ಈ ಮೂವರು ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲಾಗಿದ್ದು, ಇದೀಗ ಅಧಿಕೃತ ಘೊಷಣೆಯಷ್ಟೇ ಭಾಕಿಯುಳಿದಿದೆ ಎಂದು ಉನ್ನತ ಮೂಲಗಳು ಸುವರ್ಣನ್ಯೂಸ್'ಗೆ ತಿಳಿಸಿವೆ.

ಬೆಂಗಳೂರು(ಮಾ.11): ಮುಂಬರುವ ರಾಜ್ಯಸಭಾ ಚುನಾವಣೆಗೆ ಕಾಂಗ್ರೆಸ್ ಮೂವರು ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿದ್ದು, ಎಲ್. ಹನುಮಂತಯ್ಯ, ನಸೀರ್ ಹುಸೇನ್ ಬಳ್ಳಾರಿ, ಜಿಸಿ ಚಂದ್ರಶೇಖರ್ ಹೆಸರನ್ನು ಅಂತಿಮಗೊಳಿಸಲಾಗಿದೆ.

ಈ ಮೂವರು ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲಾಗಿದ್ದು, ಇದೀಗ ಅಧಿಕೃತ ಘೊಷಣೆಯಷ್ಟೇ ಭಾಕಿಯುಳಿದಿದೆ ಎಂದು ಉನ್ನತ ಮೂಲಗಳು ಸುವರ್ಣನ್ಯೂಸ್'ಗೆ ತಿಳಿಸಿವೆ.

ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಸೋಮವಾರ ಕೊನೆಯ ದಿನವಾಗಿದೆ. ಮಾರ್ಚ್ 23ರಂದು ರಾಜ್ಯಸಭಾ ಚುನಾವಣೆ ನಡೆಯಲಿದೆ.

ಕಾಂಗ್ರೆಸ್'ನಿಂದ ಪ್ರಬಲ ಲಿಂಗಾಯತ ನಾಯಕ ಶಾಮನೂರು ಶಿವಶಂಕರಪ್ಪ, ಕೈಲಾಶ್ ನಾಥ್ ಪಾಟೀಲ್ ಹೆಸರು ಕೇಳಿಬಂದಿತ್ತು.