್ನು ಗುಣಮುಖ ಮಾಡಿದ್ದ ಎಂಬ ಸುದ್ದಿ ಸುಳ್ಳು ಎಂದು ಸಾಬೀತಾಗಿದೆ.
(ಕನ್ನಡಪ್ರಭ)
