ವಿಶ್ವದಲ್ಲೇ ಅತೀ ಹೆಚ್ಚಿರುವ ಚಿನ್ನದ ನಿಕ್ಷೇಪವನ್ನು ಭಾರತದಲ್ಲಿ ಪತ್ತೆ ಹಚ್ಚಿದ ವಿಜ್ಞಾನಿಗಳು !

First Published 12, Feb 2018, 3:35 PM IST
Rajasthan sitting over 11 crore tonne gold deposits
Highlights

ಬನ್ಸ್'ವಾರ ಹಾಗೂ ಉದಯ್'ಪುರ ಸ್ಥಳಗಳಲ್ಲಿ ಭೂಮಿಯಿಂದ 300 ಅಡಿ ಆಳದಲ್ಲಿ 11.48 ಕೋಟಿ ಟನ್ ಇದ್ದು, ಚಿನ್ನದ ಜೊತೆ ತಾಮ್ರದ ನಿಕ್ಷೇಪವನ್ನು ಪತ್ತೆ ಹಚ್ಚಲಾಗಿದೆ.

ಜೈಪುರ(ಫೆ.12): ವಿಶ್ವದಲ್ಲಿಯೇ ಅತೀ ಹೆಚ್ಚು ಎನ್ನಬಹುದಾದ ಚಿನ್ನದ ನಿಕ್ಷೇಪವನ್ನು ರಾಜಸ್ಥಾನದ 2 ಸ್ಥಳಗಳಲ್ಲಿ ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಇಲಾಖೆಯ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ.  

ಬನ್ಸ್'ವಾರ ಹಾಗೂ ಉದಯ್'ಪುರ ಸ್ಥಳಗಳಲ್ಲಿ ಭೂಮಿಯಿಂದ 300 ಅಡಿ ಆಳದಲ್ಲಿ 11.48 ಕೋಟಿ ಟನ್ ಇದ್ದು, ಚಿನ್ನದ ಜೊತೆ ತಾಮ್ರದ ನಿಕ್ಷೇಪವನ್ನು ಪತ್ತೆ ಹಚ್ಚಲಾಗಿದೆ. ಇವೆರಡೂ ಖನಿಜಗಳ ಜೊತೆ ಸತು ಹಾಗೂ ಸೀಸ ನಿಕ್ಷೇಪಗಳ ಕುರುಹುಗಳು ಕಂಡುಬಂದಿರುವುದಾಗಿ ವಿಜ್ಞಾನಿಗಳು ತಿಳಿಸಿದ್ದಾರೆ.

ಇವೆರಡು ಸ್ಥಳಗಳ ಜೊತೆ ಸಿಕಾರ್ ಜಿಲ್ಲೆಯ ನೀಮ್ ಕಾ ತಾಣ ಸ್ಥಳದಲ್ಲೂ ಇವೆರಡೂ ರೀತಿಯ ನಿಕ್ಷೇಪವಿರುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ, ಎಂದು ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಇಲಾಖೆಯ ಮಹಾ ನಿರ್ದೇಶಕರಾದ ಎನ್. ಕುಟುಂಬ ರಾವ್ ತಿಳಿಸಿದ್ದಾರೆ.

ವಿಜ್ಞಾನಿಗಳ ಪ್ರಕಾರ, ರಾಜಪುರ ಹಾಗೂ ದರಿಬಾದಲ್ಲಿನ ಗಣಿಗಳಲ್ಲಿ 350 ಮಿಲಿಯನ್ ಟನ್ ಸತು ಹಾಗೂ ಸೀಸದ ನಿಕ್ಷೇಪಗಳಿವೆ' ಶೀಘ್ರದಲ್ಲಿಯೇ ಈ ನಿಕ್ಷೇಪಗಳನ್ನು ಹೊರತೆಗೆಯುವ ಬಗ್ಗೆ ಸರ್ಕಾರಕ್ಕೆ ವರದಿ ನೀಡಲಾಗುತ್ತದೆ'ಎಂದು ಕುಟುಂಬ ರಾವ್ ತಿಳಿಸಿದ್ದಾರೆ.

loader