Asianet Suvarna News Asianet Suvarna News

(ವಿಡಿಯೊ)ಟ್ರಾಫಿಕ್ ದಂಡ ವಿಧಿಸಿದ ಪೊಲೀಸರ ಮೇಲೆ ಶಾಸಕಿಯ ಪತಿಯಿಂದ ಹಲ್ಲೆ

ತನ್ನ ಬೆಂಬಲಿಗರೊಂದಿಗೆ ಪೊಲೀಸ್ ಠಾಣೆಗೆ ದಾಳಿ ಮಾಡಿ ದಂಡವನ್ನು ರದ್ದುಗೊಳಿಸುವಂತೆ ಗಲಾಟೆ ನಡೆಸಿದ್ದಾನೆ. ಗಲಭೆಯಲ್ಲಿ ಒಬ್ಬ ಪೊಲೀಸ್ ಅಧಿಕಾರಿ ಹಾಗೂ ನಾಲ್ವರು ಪೇದೆಗಳ ಮೇಲೆ ಹಲ್ಲೆಯಾಗಿದೆ.

Rajasthan Lawmakers Husband Slaps Police Officer

ಕೋಟ(ಫೆ.21): ನಿಯಮ ಉಲ್ಲಂಘನೆಯ ದಂಡ ವಿಧಿಸಿದ ಟ್ರಾಫಿಕ್ ಪೊಲೀಸರ ಮೇಲೆ ಶಾಸಕಿಯ ಪತಿ ಹಾಗೂ ಆತನ ಬೆಂಬಲಿಗರು ಹಲ್ಲೆ ನಡೆಸಿದ ಘಟನೆ ರಾಜಸ್ತಾನದ ಕೋಟದಲ್ಲಿ ನಡೆದಿದೆ.

ಬಿಜೆಪಿ ಶಾಸಕಿ ಚಂದ್ರಕಾಂತ ಮೇಘವಾಲಾರ ಪತಿ ನರೇಶ್ ಮೇಘ'ವಾಲ್ ಅವರ ಕಾರ್ಯಕರ್ತನೊಬ್ಬ ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದ. ಸಂಚಾರಿ ನಿಯಮ ಉಲ್ಲಂಘಿಸಿದ್ದಕ್ಕಾಗಿ ಪೊಲೀಸರು ದಂಡ ವಿಧಿಸಿದ್ದರು. ಇದಕ್ಕೆ ಆಕ್ರೋಶಗೊಂಡ  ನರೇಶ್, ತನ್ನ ಬೆಂಬಲಿಗರೊಂದಿಗೆ ಪೊಲೀಸ್ ಠಾಣೆಗೆ ದಾಳಿ ಮಾಡಿ ದಂಡವನ್ನು ರದ್ದುಗೊಳಿಸುವಂತೆ ಗಲಾಟೆ ನಡೆಸಿದ್ದಾನೆ. ಗಲಭೆಯಲ್ಲಿ ಒಬ್ಬ ಪೊಲೀಸ್ ಅಧಿಕಾರಿ ಹಾಗೂ ನಾಲ್ವರು ಪೇದೆಗಳ ಮೇಲೆ ಹಲ್ಲೆಯಾಗಿದೆ. ಅಲ್ಲದೆ ಪೊಲೀಸ್ ಠಾಣೆಯ ಮೇಲೆ ಕಲ್ಲುಗಳಿಂದ ತೂರಾಟ ನಡೆಸಲಾಗಿದೆ.

ಹಲ್ಲೆ ನಡೆಸಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ಪೊಲೀಸರ ಮೇಲೆ ಹಲ್ಲೆ ನಡೆಸಿದ ಕಾರಣಕ್ಕಾಗಿ ನರೇಶ್ ಮೇಘವಾಲ್ ಹಾಗೂ ಆತನ 6 ಹೆಚ್ಚು ಬೆಂಬಲಿಗರ ಮೇಲೆ ದೂರು ದಾಖಲಾಗಿದೆ. ಆದರೆ ಶಾಸಕಿ ಮಾತ್ರ ವಿಭಿನ್ನ ಹೇಳಿಕೆ ನೀಡಿದ್ದು, ಪೊಲೀಸರೆ ನಮ್ಮ ಮೇಲೆ ಹಲ್ಲೆ ನಡೆಸಿದ ಕಾರಣ ನಮ್ಮ ಕಾರ್ಯಕರ್ತರು ಆಸ್ಪತ್ರೆ ಸೇರಿದ್ದಾರೆ ಎಂದು ತಮ್ಮ ತಪ್ಪನ್ನು ಪೊಲೀಸರ ಮೇಲೆಯೇ ಹಾಕಿದ್ದಾಳೆ.

ರಾಜಸ್ತಾನ ಸರ್ಕಾರ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಮುಖ್ಯಮಂತ್ರಿ ವಸುಂಧರಾ ರಾಜೆ ಸಿಂಧಿಯಾ, ಯಾರೇ ಕಾನೂನನ್ನು ಉಲ್ಲಂಘಿಸಿದರೂ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತದೆ'ಎಂದು ತಿಳಿಸಿದ್ದಾರೆ.

Follow Us:
Download App:
  • android
  • ios