ರಾಜಸ್ಥಾನದ ಪ್ರಿಯಾ ಶರ್ಮಾ ಅಪರೂಪದ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ದೇಶದ 7ನೇ ಮಹಿಳಾ ಫೈಟರ್ ಪೈಲಟ್ ಆಗುವ ಮೂಲಕ ಇವರು ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಜೈಪುರ[ಡಿ.19]: ಇತ್ತೀಚೆಗಷ್ಟೇ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಮಹಿಳೆಯರನ್ನು ಯುದ್ಧ ಭೂಮಿಗೆ ಕಳುಹಿಸುವ ಕುರಿತಾಗಿ ವಿವಾದಾತ್ಮಕ ಹೆಳಿಕೆ ನೀಡಿದ್ದರು. ಮಹಿಳೆಯರು ಮಕ್ಕಳ ಆರೈಕೆಗೆ ಮೊದಲ ಆದ್ಯತೆ ನೀಡಬೇಕಾಗುತ್ತದೆ ಹಾಗೂ ಪುರುಷರ ವಿರುದ್ಧ ಆರೋಪ ಹೊರಿಸಬಾರದೆಂಬ ನಿಟ್ಟಿನಲ್ಲಿ ಮಹಿಳೆಯನ್ನು ಯುದ್ಧ ಮಾಡಲು ಕಳುಹಿಸಬಾರದು ಎಂದಿದ್ದರು. ಈ ವಿಚಾರವಾಗಿ ಟ್ವಿಟರ್‌ನಲ್ಲಿ ಪರ ವಿರೋಧಗಳು ವ್ಯಕ್ತವಾಗಿದ್ದವು. ಆದರೀಗ ರಾಜಸ್ಥಾನದ ಪ್ರಯಾ ಶರ್ಮಾ ಎಂಬಾಕೆ ದಾಖಲೆಯೊಂದನ್ನು ನಿರ್ಮಿಸಿ ದೇಶಕ್ಕೆ ಹೆಸರು ತಂದುಕೊಟ್ಟಿದ್ದಾರೆ.

ಹೌದು ರಾಜಸ್ಥಾನದ ಪ್ರಿಯಾ ಶರ್ಮಾ ಭಾರತದ ಏಳನೇ ಮಹಿಳಾ ಫೈಟರ್ ಪೈಲಟ್ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ ಹಾಗೂ ರಾಜಸ್ಥಾನದ ಮೂರನೇ ಮಹಿಳಾ ಫೈಟರ್ ಪೈಲಟ್ ಎಂಬ ಹೆಗ್ಗಳಿಕೆ ಪಡೆದಿದ್ದಾರೆ. ಇವರು ಹೈದರಾಬಾದ್ ನ ವಾಯುಸೇನಾ ಅಕಾಡೆಮಿಯಿಂದ ಪ್ಲೈಯಿಂಗ್ ಆಫಿಸರ್ ಆಗಿ ಪದವಿ ಪಡೆದಿದ್ದಾರೆ. ಕೋಟಾದ IIIT ಯಿಂದ ಶಿಕ್ಷಣ ಪಡೆದ ಇವರು 2017ರಲ್ಲಿ ಡುಂಡೀಗಲ್ ಹಾಗೂ ಹಕೀಂಪೇಟ್ ನಲ್ಲಿ ತರಬೇತಿ ಪಡೆದಿದ್ದರು.

Scroll to load tweet…

ಈ ಅಪೂರ್ವ ಸಾಧನೆ ಮಾಡಿರುವ ಪ್ರಿಯಾ ಈ ಕುರಿತಾಗಿ ಪ್ರತಿಕ್ರಿಯಿಸುತ್ತಾ 'ನಾನೊಬ್ಬ ಓರ್ವ ಫೈಟರ್ ಪೈಲಟ್ ಆಗಿ ನೀವು ಕೂಡಾ ಇಂತಹ ಸಾಧನೆ ಮಾಡಲು ಪ್ರಯತ್ನಿಸಿ ಎಂದು ಕೇಳಿಕೊಳ್ಳುತ್ತೇನೆ. ಮೋಹನಾ, ಪ್ರತಿಭಾ ಹಾಗೂ ನನ್ನ ಸಾಧನೆ ರಾಜಸ್ಥಾನದ ಯುವತಿಯರು ಸೈನ್ಯಕ್ಕೆ ಸೇರ್ಪಡೆಯಾಗಲು ಪ್ರೇರಣೆಯಾಗಲಿ' ಎಂದಿದ್ದಾರೆ.

Scroll to load tweet…

ಅಲ್ಲದೇ 'ಯಾವುದೇ ಕೆಲಸ ಮಹಿಳೆಯರು ಮಾಡುವುದು ಅಥವಾ ಪುರುಷರಿಗೆಂದು ಸೀಮಿತವಾಗಿರುವುದಿಲ್ಲ. ನಾವೇನು ಆಯ್ಕೆ ಮಾಡುತ್ತೇವೆ ಎಂಬುವುದು ಎಲ್ಲವನ್ನೂ ನಿರ್ಧರಿಸುತ್ತದೆ. ನಾವು[ಪ್ರಿಯಾ ಶರ್ಮಾ, ಮೋಹನಾ ಹಾಗೂ ಪ್ರತಿಭಾ] ನಮ್ಮ ಮನದ ಮಾತನ್ನು ಕೇಳಿ ದೇಶಕ್ಕೆ ಹೆಮ್ಮೆ ತಂದುಕೊಟ್ಟಿದ್ದೇವೆ' ಎಂದಿದ್ದಾರೆ.