ನಟ ರಜನೀಕಾಂತ್‌ ಅವರ ಪುತ್ರಿ ಸೌಂದರ್ಯಾ ಶೀಘ್ರವೇ ಶುಭ ವಿವಾಹಕ್ಕೆ ಸಜ್ಜಾಗಿದ್ದಾರೆ. ಅವರ ವಿವಾಹವು ಉದ್ಯಮಿ ವಿಶಾಕನ್ ಜೊತೆ ನಡೆಯಲಿದೆ. 

ಚೆನ್ನೈ: ನಟ ರಜನೀಕಾಂತ್‌ ಅವರ ಪುತ್ರಿ ಸೌಂದರ್ಯಾ ಶೀಘ್ರವೇ ಶುಭ ವಿವಾಹಕ್ಕೆ ಸಜ್ಜಾಗಿದ್ದಾರೆ. ನಟ, ಉದ್ಯಮಿ ವಿಶಾಕನ್‌ ವನಗಮುಡಿ ಅವರ ಜೊತೆಗೆ ಇತ್ತೀಚೆಗೆ ಸೌಂದರ್ಯಾರ ವಿವಾಹ ನಿಶ್ಚಿತಾರ್ಥ ಕಾರ್ಯಕ್ರಮ ನೆರವೇರಿದ್ದು, ಇಬ್ಬರೂ 2019ರ ಜನವರಿಯಲ್ಲಿ ವಿವಾಹವಾಗಲಿದ್ದಾರೆ ಎನ್ನಲಾಗಿದೆ. 

ಈ ಹಿಂದೆ ಸೌಂದರ್ಯಾ 2010ರಲ್ಲಿ ಉದ್ಯಮಿ ಅಶ್ವಿನ್‌ ಅವರನ್ನು ವಿವಾಹವಾಗಿದ್ದರು. ದಂಪತಿಗೆ ವೇದ್‌ ಎಂಬ ಮಗ ಕೂಡಾ ಇದ್ದ. ಆದರೆ ದಂಪತಿಗಳ ನಡುವೆ ಹೊಂದಾಣಿಕೆ ಮೂಡದ ಕಾರಣ ಇಬ್ಬರೂ, 2017ರಲ್ಲಿ ವಿಚ್ಛೇದನ ಪಡೆದುಕೊಂಡಿದ್ದರು. ಮತ್ತೊಂದೆಡೆ ವಿಶಾಕನ್‌ ಕೂಡಾ ತಮ್ಮ ಮೊದಲ ಪತ್ನಿಯಿಂದ ವಿಚ್ಛೇದನ ಪಡೆದುಕೊಂಡಿದ್ದಾರೆ. 

ವಿಶಾಕನ್‌ ಈ ಮೊದಲು ಕನಿಖಾ ಕುಮಾರನ್‌ ಎಂಬ ಪತ್ರಿಕಾ ಸಂಪಾದಕಿಯನ್ನು ವರಿಸಿದ್ದರು. ಡಿಎಂಕೆಯನ್ನು ವಿರೋಧಿಸುತ್ತಲೇ ಹೊಸ ರಾಜಕೀಯ ಪಕ್ಷ ಸ್ಥಾಪನೆಗೆ ರಜನೀಕಾಂತ್‌ ಮುಂದಾಗಿದ್ದರೆ, ಅವರ ಬಾವಿ ಅಳಿಯನ ಕುಟುಂಬ ಡಿಎಂಕೆ ಅತ್ಯಂತ ಹತ್ತಿರವಾಗಿದೆ ಎನ್ನಲಾಗಿದೆ.