ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಫೆ.24ರಿಂದ ಕೈಗೊಳ್ಳಲಿರುವ ತಮ್ಮ ಎರಡನೇ ಹಂತದ ಜನಾಶೀರ್ವಾದ ಪ್ರವಾಸದ ವೇಳೆ ಮಹದಾಯಿ ವಿಚಾರದ ಬಗ್ಗೆ ತಮ್ಮ ನಿಲುವು ಪ್ರಕಟಪಡಿಸುವ ಸಾಧ್ಯತೆಯಿದೆ.

ಬೆಂಗಳೂರು : ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಫೆ.24ರಿಂದ ಕೈಗೊಳ್ಳಲಿರುವ ತಮ್ಮ ಎರಡನೇ ಹಂತದ ಜನಾಶೀರ್ವಾದ ಪ್ರವಾಸದ ವೇಳೆ ಮಹದಾಯಿ ವಿಚಾರದ ಬಗ್ಗೆ ತಮ್ಮ ನಿಲುವು ಪ್ರಕಟಪಡಿಸುವ ಸಾಧ್ಯತೆಯಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಹದಾಯಿ ನದಿ ನೀರು ಹಂಚಿಕೆ ವಿವಾದ ಬಗೆ​ಹ​ರಿ​ಸಲು ತನ್ನಿಂದ ಆಗು​ವು​ದಿಲ್ಲ ಎಂದು ಕಾಂಗ್ರೆಸ್‌ ಹೇಳಲಿ, ಅನಂತರ ಬಿಜೆಪಿ ಈ ವಿಚಾ​ರ​ದಲ್ಲಿ ಮಧ್ಯ​ಪ್ರ​ವೇ​ಶಿ​ಸು​ತ್ತದೆ ಎಂದು ಆ ಪಕ್ಷದ ಅಧ್ಯಕ್ಷ ಅಮಿತ್‌ ಶಾ ಸವಾಲು ಹಾಕಿದ ಬೆನ್ನಲ್ಲೇ ಗುರು​ವಾರ ಸುದ್ದಿ​ಗೋಷ್ಠಿ ನಡೆ​ಸಿದ ಕೆಪಿ​ಸಿಸಿ ಅಧ್ಯಕ್ಷ ಡಾ. ಜಿ. ಪರ​ಮೇ​ಶ್ವರ್‌ ಈ ಸುಳಿವು ನೀಡಿ​ದ​ರು.

‘ರಾಹುಲ್‌ ಗಾಂಧಿ ಫೆ. 24ರಿಂದ ಮೂರು ದಿನಗಳ ಕಾಲ ಮುಂಬೈ ಕರ್ನಾಟಕದಲ್ಲಿ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿಕೊಳ್ಳುವರು. ಈ ಪ್ರವಾಸದ ವೇಳೆ ಅವರು ಮಹದಾಯಿ ವಿಚಾರದಲ್ಲಿ ತಮ್ಮ ನಿಲುವು ಪ್ರಕಟಪಡಿಸುವ ಸಾಧ್ಯತೆಯೂ ಇದೆ’ ಎಂದು ಅವರು ಹೇಳಿ​ದ​ರು. ರಾಹುಲ್‌ ರಾಜ್ಯ ಪ್ರವಾ​ಸದ ವೇಳೆ ಹುಬ್ಬಳ್ಳಿ, ಬೆಳಗಾವಿ ಭೇಟಿ ವೇಳೆ ಮುತ್ತಿಗೆ ಹಾಕಿ ಮನವಿ ಪತ್ರ ಸಲ್ಲಿಸುವುದಾಗಿ ಮಹಾ​ದಾಯಿ ಹೋರಾ​ಟ​ಗಾ​ರರು ಬುಧವಾರ ಹೇಳಿದ್ದರು. ಈ ನಡುವೆ ಬಿಜೆಪಿ ಅಧ್ಯ​ಕ್ಷರು ಕೂಡ ಕಾಂಗ್ರೆಸ್‌ಗೆ ಸವಾಲು ಹಾಕಿ​ದ್ದರು.