ಪಶ್ಚಿಮ ಬಂಗಾಳ ಮೂಲದ ಕಾರ್ಮಿಕನೊಬ್ಬನನ್ನು ಹತ್ಯೆ ಮಾಡಿ, ಜೀವಂತ ಸುಟ್ಟು ವೀಡಿಯೊ ಪ್ರಕಟಿಸಿದ್ದ ರಾಜಸ್ಥಾನ ನಿವಾಸಿ ಶಂಬುಲಾಲ್‌ ರೆಗಾರ್‌ ಜೈಲಿನಿಂದಲೇ ಮತ್ತೆ ಎರಡು ಹೊಸ ವೀಡಿಯೊ ಪ್ರಕಟಿಸಿದ್ದಾನೆ.

ಬಿಡುಗಡೆಜೈಪುರ: ಪಶ್ಚಿಮ ಬಂಗಾಳ ಮೂಲದ ಕಾರ್ಮಿಕನೊಬ್ಬನನ್ನು ಹತ್ಯೆ ಮಾಡಿ, ಜೀವಂತ ಸುಟ್ಟು ವೀಡಿಯೊ ಪ್ರಕಟಿಸಿದ್ದ ರಾಜಸ್ಥಾನ ನಿವಾಸಿ ಶಂಬುಲಾಲ್‌ ರೆಗಾರ್‌ ಜೈಲಿನಿಂದಲೇ ಮತ್ತೆ ಎರಡು ಹೊಸ ವೀಡಿಯೊ ಪ್ರಕಟಿಸಿದ್ದಾನೆ.

ಇದೊಂದು ಗಂಭೀರ ಭದ್ರತಾ ಲೋಪ ಎಂಬ ಆಪಾದನೆಗಳು ಕೇಳಿ ಬಂದಿವೆ. ರಾಜಸ್ಥಾನದ ರಜಸ್‌ಮಂಡ್‌ ಜಿಲ್ಲೆಯಲ್ಲಿ ‘ಲವ್‌ ಜಿಹಾದ್‌’ ಪ್ರಕರಣವೆಂದು ಶಂಕಿಸಿ ಮೊಹಮ್ಮದ್‌ ಅಫ್ರಜುಲ್‌ ಎಂಬಾತನನ್ನು ರೆಗಾರ್‌ ಸುಟ್ಟು ಹಾಕಿದ್ದ.

ಅದರ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿ ದೇಶವನ್ನೇ ಬೆಚ್ಚಿಬೀಳಿಸಿತ್ತು. ಹೊಸ ವೀಡಿಯೊಗಳಲ್ಲಿ ದ್ವೇಷಕಾರುವ ಸಂದೇಶವನ್ನು ಓದಿರುವ ಈತ, ‘ಹಿಂದೂಗಳು ಒಗ್ಗಟ್ಟಾಗಿ ರಾಮರಾಜ್ಯ ನಿರ್ಮಿಸಬೇಕು’ ಎಂದಿದ್ದಾನೆ.