ಆರ್ಥಿಕವಾಗಿ ಹಿಂದುಳಿದವರಿಗೆ ಶೇ.10ರಷ್ಟುಮೀಸಲು ನೀಡುವ ಸರ್ಕಾರದ ನೀತಿಯ ಅನ್ವಯ, ಮುಂದಿನ 2 ವರ್ಷದಲ್ಲಿ ರೈಲ್ವೆ ಸಚಿವಾಲಯವು, ಮೇಲ್ವರ್ಗದ 23000 ಜನರಿಗೆ ಉದ್ಯೋಗ ಕಲ್ಪಿಸಿಕೊಡಲಿದೆ
ನವದೆಹಲಿ: ಮೇಲ್ವರ್ಗದಲ್ಲಿನ ಆರ್ಥಿಕವಾಗಿ ಹಿಂದುಳಿದವರಿಗೆ ಶೇ.10ರಷ್ಟುಮೀಸಲು ನೀಡುವ ಸರ್ಕಾರದ ನೀತಿಯ ಅನ್ವಯ, ಮುಂದಿನ 2 ವರ್ಷದಲ್ಲಿ ರೈಲ್ವೆ ಸಚಿವಾಲಯವು, ಮೇಲ್ವರ್ಗದ 23000 ಜನರಿಗೆ ಉದ್ಯೋಗ ಕಲ್ಪಿಸಿಕೊಡಲಿದೆ ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ಪ್ರಕಟಿಸಿದ್ದಾರೆ.
ಈ ಮೂಲಕ ಮೇಲ್ವರ್ಗ ಮೀಸಲನ್ನು ಜಾರಿಗೆ ತಂದ ಕೇಂದ್ರದ ಮೊದಲ ಸಚಿವಾಲಯವಾಗಲಿದೆ ಎಂದು ಹೇಳಿದ್ದಾರೆ. 2019ರ ಫೆ.1ರಿಂದ ಕೇಂದ್ರ ಸರ್ಕಾರದ ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ಉದ್ಯೋಗದಲ್ಲಿ ಮೇಲ್ವರ್ಗದಲ್ಲಿನ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲು ಸೌಲಭ್ಯ ಸಿಗಲಿದೆ.
ಕೇಂದ್ರದ ಜೊತೆಗೆ ಕೆಲ ರಾಜ್ಯ ಸರ್ಕಾರಗಳು ಈಗಾಗಲೇ ಮೀಸಲು ಜಾರಿ ಮಾಡುವುದಾಗಿ ಘೋಷಿಸಿವೆ.

Last Updated 24, Jan 2019, 11:43 AM IST