1996ರಲ್ಲಿ ಡಿಎಂಕೆ ಪಕ್ಷಕ್ಕೆ ಬೆಂಬಲ ಕೊಟ್ಟು ತಪ್ಪು ಮಾಡಿದೆ ಎಂದು ರಜನೀಕಾಂತ್ ವಿಷಾದಿಸಿದ ಹೇಳಿಕೆಯನ್ನೂ ಗುರುಮೂರ್ತಿ ಸ್ವಾಗತಿಸಿದ್ದಾರೆ. "21 ವರ್ಷಗಳ ಹಿಂದೆ ರಾಜಕೀಯ ಮೈತ್ರಿಕೂಟವೊಂದಕ್ಕೆ ಬೆಂಬಲ ಕೊಟ್ಟು ತಪ್ಪು ಮಾಡಿದೆ. ಅದೊಂದು ರಾಜಕೀಯ ಅಪಘಾತವಾಗಿತ್ತು" ಎಂದು ರಜನೀಕಾಂತ್ ಅಭಿಪ್ರಾಯಪಟ್ಟಿದ್ದಾರೆ. ಸೂಪರ್'ಸ್ಟಾರ್ ಅವರ ಈ ಮಾತು ಸದ್ಯದ ಪರಿಸ್ಥಿತಿಯಲ್ಲಿ ಬಹಳ ಮುಖ್ಯವೆನಿಸಿದೆ ಎಂಬುದು ಗುರುಮೂರ್ತಿ ಅಭಿಪ್ರಾಯ.​

ಚೆನ್ನೈ(ಮೇ 15): ಸೂಪರ್ ಸ್ಟಾರ್ ರಜನೀಕಾಂತ್ 8 ವರ್ಷಗಳ ಬಳಿಕ ತಮ್ಮ ಅಭಿಮಾನಿಗಳೊಂದಿಗೆ ಬೆರೆತಿದ್ದಾರೆ. ಕಾರ್ಯಕ್ರಮದಲ್ಲಿ ರಜನೀಕಾಂತ್ ಆಡಿದ ಮಾತುಗಳು ಸಾಕಷ್ಟು ಕುತೂಹಲಗಳಿಗೆ ಎಡೆ ಮಾಡಿಕೊಟ್ಟಿದೆ. ಆರೆಸ್ಸೆಸ್ ಚಿಂತಕ ಹಾಗೂ ಸ್ವದೇಶಿ ಜಾಗರಣ ಮಂಚ್'ನ ಮುಖಂಡ ಎಸ್.ಗುರುಮೂರ್ತಿ ಅವರು ರಜನೀಕಾಂತ್'ರ ಹೇಳಿಕೆಯನ್ನು ಮೋದಿಗೆ ಹೋಲಿಕೆ ಮಾಡಿದ್ದಾರೆ

"ರಜನಿಕಾಂತ್ ಅವರು ಬಹಳ ಯೋಚನೆ ಮಾಡಿ ಹೇಳಿಕೆ ನೀಡಿರುವಂತಿದೆ. ಮೋದಿಯವರು ಪ್ರಧಾನಿಯಾಗಿ ಆಯ್ಕೆಯಾದಾಗಿನ ಸಂದರ್ಭ ನೆನಪಿಗೆ ಬರುತ್ತಿದೆ. ನಾನು ಲಂಚ ಮುಟ್ಟೋದಿಲ್ಲ, ಬೇರೆಯವರನ್ನೂ ನಾನು ಬಿಡೋದಿಲ್ಲವೆಂದು ಮೋದಿ ಹೇಳಿದ್ದರು," ಎಂದು ಗುರುಮೂರ್ತಿ ಹೇಳಿದ್ದಾರೆ.

ನಾನೇನಾದರೂ ರಾಜಕೀಯಕ್ಕೆ ಬಂದಿದ್ದೇ ಆದಲ್ಲಿ, ಲಂಚಕೋರರನ್ನು ಹತ್ತಿರಕ್ಕೆ ಬಿಟ್ಟುಕೊಳ್ಳೋದಿಲ್ಲ ಎಂದು ರಜನೀಕಾಂತ್ ಅವರು ನೀಡಿದ್ದ ಹೇಳಿಕೆಯನ್ನು ಗುರುಮೂರ್ತಿ ಮೇಲಿನ ರೀತಿಯಲ್ಲಿ ವ್ಯಾಖ್ಯಾನಿಸಿದ್ದಾರೆ.

"ಸದ್ಯ ದೇವರು ನನ್ನನ್ನು ಒಟ್ಟ ನಟನಾಗಿ ಬಳಸುತ್ತಿದ್ದಾನೆ. ಮುಂದೇನು ಎಂಬುದು ನನಗೆ ಗೊತ್ತಿಲ್ಲ. ದೇವರು ಇಚ್ಛಿಸಿದರೆ ರಾಜಕೀಯ ಸೇರುತ್ತೇನೆ. ಒಂದು ವೇಳೆ ರಾಜಕೀಯಕ್ಕೆ ಹೋಗಲು ನಿರ್ಧರಿಸಿದ್ದೇ ಆದಲ್ಲಿ, ಕೆಟ್ಟ ಜನರನ್ನು ಸಮೀಪಕ್ಕೆ ಬಿಟ್ಟುಕೊಳ್ಳೋದಿಲ್ಲ. ಲಂಚಕೋರರೊಂದಿಗೆ ಕೆಲಸ ಮಾಡೋದಿಲ್ಲ. ಪ್ರಾಮಾಣಿಕವಾಗಿ ದುಡಿಯುತ್ತೇನೆ" ಎಂದು ಅಭಿಮಾನಿಗಳ ಭೇಟಿ ಕಾರ್ಯಕ್ರಮದಲ್ಲಿ ರಜನೀಕಾಂತ್ ಹೇಳಿದ್ದರು.

1996ರಲ್ಲಿ ಡಿಎಂಕೆ ಪಕ್ಷಕ್ಕೆ ಬೆಂಬಲ ಕೊಟ್ಟು ತಪ್ಪು ಮಾಡಿದೆ ಎಂದು ರಜನೀಕಾಂತ್ ವಿಷಾದಿಸಿದ ಹೇಳಿಕೆಯನ್ನೂ ಗುರುಮೂರ್ತಿ ಸ್ವಾಗತಿಸಿದ್ದಾರೆ. "21 ವರ್ಷಗಳ ಹಿಂದೆ ರಾಜಕೀಯ ಮೈತ್ರಿಕೂಟವೊಂದಕ್ಕೆ ಬೆಂಬಲ ಕೊಟ್ಟು ತಪ್ಪು ಮಾಡಿದೆ. ಅದೊಂದು ರಾಜಕೀಯ ಅಪಘಾತವಾಗಿತ್ತು" ಎಂದು ರಜನೀಕಾಂತ್ ಅಭಿಪ್ರಾಯಪಟ್ಟಿದ್ದಾರೆ. ಸೂಪರ್'ಸ್ಟಾರ್ ಅವರ ಈ ಮಾತು ಸದ್ಯದ ಪರಿಸ್ಥಿತಿಯಲ್ಲಿ ಬಹಳ ಮುಖ್ಯವೆನಿಸಿದೆ ಎಂಬುದು ಗುರುಮೂರ್ತಿ ಅಭಿಪ್ರಾಯ.

ತೊಂಬತ್ತರ ದಶಕದಲ್ಲಿ ಕೇಂದ್ರದಲ್ಲಿ ಪಿವಿ ನರಸಿಂಹರಾವ್ ನೇತೃತ್ವದಲ್ಲಿ ಕಾಂಗ್ರೆಸ್ ಸರಕಾರ ಅಸ್ತಿತ್ವದಲ್ಲಿದ್ದಾಗ ರಜನೀಕಾಂತ್ ಅವರು ಕಾಂಗ್ರೆಸ್ ಪರ ವಾಲಿದ್ದರು. ಜಯಲಲಿತಾ ಅವರ ಎಐಎಡಿಎಂಕೆ ಪಕ್ಷದೊಂದಿಗೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡ ಬಳಿಕ ರಜನೀಕಾಂತ್ ಅವರು ಡಿಎಂಕೆಗೆ ಬೆಂಬಲ ನೀಡಲು ನಿರ್ಧರಿಸಿದರು. ಆಗ ತಮಿಳುನಾಡಿನಲ್ಲಿ ಜಯಲಲಿತಾ ಆಡಳಿತವಿತ್ತು. ಜನಪ್ರಿಯತೆಯ ಉತ್ತುಂಗದಲ್ಲಿದ್ದ ರಜನೀಕಾಂತ್ ಚುನಾವಣಾ ಪ್ರಚಾರದಲ್ಲಿ ಆಡಿದ ತೀಕ್ಷ್ಣ ಮಾತುಗಳು ಜನರನ್ನಾಕರ್ಷಿಸಿದವು. ಎಐಎಡಿಎಂಕೆ ಮತ್ತೊಮ್ಮೆ ಅಧಿಕಾರಕ್ಕೆ ಬಂದಿದ್ದೇ ಆದಲ್ಲಿ ತಮಿಳುನಾಡಿಗೆ ಉಳಿಗಾಲವಿರೋದಿಲ್ಲ ಎಂದು ಜಯಲಲಿತಾ ವಿರುದ್ಧ ರಜನೀಕಾಂತ್ ಕೂಗೆಬ್ಬಿಸಿದರು. ರಜನಿ ಅವರ ಈ ಮಾತಿನ ಪ್ರಭಾವವೋ ಏನೋ, ಚುನಾವಣೆಯಲ್ಲಿ ಡಿಎಂಕೆ ಕ್ಲೀನ್ ಸ್ವೀಪ್ ಮಾಡಿತು. ಜಯಲಲಿತಾ ಅವರ ಪಕ್ಷ ಸಂಪೂರ್ಣವಾಗಿ ನೆಲಕಚ್ಚಿತ್ತು.

ಬಿಜೆಪಿ ಸೇರುತ್ತಾರಾ ರಜಿನಿ?
ಲೋಕಸಭಾ ಚುನಾವಣೆ ವೇಳೆ ನರೇಂದ್ರ ಮೋದಿ ಮತ್ತು ರಜನೀಕಾಂತ್ ನಡುವಿನ ಭೇಟಿಯು ಸಾಕಷ್ಟು ಊಹಾಪೋಹಗಳಿಗೆ ದಾರಿ ಮಾಡಿಕೊಟ್ಟಿತ್ತು. ರಜನೀಕಾಂತ್ ಬಿಜೆಪಿ ಸೇರಬಹುದು ಎಂಬ ಮಾತು ಆಗಿನಿಂದಲೂ ಕೇಳಿಬರುತ್ತಲೇ ಇದೆ. ಆದರೆ, ಅಭಿಮಾನಿಗಳೊಂದಿಗೆ ಭೇಟಿ ಕಾರ್ಯಕ್ರಮದಲ್ಲಿ ರಜನೀಕಾಂತ್ ತಾನು ಬೇರೆ ಪಕ್ಷ ಸೇರುವ ಸಾಧ್ಯತೆಯನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. "ದೈವೇಚ್ಛೆ ಇದ್ದರೆ ರಾಜಕಾರಣಕ್ಕೆ ಬರುತ್ತೇನೆ. ಆದರೆ, ಬೇರೆ ಪಕ್ಷವನ್ನು ಮಾತ್ರ ಸೇರೋದಿಲ್ಲ," ಎಂದು ರಜನೀಕಾಂತ್ ಹೇಳಿದ್ದಾರೆ. ಬೇರೆ ಪಕ್ಷವನ್ನು ಸೇರೋದಿಲ್ಲವೆಂದರೆ, ರಜನೀಕಾಂತ್ ಅವರು ಹೊಸ ಪಕ್ಷ ಕಟ್ಟೋದಿಲ್ಲ ಎನ್ನುವಂತಿಲ್ಲವಲ್ಲ ಎಂಬ ಮಾತು ತಮಿಳುನಾಡು ರಾಜಕಾರಣವನ್ನು ಗರಿಗೆದರಿಸಿದೆ.