ಸ್ವಯಂಘೋಷಿತ ದೇವಮಾನವ ಬಾಬಾ ರಾಮ್ ರಹೀಂ ಅತ್ಯಾಚಾರ ಕೇಸಲ್ಲಿ ಈಗಾಗಲೇ ಜೈಲು ಪಾಲಾಗಿದ್ದಾರೆ. ಇವರು ಜೈಲು ಸೇರುತ್ತಿದ್ದಂತೆಯೇ ತನ್ನ ದತ್ತುಮಗಳು ಎನ್ನುತ್ತಿದ್ದ ಹನಿಪ್ರೀತ್ ಹಾಗೂ ಬಾಬಾ ನಡುವಿನ ಸಂಬಂಧಗಳ ಕುರಿತಾಗಿ ಹತ್ತು ಹಲವು ವದಂತಿಗಳು ಹಬ್ಬಿವೆ. ಖುದ್ದು ಹನಿಪ್ರೀತ್ ಮಾಜಿ ಪತಿ ವಿಶ್ವಾಸ್ ಗುಪ್ತಾ ಇಬ್ಬರ ನಡುವಿನ ಅಕ್ರಮ ಸಂಬಂಧ ಇತ್ತೆಂದು ಆರೋಪಿಸಿದ್ದಾರೆ. ಇದೀಗ ಬಾಲಿವುಡ್'ನ ವಿವಾದಿತ ನಟಿ ರಾಖಿ ಸಾವಂತ್ ಕೂಡಾ ಇಂತಹುದೇ ಒಂದು ಆರೋಪ ಮಾಡಿದ್ದಾರೆ.

ಮುಂಬೈ(ಸೆ.25): ಸ್ವಯಂಘೋಷಿತ ದೇವಮಾನವ ಬಾಬಾ ರಾಮ್ ರಹೀಂ ಅತ್ಯಾಚಾರ ಕೇಸಲ್ಲಿ ಈಗಾಗಲೇ ಜೈಲು ಪಾಲಾಗಿದ್ದಾರೆ. ಇವರು ಜೈಲು ಸೇರುತ್ತಿದ್ದಂತೆಯೇ ತನ್ನ ದತ್ತುಮಗಳು ಎನ್ನುತ್ತಿದ್ದ ಹನಿಪ್ರೀತ್ ಹಾಗೂ ಬಾಬಾ ನಡುವಿನ ಸಂಬಂಧಗಳ ಕುರಿತಾಗಿ ಹತ್ತು ಹಲವು ವದಂತಿಗಳು ಹಬ್ಬಿವೆ. ಖುದ್ದು ಹನಿಪ್ರೀತ್ ಮಾಜಿ ಪತಿ ವಿಶ್ವಾಸ್ ಗುಪ್ತಾ ಇಬ್ಬರ ನಡುವಿನ ಅಕ್ರಮ ಸಂಬಂಧ ಇತ್ತೆಂದು ಆರೋಪಿಸಿದ್ದಾರೆ. ಇದೀಗ ಬಾಲಿವುಡ್'ನ ವಿವಾದಿತ ನಟಿ ರಾಖಿ ಸಾವಂತ್ ಕೂಡಾ ಇಂತಹುದೇ ಒಂದು ಆರೋಪ ಮಾಡಿದ್ದಾರೆ.

ಅತ್ಯಾಚಾರ ಕೇಸಲ್ಲಿ ಜೈಲುಪಾಲಾಗಿರುವ ಡೇರಾ ಸಚ್ಚಾ ಸೌದಾ ಪಂಥದ ಧರ್ಮಗುರು ಬಾಬಾ ರಾಮ್ ರಹೀಂ ಸಿಂಗ್‌ನನ್ನು ಒಮ್ಮೆ ನಾನು ಭೇಟಿ ಮಾಡಿದ್ದೆ. ಆದರೆ ಬಾಬಾನ ಹತ್ತಿರ ಹೋಗಲು ನನ್ನನ್ನು ಆತನ ಸಾಕುಮಗಳು ಹನಿಪ್ರೀತ್ ಬಿಡಲೇ ಇಲ್ಲ. ಎಲ್ಲಿ ಬಾಬಾನನ್ನು ತಾನು ಮದುವೆಯಾಗಿಬಿಡುತ್ತೀನೋ ಎಂಬ ಭಯ ಆಕೆಯಲ್ಲಿ ಕಾಡಿತ್ತು ಎಂದು ಬಾಲಿವುಡ್‌ನ ವಿವಾದಿತ ನಟಿ ರಾಖಿ ಸಾವಂತ್ ಹೇಳಿದ್ದಾಳೆ.

ಇದೇ ವೇಳೆ, ಬಾಬಾನ ಸುತ್ತ ಅರೆಬೆತ್ತಲೆ ಹುಡುಗಿಯರು ಇದ್ದುದು ನನಗೆ ಅಚ್ಚರಿ ಮೂಡಿಸಿತೆಂದೂ ಆಕೆ ಹೇಳಿದ್ದಾಳೆ.