ರಾಹುಲ್ ಗಾಂಧಿಗೆ ಯಲ್ಲಮ್ಮ ದೇವಿಯ ದರ್ಶನ ಮಾಡಿಸಿದ್ದು ಯಡಿಯೂರಪ್ಪ. ಆದರೆ, ಇವರು ಬಿಜೆಪಿ ರಾಜ್ಯಾಧ್ಯಕ್ಷ ಅಲ್ಲ. ಸವದತ್ತಿ ಯಲ್ಲಮ್ಮದೇವಿಯ ಪ್ರಧಾನ ಅರ್ಚಕರ ಹೆಸರು ಯಡಿಯೂರಪ್ಪ!

ಬೆಳಗಾವಿ : ರಾಹುಲ್ ಗಾಂಧಿಗೆ ಯಲ್ಲಮ್ಮ ದೇವಿಯ ದರ್ಶನ ಮಾಡಿಸಿದ್ದು ಯಡಿಯೂರಪ್ಪ. ಆದರೆ, ಇವರು ಬಿಜೆಪಿ ರಾಜ್ಯಾಧ್ಯಕ್ಷ ಅಲ್ಲ. ಸವದತ್ತಿ ಯಲ್ಲಮ್ಮದೇವಿಯ ಪ್ರಧಾನ ಅರ್ಚಕರ ಹೆಸರು ಯಡಿಯೂರಪ್ಪ!

ಜಮೀನಿನಲ್ಲಿ ರೈತರ ಭೇಟಿ

ಗೊಡಚಿಯಲ್ಲಿ ಸಮಾವೇಶದ ಬಳಿಕ ರಾಹುಲ್ ಮಾರ್ಗದುದ್ದಕ್ಕೂ ಕೆಲ ಗ್ರಾಮಗಳಲ್ಲಿ ಜನರತ್ತ ಕೈಬೀಸಿ ಸಾಗಿದರು.

ಚಿಲಮುರು ಗ್ರಾಮದ ಸಮೀಪ ರಾಹುಲ್ ಬಸ್‌ನಿಂದಿಳಿದು ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತ ಭೀಮಪ್ಪ ನಿಂಗಪ್ಪ ಮಾರನ್ನವರ ಜತೆ ಮಾತನಾಡಿದರು.