ರಾಜ್ಯದಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ಪ್ರತ್ಯೇಕ ಪ್ರಕರಣದಲ್ಲಿ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನಲ್ಲಿ ಮರ ಉರುಳಿ ಇಬ್ಬರು, ಬೆಳಗಾವಿ ಜಿಲ್ಲೆ ಮೂನವಳ್ಳಿಯಲ್ಲಿ ಬೈಕ್‌ಗೆ ಸಿಡಿಲು ಬಡಿದು ಓರ್ವ ಸಾವನ್ನಪ್ಪಿದ್ದಾರೆ. ಹುಣಸೂರು- ಎಚ್.ಡಿ.ಕೋಟೆ ಮುಖ್ಯ ರಸ್ತೆಯ ಆಜಾದ್‌ನಗರದಲ್ಲಿ ಮಳೆಗಾಳಿಯಿಂದ ಒಣಗಿದ್ದ ಬಸರೀ ಮರ ಉರುಳಿ ಬಿದ್ದಿದೆ.
ಬೆಂಗಳೂರು( ಏ11): ರಾಜ್ಯದಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ಪ್ರತ್ಯೇಕ ಪ್ರಕರಣದಲ್ಲಿ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನಲ್ಲಿ ಮರ ಉರುಳಿ ಇಬ್ಬರು, ಬೆಳಗಾವಿ ಜಿಲ್ಲೆ ಮೂನವಳ್ಳಿಯಲ್ಲಿ ಬೈಕ್ಗೆ ಸಿಡಿಲು ಬಡಿದು ಓರ್ವ ಸಾವನ್ನಪ್ಪಿದ್ದಾರೆ. ಹುಣಸೂರು- ಎಚ್.ಡಿ.ಕೋಟೆ ಮುಖ್ಯ ರಸ್ತೆಯ ಆಜಾದ್ನಗರದಲ್ಲಿ ಮಳೆಗಾಳಿಯಿಂದ ಒಣಗಿದ್ದ ಬಸರೀ ಮರ ಉರುಳಿ ಬಿದ್ದಿದೆ. ಈ ವೇಳೆ ಬೈಕ್ನಲ್ಲಿ ತೆರಳುತ್ತಿದ್ದ ಚಿಕ್ಕಹುಣಸೂರಿನ ಮಹೇಶ್(೩೮), ಆಗಷ್ಟೇ ಟೀ ಕುಡಿದು ಕ್ಯಾಂಟೀನ್ನಿಂದ ಹೊರಬಂದ ರಾಮೇನಹಳ್ಳಿಯ ಪ್ರಕಾಶ್ (೬೦) ಇದೇ ಮರದಡಿ ಸಿಲುಕಿ ಮೃತಪಟ್ಟಿದ್ದಾರೆ. ಇನ್ನಿಬ್ಬರಿಗೆ ತಲೆಗೆ ಪೆಟ್ಟು ಬಿದ್ದಿದ್ದು, ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಬೆಳಗಾವಿ ಜಿಲ್ಲೆ ಮುನವಳ್ಳಿ ಪಟ್ಟಣದ ನಿವಾಸಿ ಮಲ್ಲಿಕಾರ್ಜುನ ಕಾಶಪ್ಪ ಬಜಂತ್ರಿ (೨೨) ಬೈಕ್ನಲ್ಲಿ ಬರುತ್ತಿದ್ದಾಗ ಸಿಡಿಲು ಬಡಿದು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಮಂಗಳವಾರವೂ ಉತ್ತಮ ಮಳೆಯಾಗಿದೆ. ಭದ್ರಾವತಿಯ ಕೆಲವೆಡೆ ಬಾರಿ ಗಾಳಿ ಮಳೆಗೆ ೫೦ಕ್ಕೂ ಹೆಚ್ಚು ವಿದ್ಯುತ್ ಕಂಬಗಳು, ೧೦೦ಕ್ಕೂ ಹೆಚ್ಚು ಮರಗಳು ಧರೆಗುರುಳಿರುವ ಘಟನೆ ಮಂಗಳವಾರ ನಡೆದಿದೆ. ಮಂಡ್ಯ ಜಿಲ್ಲಾದ್ಯಂತ ಆಲಿಕಲ್ಲು ಸಹಿತ ಮಳೆಯಾಗಿದ್ದು, ಕೆ.ಆರ್.ಪೇಟೆಯ ವಿವಿಧೆಡೆ ಹಾನಿ ಮಾಡಿದೆ.
ಕೊಡಗು ಜಿಲ್ಲೆಯಲ್ಲಿ ಮಂಗಳವಾರವೂ ಉತ್ತಮ ಮಳೆಯಾಗಿದೆ. ಮುಂಡಗೋಡ ತಾಲೂಕಿನ ಇಂದೂರ, ಹುನಗುಂದ ಮತ್ತು ಅಗಡಿ ಗ್ರಾಮಗಳಲ್ಲಿ ಸೋಮವಾರ ರಾತ್ರಿ ಭಾರಿ ಗಾಳಿ ಮಳೆಯಿಂದಾಗಿ ಸುಮಾರು ಹತ್ತಕ್ಕೂ ಹೆಚ್ಚು ಮನೆಗಳಿಗೆ ಹಾನಿ ಉಂಟಾಗಿದ್ದು, ಬಾಳೆ ಗಿಡ ಸೇರಿದಂತೆ ತೋಟದ ಬೆಳೆಗಳಿಗೂ ಹಾನಿಯಾಗಿದೆ. ಹಿರೇಕೆರೂರು ಪಟ್ಟಣದಲ್ಲಿ ಮಂಗಳವಾರ ಸಂಜೆ ಸುರಿದ ಆಲಿಕಲ್ಲು ಮಳೆ ಹಾಗೂ ಬಿರುಗಾಳಿಗೆ ಅಪಾರ ಪ್ರಮಾಣದಲ್ಲಿ ಹಾನಿಯಾದ ವರದಿ ಆಗಿದೆ. ಕಾರ್ಕಳ ತಾಲೂಕಿನಲ್ಲಿ ಮಂಗಳವಾರ ವಿವಿಧ ಕಡೆಗಳಲ್ಲಿ ಮಳೆ ಸುರಿದಿದೆ. ಭದ್ರಾವತಿಯ ಕೆಲವೆಡೆ ಬಾರಿ ಗಾಳಿ ಮಳೆಗೆ ೫೦ಕ್ಕೂ ಹೆಚ್ಚು ವಿದ್ಯುತ್ ಕಂಬಗಳು, ೧೦೦ಕ್ಕೂ ಹೆಚ್ಚು ಮರಗಳು ಧರೆಗುರುಳಿರುವ ಘಟನೆ ಮಂಗಳವಾರ ನಡೆದಿದೆ. ಮಂಡ್ಯ ಜಿಲ್ಲಾದ್ಯಂತ ಆಲಿಕಲ್ಲು ಸಹಿತ ಮಳೆಯಾಗಿದ್ದು, ಕೆ.ಆರ್.ಪೇಟೆಯ ವಿವಿಧೆಡೆ ಹಾನಿ ಮಾಡಿದೆ.
