ರಾಜ್ಯಸಭಾ ಚುನಾವಣೆಗೆ ಶುರುವಾಗಿದೆ ಕ್ಷಣಗಣನೆ; ಯಾರ್ಯಾರಿದ್ದಾರೆ ಅಭ್ಯರ್ಥಿಗಳು?

First Published 23, Mar 2018, 7:35 AM IST
Rajya Sabha Election Today
Highlights

ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯಲಿರೋ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಬೆಳಗ್ಗೆ 9 ಗಂಟೆಗೆ ಮತದಾನ ಆರಂಭವಾಗಲಿದೆ.

ಬೆಂಗಳೂರು (ಮಾ. 23):  ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯಲಿರೋ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಬೆಳಗ್ಗೆ 9 ಗಂಟೆಗೆ ಮತದಾನ ಆರಂಭವಾಗಲಿದೆ.

ರಾಜ್ಯಸಭೆಯ 4 ಸ್ಥಾನಗಳಿಗೆ ಮತದಾನ ನಡೆಯಲಿದ್ದು , ಮೂರು ಪಕ್ಷಗಳ ಐವರು ಅಭ್ಯರ್ಥಿಗಳು ಅಖಾಡದಲ್ಲಿದ್ದಾರೆ.   ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಕಾಂಗ್ರೆಸ್‌ನ ಎಲ್. ಹನುಮಂತಯ್ಯ, ನಾಸೀರ್ ಹುಸೇನ್, ಜೆ.ಸಿ. ಚಂದ್ರಶೇಖರ್ ಅಖಾಡದಲ್ಲಿದ್ರೆ, ಬಿಜೆಪಿಯ ರಾಜೀವ್ ಚಂದ್ರಶೇಖರ್ ಹಾಗೂ ಜೆಡಿಎಸ್‌ನ ಬಿ.ಎಂ. ಫಾರೂಕ್ ಕಣದಲ್ಲಿದ್ದಾರೆ. ವಿಧಾನಸೌಧದ ಮೊದಲನೇ ಮಹಡಿಯಲ್ಲಿರುವ ಕೊಠಡಿ ಸಂಖ್ಯೆ 106 ರಲ್ಲಿ ಮತದಾನ ನಡೆಯಲಿದೆ. ಸಂಜೆ ವೇಳೆಗೆ ಫಲಿತಾಂಶ ಪ್ರಕಟವಾಗಲಿದೆ. ಒಟ್ಟೂ 16 ರಾಜ್ಯಗಳಿಂದ ರಾಜ್ಯಸಭೆಯ 58 ಸ್ಥಾನಗಳಿಗೆ ಇಂದು ಚುನಾವಣೆ ನಡೆಯಲಿದೆ . 

ರಾಜ್ಯಸಭಾ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳ ವಿವರ

ರಾಜೀವ್ ಚಂದ್ರಶೇಖರ್ 
53 ವರ್ಷದ ಖ್ಯಾತ ಉದ್ಯಮಿ.
ಎರಡು ಬಾರಿ ಪಕ್ಷೇತರ ರಾಜ್ಯಸಭಾ ಸದಸ್ಯರಾಗಿ ಸೇವೆ.
ಬಿಜೆಪಿಯ ಅಧಿಕೃತ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕೆ
ರಾಜ್ಯಸಭಾ ಸದಸ್ಯರಾಗಿ 12 ವರ್ಷಗಳ ಸಾರ್ಥಕ ಸೇವೆ.
ಸೈನಿಕರ ಕಲ್ಯಾಣ, ಪರಿಸರ ಸಂರಕ್ಷಣೆ ಕ್ಷೇತ್ರದಲ್ಲಿ ಸೇವೆ.
ಕೆರೆ ಒತ್ತುವರಿದಾರರ ವಿರುದ್ಧ ನಿರಂತರ ಕಾನೂನು ಹೋರಾಟ
ಉತ್ತರಕರ್ನಾಟಕದ ಪ್ರವಾಹ ಪೀಡಿತ ಗ್ರಾಮ ದತ್ತು ಪಡೆದು ಅಭಿವೃದ್ಧಿ.

ಡಾ.ಸೈಯದ್ ನಾಸಿರ್ ಹುಸೇನ್ 
ಎಐಸಿಸಿ ವಕ್ತಾರರಾಗಿ ಕಾರ್ಯ ನಿರ್ವಹಣೆ
ಯುವ ಕಾಂಗ್ರೆಸ್ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಜವಾಬ್ದಾರಿ
ಜೆಎನ್ ಯು ನಲ್ಲಿ ವಿದ್ಯಾರ್ಥಿ ಮುಖಂಡರಾಗಿ ಕಾರ್ಯ ನಿರ್ವಹಣೆ
ಕೇಂದ್ರ ನಾಯಕರ ಜೊತೆಗೆ ಉತ್ತಮ ಸಂಬಂಧ

ಎಲ್ ಹನುಮಂತಯ್ಯ
ಸದ್ಯ ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ.
ಮಾಜಿ ವಿಧಾನಪರಿಷತ್ ಸದಸ್ಯರಾಗಿ ಸೇವೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಕಾರ್ಯನಿರ್ವಹಣೆ
ಸಾಹಿತಿಯಾಗಿ, ದಲಿತಪರ ಹೋರಾಟಗಾರರಾಗಿ ಪರಿಚಿತ.

ಜಿ.ಸಿ.ಚಂದ್ರಶೇಖರ್ 
ರಾಜ್ಯ ಕಾಂಗ್ರೆಸ್ ನ ನಿಷ್ಟಾವಂತ ಕಾರ್ಯಕರ್ತ.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಣೆ.
ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರ ರಾಜಕೀಯ ಕಾರ್ಯದರ್ಶಿ.
ಕರ್ನಾಟಕ ನಗರ ನೀರು ಸರಬರಾಜು ಮಂಡಳಿಯ ಅಧ್ಯಕ್ಷರಾಗಿ ಸೇವೆ.


ಬಿ.ಎಂ.ಫಾರೂಖ್ 
50 ವರ್ಷದ ಉದ್ಯಮಿ.
ಬಿಲ್ಡರ್ಸ್ ಮತ್ತು ಡೆವಲಪರ್,
ಪವನ ವಿದ್ಯುತ್ ಕ್ಷೇತ್ರದಲ್ಲಿ ಯಶಸ್ವಿ ಉದ್ಯಮಿ.
ಜೆಡಿಎಸ್ ಮೂಲಕ ರಾಜಕಾರಣಕ್ಕೆ ಪ್ರವೇಶ.
2016 ರಲ್ಲಿ ರಾಜ್ಯಸಭಾ ಚುನಾವಣೆಯಲ್ಲಿ ಸೋಲು
ಶಾಸಕ ಬಿ.ಎ.ಮೋಯಿದ್ದೀನ್ ಬಾವಾ ಸಹೋದರ


 

loader