ಏಪ್ರಿಲ್​ 9ರಂದು ಶ್ರೀಲಂಕಾದ ಜಾಫ್ನಾದಲ್ಲಿ ಜ್ಞಾನಸೇವಂ ಎಂಬ ಸ್ವಯಂಸೇವಾ ಸಂಸ್ಥೆ ಆಯೋಜಿಸಿದ್ದ ನಿರಾಶ್ರಿತ ತಮಿಳರಿಗೆ ನಿರ್ಮಿಸಿದ್ದ ಮನೆ ವಿತರಿಸುವ ಕಾರ್ಯಕ್ರಮದಲ್ಲಿ ರಜಿನಿ ಭಾಗವಹಿಸಬೇಕಿತ್ತು.

ಚೆನ್ನೈ(ಮಾ.25): ಸೂಪರ್​ ಸ್ಟಾರ್ ರಜನಿಕಾಂತ್ ಶ್ರೀಲಂಕಾ ಭೇಟಿ ರದ್ದಾಗಿದೆ. ಸೂಪರ್'ಸ್ಟಾರ್ ಲಂಕಾ ಭೇಟಿಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ತಮ್ಮ ಭೇಟಿಯನ್ನು ರದ್ದುಗೊಳಿಸಿದ್ದಾರೆ.

ಏಪ್ರಿಲ್​ 9ರಂದು ಶ್ರೀಲಂಕಾದ ಜಾಫ್ನಾದಲ್ಲಿ ಜ್ಞಾನಸೇವಂ ಎಂಬ ಸ್ವಯಂಸೇವಾ ಸಂಸ್ಥೆ ಆಯೋಜಿಸಿದ್ದ ನಿರಾಶ್ರಿತ ತಮಿಳರಿಗೆ ನಿರ್ಮಿಸಿದ್ದ ಮನೆ ವಿತರಿಸುವ ಕಾರ್ಯಕ್ರಮದಲ್ಲಿ ರಜಿನಿ ಭಾಗವಹಿಸಬೇಕಿತ್ತು. ಆದರೆ ಶ್ರೀಲಂಕಾಗೆ ತೆರಳದಂತೆ ವಿವಿಧ ಸಂಘಟನೆಗಳು ಒತ್ತಾಯಿಸಿದ ಕಾರಣ ತಮ್ಮ ಭೇಟಿಯನ್ನು ರದ್ದುಗೊಳಿಸಿದ್ದಾರೆ.