ರಾಜ್ಯಸಭೆಯಲ್ಲೂ ಪಾಸಾಯ್ತು ದೇಶಭ್ರಷ್ಟ ಆರ್ಥಿಕ ಅಪರಾಧ ನಿಯಂತ್ರಣ ವಿಧೇಯಕ

First Published 25, Jul 2018, 9:08 PM IST
Rajya Sabha passes Economic Offenders Bill 2018
Highlights

ದೇಶ ಕೊಳ್ಳೆ ಹೊಡೆಯುವ ದುಷ್ಟರಿಗೆ ಉಳಿಗಾಲವಿಲ್ಲ

ರಾಜ್ಯಸಭೆಯಲ್ಲಿ ಪಾಸಾಯ್ತು ಆರ್ಥಿಕ ಅಪರಾಧ ವಿಧೇಯಕ

ಧ್ವನಿಮತದ ಮೂಲಕ ವಿಧೇಯಕ ಅಂಗೀಕಾರ

ದೇಶಭ್ರಷ್ಟರ ಆಸ್ತಿ ಜಪ್ತಿಗೆ ವಿಧೇಯಕದಲ್ಲಿ ಅಧಿಕಾರ

ನವದೆಹಲಿ(ಜು.25): ದೊಡ್ಡ ಆರ್ಥಿಕ ಅಪರಾಧಿಗಳನ್ನು ಮಟ್ಟಹಾಕುವ ದೇಶಭ್ರಷ್ಟ ಆರ್ಥಿಕ ಅಪರಾಧ ನಿಯಂತ್ರಣ ವಿಧೇಯಕ 2018ಕ್ಕೆ ರಾಜ್ಯಸಭೆ ಅಂಗೀಕಾರ ನೀಡಿದೆ. ಜುಲೈ 19ರಂದು ಲೋಕಸಭೆಯಲ್ಲಿ ಪಾಸ್ ಆಗಿದ್ದ ದೇಶಭ್ರಷ್ಟ ಆರ್ಥಿಕ ಅಪರಾಧ ನಿಯಂತ್ರಣ ವಿಧೇಯಕವನ್ನು ಇಂದು ರಾಜ್ಯಸಭೆಯಲ್ಲಿ ಧ್ವನಿಮತದ ಮೂಲಕ ಅಂಗೀಕರಿಸಲಾಯಿತು.

ಇತ್ತೀಚಿಗೆ ಆರ್ಥಿಕ ಅಪರಾಧ ಎಸಗಿ ದೇಶದಿಂದ ಪರಾರಿಯಾಗಿ ಕಾನೂನು ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳುವ ಪ್ರವೃತ್ತಿ ಹೆಚ್ಚುತ್ತಿದೆ. ಸದ್ಯದ ಕಾನೂನಿಂದ ಅದನ್ನು ತಡೆಯಲು ಸಾಧ್ಯವಿಲ್ಲ. ಹೀಗಾಗಿ ಹೊಸ ಕಾನೂನು ಜಾರಿಗೆ ತರಲಾಗುತ್ತಿದೆ ಎಂದು ಹಣಕಾಸು ಸಚಿವ ಪಿಯೂಶ್ ಗೋಯಲ್ ಅವರು ಹೇಳಿದ್ದಾರೆ.

ಪ್ರಸ್ತುತ ಅಪರಾಧ ಕಾನೂನು ಆರ್ಥಿಕ ಅಪರಾಧಿಗಳ ಆಸ್ತಿ ಜಪ್ತಿ ಮಾಡಲು ಸಾಧ್ಯವಿಲ್ಲ. ಆದರೆ ಈ ವಿಧೇಯಕ ಆಸ್ತಿ ಮತ್ತು ಸಂಪತ್ತನ್ನು ಜಪ್ತಿ ಮಾಡುವ ಅಧಿಕಾರ ನೀಡುತ್ತದೆ ಎಂದು ಸಚಿವರು ಸದನಕ್ಕೆ ಮಾಹಿತಿ ನೀಡಿದರು.
ಆರ್ಥಿಕ ಅಪರಾಧ ಎಸಗಿ ದೇಶದಿಂದ ಪರಾರಿಯಾಗಿ ತಮ್ಮ ವಿರುದ್ಧದ ಕಾನೂನು ಪ್ರಕ್ರಿಯೆಗಳನ್ನು ನಿರಸನಗೊಳಿಸುವವರ ಯತ್ನಗಳನ್ನು ತಡೆದು ಅವರನ್ನು ಕಾನೂನು ಪ್ರಕಾರ ಶಿಕ್ಷಿಸುವುದು ಈ ಮಸೂದೆಯ ಉದ್ದೇಶವಾಗಿದೆ ಎಂದು ಗೋಯಲ್ ಹೇಳಿದ್ದಾರೆ.

ಈ ಹೊಸ ಕಾನೂನಿನಡಿ ಜಾರಿ ನಿರ್ದೇಶನಾಲಯ ಆರ್ಥಿಕ ಅಪರಾಧಗಳ ತನಿಖೆ ನಡೆಸಲಿದ್ದು, ತನಿಖಾ ಸಂಸ್ಥೆಗೆ ಹೆಚ್ಚಿನ ಅಧಿಕಾರ ದೊರೆಯಲಿದೆ ಎಂದು ಸಚಿವರು ತಿಳಿಸಿದ್ದಾರೆ.

loader