ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ 2014 ರಲ್ಲಿ ಸಲ್ಲಿಸಿದ್ದ ವಿಕಲಾಂಗ ವ್ಯಕ್ತಿಗಳ ಹಕ್ಕು ಮಸೂದೆಯನ್ನು ರಾಜ್ಯಸಭೆ ಇಂದು ಅಂಗೀಕರಿಸಿದೆ.

ನವದೆಹಲಿ (ಡಿ.14): ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ 2014 ರಲ್ಲಿ ಸಲ್ಲಿಸಿದ್ದ ವಿಕಲಾಂಗ ವ್ಯಕ್ತಿಗಳ ಹಕ್ಕು ಮಸೂದೆಯನ್ನು ರಾಜ್ಯಸಭೆ ಇಂದು ಅಂಗೀಕರಿಸಿದೆ.

ಸದನದ ಶೂನ್ಯ ವೇಳೆಯಲ್ಲಿ ಈ ಮಸೂದೆಯನ್ನು ಅಂಗೀಕರಿಸಲಾಗಿದೆ. ವಿಕಲ ಚೇತನರ ಭದ್ರತೆ ಹಾಗೂ ಹಕ್ಕುಗಳನ್ನು ಇನ್ನಷ್ಟು ಬಲಪಡಿಸುವುದು ಈ ಮಸೂದೆಯ ಉದ್ದೇಶವಾಗಿದೆ. ಅಂತಹ ವ್ಯಕ್ತಿಗಳಿಗೆ ತಾರತಮ್ಯ ತೋರಿದರೆ 2 ವರ್ಷ ಜೈಲು

ಶಿಕ್ಷೆ ಮತ್ತು ಗರಿಷ್ಟ 5 ಲಕ್ಷದವರೆಗೆ ದಂಡವನ್ನು ವಿಧಿಸಲಾಗುವುದು ಎಂದು ಈ ಮಸೂದೆಯಲ್ಲಿ ಹೇಳಲಾಗಿದೆ. ಈ ಮಸೂದೆಗೆ 120 ತಿದ್ದುಪಡಿಯನ್ನು ಮಾಡಲಾಗಿದೆ.