’ಬಿಜೆಪಿ, ಕೇಂದ್ರ ಸರ್ಕಾರದವರು ಡೋಂಗಿ ಹಿಂದುತ್ವವಾದಿಗಳು’

First Published 8, Mar 2018, 3:48 PM IST
Raichuru Siddaganga Swamiji Slams BJp And Central Govt
Highlights

ಬಿಜೆಪಿ ಹಾಗೂ ಕೇಂದ್ರ ಸರ್ಕಾರದವರು ಡೋಂಗಿ ಹಿಂದುತ್ವವಾದಿಗಳು.  ಯೋಗಿ ಬರಲಿ, ಮೋದಿ ಬರಲಿ ರಾಜ್ಯದಲ್ಲಿ ಶಿವಸೇನೆಯನ್ನು ಬೆಂಬಲಿಸುತ್ತಾರೆ.  ಹಿಂದುತ್ವಕ್ಕಾಗಿ ದುಡಿದವರನ್ನು ಬಿಜೆಪಿ ಮೂಲೆಗುಂಪು ಮಾಡಿದೆ ಎಂದು ರಾಯಚೂರಿನಲ್ಲಿ ಆಂದೋಲ ಮಠದ ಸಿದ್ದಲಿಂಗ ಸ್ವಾಮೀಜಿ ವಾಗ್ದಾಳಿ ನಡೆಸಿದ್ದಾರೆ.

ರಾಯಚೂರು (ಮಾ. 08): ಬಿಜೆಪಿ ಹಾಗೂ ಕೇಂದ್ರ ಸರ್ಕಾರದವರು ಡೋಂಗಿ ಹಿಂದುತ್ವವಾದಿಗಳು.  ಯೋಗಿ ಬರಲಿ, ಮೋದಿ ಬರಲಿ ರಾಜ್ಯದಲ್ಲಿ ಶಿವಸೇನೆಯನ್ನು ಬೆಂಬಲಿಸುತ್ತಾರೆ.  ಹಿಂದುತ್ವಕ್ಕಾಗಿ ದುಡಿದವರನ್ನು ಬಿಜೆಪಿ ಮೂಲೆಗುಂಪು ಮಾಡಿದೆ ಎಂದು ರಾಯಚೂರಿನಲ್ಲಿ ಆಂದೋಲ ಮಠದ ಸಿದ್ದಲಿಂಗ ಸ್ವಾಮೀಜಿ ವಾಗ್ದಾಳಿ ನಡೆಸಿದ್ದಾರೆ. 

ಕೇಂದ್ರ ಸರ್ಕಾರಕ್ಕೆ ಹಿಂದುಗಳ ಬಗ್ಗೆ ಗೌರವ ಇದ್ದಿದ್ರೆ ರಾಮ ಮಂದಿರ ನಿರ್ಮಾಣ ಮಾಡುತ್ತಿದ್ದರು.  ಮಂದಿರ್ ಬನಾಯೆಂಗೇ ಮಂದಿರ್ ಬನಾಯೆಂಗೇ ಮಾತ್ರ ಎನ್ನುತ್ತಿದ್ದಾರೆ ಆದರೆ ಅದನ್ನು ಕಾರ್ಯ ರೂಪಕ್ಕೆ ಮಾತ್ರ ತರುತ್ತಿಲ್ಲ ಎಂದಿದ್ದಾರೆ.  ಸಿಎಂ ಸಿದ್ದರಾಮಯ್ಯ ಬಾಂಗ್ ಕೂಗಿದ ತಕ್ಷಣ ಭಾಷಣ ನಿಲ್ಲಿಸಿದರು. ಆಗ ಬಿಜೆಪಿಯ ಬಾಲ ಬಾಲಬಡಕರು ಸಿಎಂ ಸಿದ್ದರಾಮಯ್ಯನ್ನು ಟೀಕೆ ಮಾಡಿದ್ರು.  ಪ್ರಧಾನಿ ನರೇಂದ್ರ ಮೋದಿ ಕೂಡ ಬಾಂಗ್ ಕೇಳಿ ಭಾಷಣ ನಿಲ್ಲಿಸಿದ್ದರು.  ಆಗ ಭಕ್ತರು ಪ್ರಧಾನಿಯಾಗಿ ಕರ್ತವ್ಯ ನಿಭಾಯಿಸುತ್ತಿದ್ದಾರೆ ಎಂದರು.  ಬಿಜೆಪಿಯವರು ಡೋಂಗಿ ಎನ್ನಲು ಇದೇ ಸಾಕ್ಷಿ.  ಭ್ರಷ್ಟಾಚಾರದ ಕರಾಳ ಮುಖಕ್ಕೆ ಕೇಸರಿ ಬಣ್ಣ ಹಚ್ಚಿಕೊಂಡಿದ್ದಾರೆ ಎಂದು ಟೀಕಿಸಿದ್ದಾರೆ. 
 

loader