ಅಲಿಗಢ : ಪುಲ್ವಾಮದಲ್ಲಿ ನಡೆದ ಭೀಕರ ಉಗ್ರರ ದಾಳಿಯಲ್ಲಿ 44 ಯೋಧರು ವೀರಮರಣವನ್ನಪ್ಪಿದ್ದಾರೆ. ಈ ಘಟನೆಗೆ ಇಡೀ ದೇಶವೇ ಕಂಬನಿ ಮಿಡಿಯುತ್ತಿದೆ. ಆದರೆ ಕೆಲವು  ವಿಕೃತ ಮನಸ್ಥಿತಿಗಳು ಇಂತಹ ಸಂದರ್ಭದಲ್ಲಿಯೂ ಕೂಡ ತಮ್ಮ ಕೊಂಕನ್ನು ಮುಂದುವರಿಸಿವೆ. 

ಇಲ್ಲಿನ ರೈಲು ನಿಲ್ದಾಣದಲ್ಲಿ ಕೆಲವು ಪ್ರಯಾಣಿಕರು ಪುಲ್ವಾಮಾ ದಾಳಿಯಲ್ಲಿ ಮೃತರಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸುವ ವೇಳೆ ಕಿರಿಯ ಟಿಕೆಟ್ ತಪಾಸಕ ಉಪೇಂದ್ರ ಕುಮಾರ ಬಹಾದ್ದೂರ್ ಸಿಂಗ್ (39) ಎಂಬಾತ ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಕೂಗಿದ.

ಈ ಹಿನ್ನೆಲೆಯಲ್ಲಿ ಅತನನ್ನು ದೇಶದ ಸಮಗ್ರತೆಗೆ ಧಕ್ಕೆ ತಂದ (153-ಬಿ) ಸೆಕ್ಷನ್ ಅಡಿ ಕೇಸು ಹಾಕಿ ಬಂಧಿಸಲಾಗಿದೆ.