ನವದೆಹಲಿ :  ಭಾರತೀಯ ರೈಲ್ವೆ ಇಲಾಖೆ ತನ್ನ ಪ್ರಯಾಣಿಕರಿಗೆ ಭರ್ಜರಿ ಗುಡ್ ನ್ಯೂಸ್ ಒಂದನ್ನು ನೀಡಿದೆ. ದೀಪಾವಳಿಯ ಈ ಸಂದರ್ಭದಲ್ಲಿ  ಪ್ರಯಾಣಿಕರ ಸಂಖ್ಯೆಯು ಹೆಚ್ಚಳವಾಗುವ ಕಾರಣ ಹೆಚ್ಚುವರಿ ರೈಲು ಬಿಡಲು ತೀರ್ಮಾನ ಮಾಡಲಾಗಿದೆ. 

ಉತ್ತರ ವಲಯದ ರೈಲ್ವೆಯು ಹೆಚ್ಚುವರಿ ರೈಲು ಸೇವೆಯನ್ನು ನೀಡಲು ನಿರ್ಧರಿಸಿದೆ. 

ನವೆಂಬರ್ 7, 14, 21 ರಂದು ವಿಶೇಷ ರೈಲು ಪ್ರಯಾಣಿಸಲಿದೆ. ಒಟ್ಟು 19 ಬೋಗಿಗಳನ್ನು ಈ ವಿಶೇಷ ರೈಲು ಹೊಂದಿದ್ದು,  ಲೋಕಮಾನ್ಯ ತಿಲಕ್ ಟರ್ಮಿನಲ್ ನಿಂದ ಮಂಡುವಾಡಿಯ ಪ್ರದೇಶದಲ್ಲಿ ಪ್ರಯಾಣಿಸುತ್ತದೆ. 

ಅಲ್ಲದೇ ದೀಪಾವಳಿ ಸಂದರ್ಭದಲ್ಲಿ ರೈಲ್ವೆ ಇಲಾಖೆ ತನ್ನ ಟಿಕೆಟ್ ದರದಲ್ಲಿಯೂ ಕೂಡ ಹೆಚ್ಚುವರಿಯಾಗಿ ಡಿಸ್ಕೌಂಟ್ ನೀಡುತ್ತಿದೆ.