Asianet Suvarna News Asianet Suvarna News

ರಾಜ್ಯಸಭೆಗೆ ಕಾಂಗ್ರೆಸ್ ಮೂರನೇ ಟಿಕೆಟ್‌ ಕಗ್ಗಂಟು

ರಾಜ್ಯ​ಸಭಾ ಚುನಾ​ವ​ಣೆಗೆ ಸೀಮಿ​ತ​ವಾ​ದಂತೆ ಜೆಡಿ​ಎಸ್‌ ಮೈತ್ರಿ ಬೇಡ ಹಾಗೂ ಚುನಾ​ವಣೆ ಸಾಮಿಪ್ಯದ ಹಿನ್ನೆ​ಲೆ​ಯಲ್ಲಿ ಹೊರ​ಗಿ​ನ​ವ​ರನ್ನು ಅಭ್ಯ​ರ್ಥಿ​ಯ​ನ್ನಾಗಿ ಆಯ್ಕೆ ಮಾಡು​ವುದು ಬೇಡ ಎಂಬ ಮುಖ್ಯ​ಮಂತ್ರಿ ಸಿದ್ದ​ರಾ​ಮಯ್ಯ ಅವರ ಬಿಗಿ​ಪ​ಟ್ಟಿ​ನಿಂದಾಗಿ ಕಾಂಗ್ರೆ​ಸ್‌ನ ರಾಜ್ಯ​ಸಭಾ ಅಭ್ಯರ್ಥಿ ಆಯ್ಕೆ ಕಗ್ಗಂಟಾ​ಗಿ​ದೆ. ಈ ಹಿನ್ನೆ​ಲೆ​ಯಲ್ಲಿ ರಾಜ್ಯ ನಾಯ​ಕ​ತ್ವ​ದಿಂದ ಅರ್ಹರ ಪಟ್ಟಿಪಡೆ​ದಿ​ರುವ ಹೈಕ​ಮಾಂಡ್‌ ಪರಿ​ಶೀ​ಲನೆ ನಡೆಸಿ ಹೆಸರು ಅಂತಿ​ಮ​ಗೊ​ಳಿ​ಸು​ವು​ದಾಗಿ ಸೂಚಿ​ಸಿದೆ ಎಂದು ತಿಳಿ​ದು​ಬಂದಿ​ದೆ.

Rajya Sabha Election News

ನವದೆಹ​ಲಿ : ರಾಜ್ಯ​ಸಭಾ ಚುನಾ​ವ​ಣೆಗೆ ಸೀಮಿ​ತ​ವಾ​ದಂತೆ ಜೆಡಿ​ಎಸ್‌ ಮೈತ್ರಿ ಬೇಡ ಹಾಗೂ ಚುನಾ​ವಣೆ ಸಾಮಿಪ್ಯದ ಹಿನ್ನೆ​ಲೆ​ಯಲ್ಲಿ ಹೊರ​ಗಿ​ನ​ವ​ರನ್ನು ಅಭ್ಯ​ರ್ಥಿ​ಯ​ನ್ನಾಗಿ ಆಯ್ಕೆ ಮಾಡು​ವುದು ಬೇಡ ಎಂಬ ಮುಖ್ಯ​ಮಂತ್ರಿ ಸಿದ್ದ​ರಾ​ಮಯ್ಯ ಅವರ ಬಿಗಿ​ಪ​ಟ್ಟಿ​ನಿಂದಾಗಿ ಕಾಂಗ್ರೆ​ಸ್‌ನ ರಾಜ್ಯ​ಸಭಾ ಅಭ್ಯರ್ಥಿ ಆಯ್ಕೆ ಕಗ್ಗಂಟಾ​ಗಿ​ದೆ. ಈ ಹಿನ್ನೆ​ಲೆ​ಯಲ್ಲಿ ರಾಜ್ಯ ನಾಯ​ಕ​ತ್ವ​ದಿಂದ ಅರ್ಹರ ಪಟ್ಟಿಪಡೆ​ದಿ​ರುವ ಹೈಕ​ಮಾಂಡ್‌ ಪರಿ​ಶೀ​ಲನೆ ನಡೆಸಿ ಹೆಸರು ಅಂತಿ​ಮ​ಗೊ​ಳಿ​ಸು​ವು​ದಾಗಿ ಸೂಚಿ​ಸಿದೆ ಎಂದು ತಿಳಿ​ದು​ಬಂದಿ​ದೆ.

ರಾಜ್ಯ​ಸಭೆ ಅಭ್ಯರ್ಥಿ ಆಯ್ಕೆ ಬಗ್ಗೆ ತಮ್ಮ ನಿಲುವು ತಿಳಿ​ಸಲು ಹಾಗೂ ಪಟ್ಟಿ ಅಖೈ​ರು​ಗೊ​ಳಿ​ಸಲು ಮುಖ್ಯ​ಮಂತ್ರಿ ಸಿದ್ದ​ರಾ​ಮಯ್ಯ ಹಾಗೂ ಕೆಪಿ​ಸಿಸಿ ಅಧ್ಯಕ್ಷ ಡಾ.ಜಿ. ಪರ​ಮೇ​ಶ್ವರ್‌ ದೆಹ​ಲಿ​ಯಲ್ಲಿ ಮಂಗ​ಳ​ವಾರ ಎಐ​ಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವ​ರೊಂದಿಗೆ ಸಭೆ ನಡೆ​ಸಿ​ದರು. ಇದಾದ ನಂತರ ರಾಜ್ಯ ನಾಯ​ಕ​ರಿ​ಬ್ಬರೂ ಉಸ್ತು​ವಾರಿ ವೇಣು​ಗೋ​ಪಾಲ್‌ ಅವ​ರೊಂದಿಗೆ ಪ್ರತ್ಯೇಕವಾಗಿ ಮಾತು​ಕತೆ ನಡೆ​ಸಿ​ದರು. ಈ ಸಂದ​ರ್ಭ​ದಲ್ಲಿ ಮುಖ್ಯ​ಮಂತ್ರಿ ಸಿದ್ದ​ರಾ​ಮಯ್ಯ ಅವರು ರಾಜ್ಯ​ಸ​ಭೆಗೆ ಪಕ್ಷ​ದಿಂದ ಮೂರು ಅಭ್ಯ​ರ್ಥಿ​ಗ​ಳನ್ನು ಕಣ​ಕ್ಕಿ​ಳಿ​ಸ​ಬ​ಹುದು. ಈ ಚುನಾ​ವ​ಣೆಗೆ ಸೀಮಿ​ತ​ವಾ​ದಂತೆ ಜೆಡಿ​ಎಸ್‌ ಜತೆ ಮೈತ್ರಿಯ ಅಗ​ತ್ಯ​ವಿಲ್ಲ.

ತಮ್ಮ ಅಭ್ಯ​ರ್ಥಿ​ಯನ್ನು ಬೆಂಬ​ಲಿ​ಸ​ಬೇಕು ಎಂಬ ಆ ಪಕ್ಷದ ಒತ್ತಾ​ಯ​ವನ್ನು ಪರಿ​ಗ​ಣಿ​ಸ​ಬೇ​ಕಿಲ್ಲ ಎಂದು ವಾದಿ​ಸಿ​ದರು ಎನ್ನ​ಲಾ​ಗಿದೆ. ಆದರೆ, ಜಾತ್ಯ​ತೀತ ಪಕ್ಷ​ಗ​ಳನ್ನು ಈ ರೀತಿ ದೂರ ತಳ್ಳು​ವ ಮುನ್ನ ಈ ಬಗ್ಗೆ ಮರುಪರಿ​ಶೀ​ಲನೆ ನಡೆ​ಸುವ ಅಗ​ತ್ಯ​ವಿದೆ ಎಂಬ ಕಾರ​ಣಕ್ಕೆ ಈ ಬಗ್ಗೆ ನಿರ್ಧಾ​ರ​ವನ್ನು ಹೈಕ​ಮಾಂಡ್‌ ಪ್ರಕ​ಟಿ​ಸ​ಲಿಲ್ಲ ಎಂದು ಮೂಲ​ಗಳು ಹೇಳಿ​ವೆ.

ಅಲ್ಲದೆ, ಲೋಕ​ಸಭಾ ಚುನಾ​ವ​ಣೆಯ ಹಿನ್ನೆ​ಲೆ​ಯಲ್ಲಿ ರಾಷ್ಟ್ರೀಯ ಹಾಗೂ ಜಾಗ​ತಿಕ ಮಟ್ಟ​ದಲ್ಲಿ ತಂತ್ರ​ಗಾ​ರಿ​ಕೆ ರೂಪಿ​ಸಲು ಕಾಂಗ್ರೆ​ಸ್‌ಗೆ ಅಗ​ತ್ಯ​ವಿ​ರುವ ಸ್ಯಾಮ್‌ ಪಿತ್ರೋಡಾ ಅವ​ರನ್ನು ಕರ್ನಾ​ಟ​ಕ​ದಿಂದ ರಾಜ್ಯ​ಸ​ಭೆಗೆ ಕಳು​ಹಿ​ಸುವ ಸಾಧ್ಯ​ತೆ​ಯನ್ನು ಪರಿ​ಶೀ​ಲಿ​ಸು​ವಂತೆ ಸೂಚಿ​ಸಿದೆ ಎನ್ನ​ಲಾ​ಗಿದೆ.

ಆದರೆ, ರಾಜ್ಯ ಚುನಾ​ವಣೆ ದೃಷ್ಟಿ​ಯಿಂದ ಹೊರ​ಗಿ​ನ​ವರ ಬದ​ಲಾಗಿ ರಾಜ್ಯ​ದ​ವ​ರಿಗೇ ರಾಜ್ಯಸಭೆಯ ನೀಡಿ​ದರೆ ಉತ್ತಮ ಎಂದು ಮುಖ್ಯಮಂತ್ರಿ ಸಿದ್ದ​ರಾ​ಮಯ್ಯ ಸಭೆ​ಯಲ್ಲಿ ಹೇಳಿ​ದರು ಎನ್ನ​ಲಾ​ಗಿದೆ. ಹೀಗಾಗಿ, ಅಭ್ಯ​ರ್ಥಿ​ಗ​ಳನ್ನು ಅಖೈ​ರು​ಗೊ​ಳಿ​ಸ​ಲಾ​ಗಿಲ್ಲ. ರಾಹುಲ್‌ ಗಾಂಧಿ ಅವ​ರೊಂದಿಗಿನ ಸಭೆಯ ನಂತರ ರಾಜ್ಯ ಉಸ್ತು​ವಾರಿ ವೇಣು​ಗೋ​ಪಾಲ್‌, ಸಿದ್ದ​ರಾ​ಮಯ್ಯ ಹಾಗೂ ಪರ​ಮೇ​ಶ್ವರ್‌ ಸುದೀರ್ಘ ಕಾಲ ಚರ್ಚೆ ನಡೆ​ಸಿ ಅಂತಿ​ಮ​ವಾಗಿ ರಾಜ್ಯ ನಾಯ​ಕ​ತ್ವವು ರಾಜ್ಯ​ಸ​ಭೆಗೆ ತಾವು ಸೂಚಿ​ಸುವ ಅಭ್ಯ​ರ್ಥಿ​ಗಳ ಪಟ್ಟಿ​ಯನ್ನು ಹೈಕ​ಮಾಂಡ್‌ಗೆ ನೀಡಿದೆ ಎಂದು ಮೂಲ​ಗಳು ಹೇಳಿ​ವೆ.

ಟಕೆಟ್‌ ಕೇಳಿರುವುದು ಯಾರಿಗೆ?

ರಾಜ್ಯ ನಾಯಕತ್ವ ನೀಡಿರುವ ಪಟ್ಟಿಯ ಪ್ರಕಾರ ಮುಸ್ಲಿಂ ಕೋಟಾ​ದಡಿ ಮೊದ​ಲಿಗೆ ರೋಷ​ನ್‌​ ಬೇಗ್‌ ಹಾಗೂ ಸಲೀಂ ಅಹ​ಮದ್‌ ಅವರಿ​ಬ್ಬರ ಪೈಕಿ ಒಬ್ಬರಿಗೆ ನೀಡು​ವಂತೆ ರಾಜ್ಯ ನಾಯ​ಕರು ಸೂಚಿ​ಸಿದ್ದಾರೆ. ಆದರೆ, ಹೈಕ​ಮಾಂಡ್‌ ಇನ್ನೂ ರೆಹ​ಮಾನ್‌ ಖಾನ್‌ ಅವರನ್ನು ಈ ಪಟ್ಟಿ​ಯಲ್ಲಿ ಪರಿ​ಶೀ​ಲಿ​ಸು​ತ್ತಿದೆ ಎನ್ನ​ಲಾ​ಗಿ​ದೆ. ಎರ​ಡನೇ ಅಭ್ಯ​ರ್ಥಿ​ಯನ್ನು ಲಿಂಗಾ​ಯತ ಕೋಟಾ​ದಿಂದ ಆಯ್ಕೆ ಮಾಡ​ಬೇಕೋ ಅಥವಾ ಮಹಿಳಾ ಕೋಟಾ​ದಿಂದ ಮಾಡ​ಬೇಕೋ ಎಂಬ ಬಗ್ಗೆ ಗೊಂದ​ಲ​ದ​ಲ್ಲಿ​ರುವ ರಾಜ್ಯ ನಾಯ​ಕತ್ವ ಈ ಎರಡು ಕೋಟಾ​ಗ​ಳಿಗೂ ಕೆಲ ಹೆಸ​ರು​ಗ​ಳನ್ನು ಸೂಚಿಸಿ ಅಂತಿಮ ನಿರ್ಧಾ​ರ​ವನ್ನು ಹೈಕ​ಮಾಂಡ್‌ಗೆ ಬಿಟ್ಟಿದೆ ಎನ್ನ​ಲಾ​ಗಿ​ದೆ.

ಅದರ ಪ್ರಕಾರ ಲಿಂಗಾ​ಯತ ಕೋಟಾ​ದಡಿ ಕೈಲಾ​ಸ್‌​ನಾಥ್‌ ಪಾಟೀಲ್‌, ಶಿವ​ರಾಜ ಪಾಟೀಲ್‌, ಎ.ಬಿ. ಮಾಲ​ಕ​ರೆಡ್ಡಿ, ಶಾಮ​ನೂರು ಶಿವಶಂಕ​ರಪ್ಪ ಅವರ ಹೆಸ​ರಿದೆ. ಇನ್ನು ಮಹಿಳಾ ಕೋಟಾ​ದಡಿ ರಾಣಿ ಸತೀಶ್‌ ಹೆಸರು ಪ್ರಧಾ​ನ​ವಾಗಿ ಕೇಳಿ ಬಂದಿದೆ ಎನ್ನ​ಲಾ​ಗಿದೆ. ಮೂರನೇ ಅಭ್ಯ​ರ್ಥಿ​ಯಾಗಿ ಚೆನ್ನಾ​ರೆಡ್ಡಿ ಹಾಗೂ ವೀರ​ರೆಡ್ಡಿ ಅವರ ಹೆಸ​ರನ್ನು ಸೂಚಿ​ಸಿ​ದ್ದಾರೆ ಎನ್ನ​ಲಾ​ಗಿ​ದೆ.

ಆದರೆ, ರಾಷ್ಟ್ರೀಯ ಮಟ್ಟ​ದಲ್ಲಿ ತಂತ್ರ​ಗಾ​ರಿಕೆ ರೂಪಿ​ಸುವ ಹಿನ್ನೆ​ಲೆ​ಯಲ್ಲಿ ಕಾಂಗ್ರೆಸ್‌ ಹೈಕ​ಮಾಂಡ್‌ ಸ್ಯಾಮ್‌ ಪಿತ್ರೋಡಾ ಹಾಗೂ ಜನಾ​ರ್ದನ ದ್ವಿವೇದಿ ಅವರ ಹೆಸ​ರನ್ನು ರಾಜ್ಯ​ಸ​ಭೆಗೆ ಪರಿ​ಗ​ಣಿ​ಸು​ತ್ತಿದೆ ಎನ್ನ​ಲಾ​ಗಿ​ದೆ. ಮುಂದಿನ ಲೋಕ​ಸಭಾ ಚುನಾ​ವಣೆ ದೃಷ್ಟಿ​ಯಿಂದ ಸ್ಯಾಮ್‌ ಪಿತ್ರೋಡಾ ಅವ​ರನ್ನು ರಾಜ್ಯ​ಸ​ಭೆಗೆ ಕಳು​ಹಿ​ಸು​ವುದು ಹೈಕ​ಮಾಂಡ್‌ಗೆ ಅತ್ಯ​ಗ​ತ್ಯ​ವಾಗಿ ಬೇಕಿದೆ. ಇದಕ್ಕೆ ಇರುವ ರಹ​ದಾರಿ ಕರ್ನಾ​ಟಕ ಹಾಗೂ ಗುಜ​ರಾ​ತ್‌ನ ವಿಧಾ​ನ​ಸ​ಭೆ​ಯಿಂದ ರಾಜ್ಯ​ಸಭೆಗೆ ಆಯ್ಕೆ​ಯಾ​ಗ​ಬ​ಹು​ದಾದ ಸ್ಥಾನ​ಗ​ಳು.

ಗುಜ​ರಾ​ತ್‌ ಹಾಗೂ ಕರ್ನಾ​ಟ​ಕ​ದಿಂದ ತಲಾ ಒಬ್ಬ​ರನ್ನು ರಾಜ್ಯ​ಸ​ಭೆಗೆ ಕಳು​ಹಿ​ಸುವ ಮನ​ಸ್ಥಿ​ತಿ​ಯಲ್ಲಿ ಹೈಕ​ಮಾಂಡ್‌ ಇದೆ. ಆದರೆ, ರಾಜ್ಯ ವಿಧಾ​ನ​ಸಭಾ ಚುನಾವಣೆ ಅತ್ಯಂತ ಪ್ರಮು​ಖ​ವಾ​ಗಿ​ರುವ ಹಿನ್ನೆ​ಲೆ​ಯಲ್ಲಿ ಹಾಗೂ ಸಿದ್ದ​ರಾ​ಮಯ್ಯ ನೇರ​ವಾಗಿ ವಿರೋಧ ವ್ಯಕ್ತ​ಪ​ಡಿ​ಸಿ​ರುವ ಹಿನ್ನೆ​ಲೆ​ಯಲ್ಲಿ ಸ್ಯಾಮ್‌ ​ಪಿ​ತ್ರೋಡಾ ಅವ​ರನ್ನು ಕರ್ನಾ​ಟ​ಕ​ದಿಂದ ಪರಿ​ಗ​ಣಿ​ಸ​ಬೇಕೋ ಅಥವಾ ಗುಜ​ರಾ​ತಿ​ನಿಂದ ಪರಿ​ಗ​ಣಿ​ಸ​ಬೇಕೋ ಎಂಬ ಗೊಂದ​ಲ​ದಲ್ಲಿ ಹೈಕ​ಮಾಂಡ್‌ ಇದೆ. ಹೀಗಾಗಿ ಈ ಬಗ್ಗೆ ಅನಂತರ ನಿರ್ಧ​ರಿ​ಸುವ ತೀರ್ಮಾನ ಕೈಗೊಂಡಿದೆ ಎನ್ನ​ಲಾ​ಗಿ​ದೆ.

ಆದರೆ, ದೆಹ​ಲಿ​ಯಲ್ಲಿ ಸುದ್ದಿ​ಗಾ​ರ​ರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐ​ಸಿಸಿ ಪ್ರಧಾನ ಕಾರ್ಯ​ದರ್ಶಿ ಜನಾ​ರ್ದನ ದ್ವಿವೇದಿ ಹಾಗೂ ಸ್ಯಾಮ್‌ ಪಿತ್ರೋಡಾ ಅವರ ಹೆಸ​ರನ್ನು ಹೈಕ​ಮಾಂಡ್‌ ಸೂಚಿ​ಸಿದೆ ಎಂಬುದನ್ನು ತಳ್ಳಿ​ಹಾ​ಕಿ​ದರು. ನಾವು ಕರ್ನಾ​ಟ​ಕ​ದ​ವರ ಹೆಸ​ರನ್ನು ಮಾತ್ರ ಹೈಕ​ಮಾಂಡ್‌ಗೆ ನೀಡಿ​ದ್ದೇವೆ. ಕರ್ನಾ​ಟ​ಕೇ​ತ​ರ ವ್ಯಕ್ತಿ​ಗಳ ಚರ್ಚೆಯೇ ನಡೆ​ದಿಲ್ಲ. ಸ್ಯಾಮ್‌ ಪಿತ್ರೋಡಾ ಅವರ ಬಗ್ಗೆ​ಯಂತೂ ಚರ್ಚೆಯೇ ನಡೆ​ದಿಲ್ಲ ಎಂದು ಸ್ಪಷ್ಟ​ಪ​ಡಿ​ಸಿ​ದ​ರು​.

Follow Us:
Download App:
  • android
  • ios