ಪ್ರತಿ ದಿನ ಪರಿಸರ ಸಂರಕ್ಷಣೆಯ ಕೂಗು ಕೇಳಿ ಬರುತ್ತಲೇ ಇರುತ್ತದೆ. ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿರುವ ರಾಜರಾಜೇಶ್ವರಿ ನಗರದ ಐ ಕೇರ್ ಸಂಸ್ಥೆ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದೆ.ಏನಿದು ಹೊಸತನ ಈ ಸುದ್ದಿಯನ್ನು  ಓದಿ...

ಬೆಂಗಳೂರು[ಜು.10] 'ಆರ್ ಆರ್ ನಗರ- ಐ - ಕೇರ್' ಸಂಸ್ಥೆಯು ಜುಲೈ 15 ರಂದು ಬೆಳಗ್ಗೆ 7 ರಿಂದ 10 ರವರೆಗೆ, ​​'ನಮ್ಮ ಕಾಡಹಬ್ಬ' ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದೆ. ರಾಜರಾಜೇಶ್ವರಿ ನಗರದಲ್ಲಿರುವ ಸಂಸ್ಥೆ 2013 ರಿಂದ, 'ಹಸಿರು ಮತ್ತು ಸ್ವಚ್ಛ ಆರ್ ಆರ್ ನಗರ' ನಿರ್ಮಿಸುವ ಉದ್ದೇಶದೊಂದಿಗೆ ಕಾರ್ಯ ನಿರ್ವಹಿಸುತ್ತಿದೆ.

Add Asianetnews Kannada as a Preferred SourcegooglePreferred

ಕಾಡು ಹಬ್ಬದ ಪ್ರಯುಕ್ತ ನಗರದ ಹೊರವಲಯದಲ್ಲಿರುವ ತುರಹಳ್ಳಿ ಅರಣ್ಯ ಪ್ರದೇಶದಲ್ಲಿ ಒಂದು ಸಾವಿರ ಸಸಿಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕೆಲಸಕ್ಕೆ ವೃತ್ತಿಪರರು, ತಜ್ಞರು, ನಾಗರಿಕರು, ವರ್ತಕರು, ವ್ಯಾಪಾರಿಗಳು, ಉದ್ಯಮಿಗಳು, ವಿದ್ಯಾರ್ಥಿಗಳು, ಸ್ಥಳೀಯ ನಿವಾಸಿಗಳು, ಶಿಕ್ಷಣ ಸಂಸ್ಥೆಗಳು ಸೇರಿದಂತೆ, ನಾನಾ ಕ್ಷೇತ್ರದ ಸಂಘ-ಸಂಸ್ಥೆಗಳನ್ನು ಪಾಲುದಾರರಾಗಿ ಭಾಗವಹಿಸಲಿದ್ದಾರೆ.

ಸಸಿಗಳನ್ನು ಅರಣ್ಯ ಇಲಾಖೆ ಒದಗಿಸಲಿದೆ. ಲಿಯೊ ಪ್ಯಾಕರ್ಸ್ ಅಂಡ್ ಮೂವೆರ್ಸ್ , ಬಾಲಾಜಿ ಕನ್ ಸ್ಟ್ರಕ್ಷನ್ ಹಾಗೂ ಬೆಸ್ಟ್ ಕ್ಲಬ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಸಸಿ ನೆಡುವ ಕೆಲಸಕ್ಕೆ ಕೖ ಜೋಡಿಸಲಿವೆ. ಬಿಜಿಎಸ್ ಗ್ಲೋಬಲ್ ಆಸ್ಪತ್ರೆ ವೈದ್ಯಕೀಯ ನೆರವು ನೀಡುತ್ತಿದೆ. 

ಪರಿಸರ ಕಾಳಜಿಗೆ ಸ್ಟ್ಯಾಂಡರ್ಡ್ ಚಾರ್ಟರ್ಡ್, ಆರೆಕಲ್ ಸೇರಿದಂತೆ ಕಾರ್ಪೊರೇಟ್ ವಲಯದ ಹಲವು ಕಂಪನಿಗಳು ಮತ್ತು ಸ್ವಯಂ ಸೇವಾ ಕಾರ್ಯಕರ್ತರು ಕೈಜೋಡಿಸಿದ್ದಾರೆ. ಅರಣ್ಯದಲ್ಲಿ ಮರಗಳನ್ನು ಬೆಳೆಸುವ ಈ ಕಾರ್ಯಕ್ರಮಕ್ಕೆ ನಾಟಿ ಸಸಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಇಂಟರ್ ನ್ಯಾಶನಲ್ ಆರ್ಟ್ ಆ್ಯಂಡ್ ಕಲ್ಚರಲ್ ಫೌಂಡೇಶನ್ ಅಧ್ಯಕ್ಷ ಶ್ರೀವತ್ಸ ತಿಳಿಸಿದ್ದಾರೆ.