ಬಹಿರ್ದೆಸೆಗೆಂದು ಹೋಗಿದ್ದ ಮಹಿಳೆಯರ ಫೋಟೋವನ್ನು ತೆಗೆಯಲು ಯತ್ನಿಸಿದ ಅಧಿಕಾರಿಗಳನ್ನು ತಡೆಯಲು ಹೋದ ವ್ಯಕ್ತಿಯನ್ನೇ ಅಧಿಕಾರಿಗಳು ಥಳಿಸಿ ಹತ್ಯೆಗೈದಿದ್ದಾರೆ. 

ರಾಜಸ್ಥಾನ(ಜೂ.16):ಬಹಿರ್ದೆಸೆಗೆಂದು ಹೋಗಿದ್ದ ಮಹಿಳೆಯರ ಫೋಟೋವನ್ನು ತೆಗೆಯಲು ಯತ್ನಿಸಿದ ಅಧಿಕಾರಿಗಳನ್ನು ತಡೆಯಲು ಹೋದ ವ್ಯಕ್ತಿಯನ್ನೇ ಅಧಿಕಾರಿಗಳು ಥಳಿಸಿ ಹತ್ಯೆಗೈದಿದ್ದಾರೆ.

ಇಲ್ಲಿನ ಬಾಗ್ವಾಸ ಕಚಿ ಬಾಸ್ತಿ ಎನ್ನುವ ಪ್ರದೇಶದಲ್ಲಿ ಇಂತದ್ದೊಂದು ಅಮಾನವೀಯ ಘಟನೆ ನಡೆದಿದೆ. ಸಾಮಾಜಿಕ ಕಾರ್ಯಕರ್ತ ಜಾಫರ್ ಖಾನ್ ಎನ್ನುವವರು ಮೃತಪಟ್ಟ ದುರ್ದೈವಿ. ಮಹಿಳೆಯೊಬ್ಬಳು ಬಹಿರ್ದೆಸೆ ಮಾಡುತ್ತಿರುವಾಗ ನಗರ ಪಾಲಿಕೆ ಅಧಿಕಾರಿಗಳು ಫೋಟೋ ತೆಗೆಯುತ್ತಿದ್ದರು. ಇಂತಹ ನಾಚಿಕೆಗೇಡಿನ ವರ್ತನೆಯನ್ನು ತಡೆಯಲು ಮುಂದಾಗಿದ್ದೇ ಜಾಫರ್ ಪ್ರಾಣಕ್ಕೆ ಕಂಟಕವಾಯಿತು. ಸ್ವಚ್ಚ ಭಾರತದ ಹೆಸರಿನಲ್ಲಿ ಅಧಿಕಾರಿಗಳು ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆ ವ್ಯಕ್ತಿ ಪ್ರತಿಭಟನೆ ನಡೆಸಿದ್ದರು. ಆ ವೇಳೆ ಅಧಿಕಾರಿಗಳು ಜಾಫರ್'ನನ್ನು ಚೆನ್ನಾಗಿ ಥಳಿಸಿದ್ದಾರೆ. ಗಂಭೀರವಾಗಿ ಗಾಯಗೊಂಡ ಜಾಫರ್'ನನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು.

ಜಾಫರ್ ಸಹೋದರ ನೂರ್ ಮಹಮ್ಮದ್ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಿದ್ದಾರೆ.