ಜೈಪುರ (ಜ. 03): ಇಮಾಂಸಾಬಿಗೂ ಗೋಕುಲಾಷ್ಟಮಿಗೂ ಏನು ಸಂಬಂಧ ಎಂಬ ಮಾತಿದೆ. ಅದಕ್ಕೆ ಅನುಗುಣವಾಗಿ ರಾಜಸ್ಥಾನದ ಏಕ ಮೇವ ಮುಸ್ಲಿಂ ಸಚಿವ ಶಾಲೆ ಮಹಮ್ಮದ್‌ಗೂ ರುದ್ರಾಭಿಷೇಕಕ್ಕೂ ಏನು ಸಂಬಂಧ ಎಂದು ಯಾರಾದರೂ ಕೇಳಿದರೆ ಬರುವ ಉತ್ತರ ‘ಸಂಬಂಧ ಇದೆ’ ಎಂದು!

ಹೌದು. ಮೊಹಮ್ಮದ್ ಅವರು ಜೈಸಲ್ಮೇರ್ ಜಿಲ್ಲೆಯ ತಮ್ಮ ಕ್ಷೇತ್ರವಾದ ಪೋಖ್ರಣ್‌ನಲ್ಲಿ ಭಾನುವಾರ ‘ಬಾಬಾ ರಾಮ ದೇವ್ ಮಂದಿರ’ಕ್ಕೆ (ಯೋಗಗುರು ಬಾಬಾ ರಾಮ ದೇವ್ ಅಲ್ಲ) ಭೇಟಿ ನೀಡಿ ರುದ್ರಾಭಿಷೇಕ ನೆರವೇರಿಸಿದರು. ಇಲ್ಲಿನ ಶಿವಲಿಂಗಕ್ಕೆ ಬಾಬಾ ರಾಮದೇವ್ ಎನ್ನುತ್ತಾರೆ. ‘ನನಗೆ ಶಿವನ ಬಗ್ಗೆ ನಂಬಿಕೆ ಇದೆ’ ಅಂತಾರೆ ಮೊಹಮ್ಮದ್.