ಸರ್ಕಾರಿ ಗೌರವದೊಂದಿಗೆ ಶ್ರೀ ದೇವಿ ಅಂತಿಮ ಸಂಸ್ಕಾರ : ರಾಜ್ ಠಾಕ್ರೆ ಅಸಮಾಧಾನ

First Published 19, Mar 2018, 3:10 PM IST
Raj Thackeray Critises Sridevis state Funeral lashes out at Maharashtra govt
Highlights

ಮಹಾರಾಷ್ಟ್ರ ನವನಿರ್ಮಾಣ ಸೇನೆ ಸೇನೆ ಮುಖ್ಯಸ್ಥ ರಾಜ್ ಠಾಕ್ರೆ ಶ್ರೀ ದೇವಿ ಸಾವಿನ ವೇಳೆ ಸರ್ಕಾರಿ ಗೌರವದೊಂದಿಗೆ ಅಂತ್ಯ ಸಂಸ್ಕಾರ ನೆರವೇರಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಮುಂಬೈ : ಮಹಾರಾಷ್ಟ್ರ ನವನಿರ್ಮಾಣ ಸೇನೆ ಸೇನೆ ಮುಖ್ಯಸ್ಥ ರಾಜ್ ಠಾಕ್ರೆ ಶ್ರೀ ದೇವಿ ಸಾವಿನ ವೇಳೆ ಸರ್ಕಾರಿ ಗೌರವದೊಂದಿಗೆ ಅಂತ್ಯ ಸಂಸ್ಕಾರ ನೆರವೇರಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಮಾಧ್ಯಮಗಳಲ್ಲಿಯೂ ಕೂಡ ಶ್ರೀ ದೇವಿ ವಿಚಾರವೇ ಅನೇಕ ದಿನಗಳ ಕಾಲ ಚರ್ಚೆಯ ವಿಷಯವಾಗಿದ್ದರ ಸಂಬಂಧವೂ ಕೂಡ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ನಡೆದ ಸಭೆಯಲ್ಲಿ ಮಾತನಾಡುತ್ತಾ ಠಾಕ್ರೆ ಈ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ.

ಶ್ರೀ ದೇವಿ ಅವರ ಸಾವಿನ ವೇಳೆ  ತ್ರಿವರ್ಣ ಧ್ವಜವನ್ನು ಹಾಕಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ಸಂಸ್ಕಾರ ನೆರವೇರಿಸಲಾಗಿತ್ತು. ಈ ಬಗ್ಗೆ ಮಹಾರಾಷ್ಟ್ರ ಸರ್ಕಾರ ಅವರು ಪದ್ಮಶ್ರೀ ಪ್ರಶಸ್ತಿ ಭಾಜನರಾಗಿದ್ದರು ಎನ್ನುವ ಸಮರ್ಥನೆಯನ್ನು ನೀಡಿತು. ಆದರೆ ಇದು ಸರ್ಕಾರ ಮಾಡಿರುವ ತಪ್ಪು ಎಂದು ಅವರು ಹೇಳಿದ್ದಾರೆ.

loader