ರಾಮ ಮಂದಿರದ ರೀತಿಯಲ್ಲೇ ಅಯೋಧ್ಯೆಯಲ್ಲಿ ರೈಲ್ವೆ ನಿಲ್ದಾಣ : ಕೇಂದ್ರಕ್ಕೆ ಪ್ರಸ್ತಾವನೆ

First Published 21, Feb 2018, 12:27 PM IST
Railways proposes to Build Ayodhya Railway station as Ram temple replica  Manoj Sinha
Highlights

ಕೇಂದ್ರ ಸಚಿವ ಮನೋಜ್ ಸಿನ್ಹಾ ಅವರು ಆಯೋಧ್ಯಾ ರೈಲ್ವೆ ನಿಲ್ದಾಣವನ್ನು ರಾಮಮಂದಿರದ ರೀತಿಯಲ್ಲೇ ನಿರ್ಮಾಣ ಮಾಡಬೇಕು ಎಂದು ರೈಲ್ವೆ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ.

ಅಯೋಧ್ಯೆ : ಕೇಂದ್ರ ಸಚಿವ ಮನೋಜ್ ಸಿನ್ಹಾ ಅವರು ಆಯೋಧ್ಯಾ ರೈಲ್ವೆ ನಿಲ್ದಾಣವನ್ನು ರಾಮಮಂದಿರದ ರೀತಿಯಲ್ಲೇ ನಿರ್ಮಾಣ ಮಾಡಬೇಕು ಎಂದು ರೈಲ್ವೆ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ.

ಅಯೊಧ್ಯೆಯಲ್ಲಿ  ರೈಲ್ವೆ ನಿಲ್ದಾಣವನ್ನು ಪುನರ್ ನಿರ್ಮಾಣ ಮಾಡಲು ಘೋಷಿಸಿದ ಬೆನ್ನಲ್ಲೇ ಈ ಪ್ರಸ್ತಾವನೆ ಸಲ್ಲಿಸಿದ್ದಾರೆ. ಒಟ್ಟು 200 ಕೋಟಿ ರು. ವೆಚ್ಚದಲ್ಲಿ ಕೆಲವು ರೈಲ್ವೆ ನಿಲ್ದಾಣಗಳನ್ನು ಪುನರ್ ನಿರ್ಮಾಣ ಮಾಡಲಾಗುತ್ತಿದ್ದು, ಒಟ್ಟು 80 ಕೋಟಿ ವೆಚ್ಚದಲ್ಲಿ ಅಯೋಧ್ಯೆಯಲ್ಲಿ ರೈಲ್ವೆ ನಿಲ್ದಾಣವನ್ನು ಪುನರ್ ನಿರ್ಮಾಣ ಮಾಡುವುದಾಗಿ  ಸರ್ಕಾರ ಘೋಷಣೆ ಮಾಡಿದೆ.

ದೇಶದ ವಿವಿಧ ಪ್ರದೇಶಗಳಿಂದ ಇಲ್ಲಿಗೆ ಆಗಮಿಸುವ ಭಕ್ತರಿಗೆ ನೇರ ಸಂಪರ್ಕ ಕಲ್ಪಿಸಲು ವಿಶಿಷ್ಟವಾಗಿ ಅಯೋಧ್ಯೆಯಲ್ಲಿ ರೈಲ್ವೆ ನಿಲ್ದಾಣವನ್ನು ಪುನರ್ ನಿರ್ಮಾಣ ಮಾಡಲಾಗುತ್ತಿದೆ.

loader