ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ವಿದೇಶಾಂಗ ನೀತಿಯಲ್ಲಿ ಸಂಪೂರ್ಣ ವೈಲ್ಯ ಕಂಡಿದೆ. ಇದರಿಂದಾಗಿ ದೇಶದ ಎಲ್ಲಾ ನೆರೆ ರಾಷ್ಟ್ರಗಳೊಂದಿಗೆ ಭಾರತದ ಶತ್ರುತ್ವ ಬೆಳೆಯುತ್ತಿದೆ. ಭಾರತದ ಮಿತ್ರರಾಷ್ಟ್ರ ರಷ್ಯಾ ಇತಿಹಾಸದಲ್ಲೇ ಮೊದಲ ಬಾರಿಗೆ ನಮ್ಮ ಶತ್ರುರಾಷ್ಟ್ರ ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಪೂರೈಸುತ್ತಿದೆ. ಜಮ್ಮು ಕಾಶ್ಮೀರದಲ್ಲಿ ಭಾರತದ ಹಿಡಿತ ಕುಸಿಯುತ್ತಿದೆ. ಇಷ್ಟೆಲ್ಲ ಆಗಿದ್ದರೂ, ನರೇಂದ್ರ ಮೋದಿ ಮಾತ್ರ ವಿದೇಶಾಂಗ ನೀತಿ ಸುಧಾರಿಸುವುದು ಬಿಟ್ಟು, ದೇಶ ಒಡೆಯುವ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್‌ಗಾಂಧಿ ಟೀಕಿಸಿದ್ದಾರೆ.
ಬೆಂಗಳೂರು(ಆ.17): ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ವಿದೇಶಾಂಗ ನೀತಿಯಲ್ಲಿ ಸಂಪೂರ್ಣ ವೈಲ್ಯ ಕಂಡಿದೆ. ಇದರಿಂದಾಗಿ ದೇಶದ ಎಲ್ಲಾ ನೆರೆ ರಾಷ್ಟ್ರಗಳೊಂದಿಗೆ ಭಾರತದ ಶತ್ರುತ್ವ ಬೆಳೆಯುತ್ತಿದೆ. ಭಾರತದ ಮಿತ್ರರಾಷ್ಟ್ರ ರಷ್ಯಾ ಇತಿಹಾಸದಲ್ಲೇ ಮೊದಲ ಬಾರಿಗೆ ನಮ್ಮ ಶತ್ರುರಾಷ್ಟ್ರ ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಪೂರೈಸುತ್ತಿದೆ. ಜಮ್ಮು ಕಾಶ್ಮೀರದಲ್ಲಿ ಭಾರತದ ಹಿಡಿತ ಕುಸಿಯುತ್ತಿದೆ. ಇಷ್ಟೆಲ್ಲ ಆಗಿದ್ದರೂ, ನರೇಂದ್ರ ಮೋದಿ ಮಾತ್ರ ವಿದೇಶಾಂಗ ನೀತಿ ಸುಧಾರಿಸುವುದು ಬಿಟ್ಟು, ದೇಶ ಒಡೆಯುವ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ಗಾಂಧಿ ಟೀಕಿಸಿದ್ದಾರೆ.
ನಗರದಲ್ಲಿ ಕಾಂಗ್ರೆಸ್ ಸಾರ್ಥಕ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಕಾಶ್ಮೀರದಲ್ಲಿ ಅಶಾಂತಿ ನೆಲೆಸುವಂತೆ ಮಾಡಿದೆ ಎಂದರು. ಅಲ್ಲದೆ, ಸಮಾರಂಭದಲ್ಲಿ ಹಾಜರಿದ್ದ ಸಿದ್ದರಾಮಯ್ಯ ಅವರತ್ತ ತಿರುಗಿದ ಅವರು, ‘ಮುಖ್ಯಮಂತ್ರಿಯವರೇ ಪರಿಚಿತನೊಬ್ಬ ಕಳ್ಳರೊಂದಿಗೆ ಬಂದರೆ ನೀವು ಏನು ಮಾಡುತ್ತೀರಿ’ ಎಂದು ಪ್ರಶ್ನಿಸಿದರು. ಇದಕ್ಕೆ ಸಿಎಂ ಸಿದ್ದರಾಮಯ್ಯ, ಹೊಡೆದು ಕಳುಹಿಸುತ್ತೇನೆ ಎಂಬರ್ಥ ದಲ್ಲಿ ಕೈ ಸನ್ನೆ ಮಾಡಿದರು. ಆಗ ರಾಹುಲ್ ಹೌದಲ್ವ ಕಳ್ಳರೊಂದಿಗೆ ಬಂದರೆ ಹೊಡೆದು ಕಳಿಸುತ್ತೇವೆ. ಆದರೆ, ಮೋದಿ ಒಬ್ಬ ಪರಿಚಿತ ವ್ಯಕ್ತಿ ಮನೆಗೆ ಕಳ್ಳರನ್ನು ಕರೆದು ಕೊಂಡು ಬಂದರೂ ಆ ವ್ಯಕ್ತಿಯನ್ನು ತಬ್ಬಿಕೊಂಡು ಜೋಕಾಲಿ ಆಡುತ್ತಾರೆ (ಪಕ್ಕದಲ್ಲಿದ್ದ ಕೆಪಿಸಿಸಿ ಉಪಾಧ್ಯ ಬಿ.ಎಲ್. ಶಂಕರ್ನ್ನು ತಬ್ಬಿಕೊಂಡು ತೋರಿಸುತ್ತಾ).
ಇದಕ್ಕೆ ಉತ್ತಮ ಉದಾಹರಣೆ ಎಂದರೆ ನಮ್ಮ ಮಿತ್ರರಾಷ್ಟ್ರ ಭೂತಾನ್ ದೇಶಕ್ಕೆ ಚೀನಾ ದೇಶದ 1 ಸಾವಿರ ಮಂದಿ ಸೈನಿಕರು ಪ್ರವೇಶ ಮಾಡಿದಾಗ ಮೋದಿ ಚೀನಾದ ಅಧ್ಯಕ್ಷರನ್ನು ತಬ್ಬಿ ಜೋಕಾಲಿ ಆಡುತ್ತಿದ್ದರು ಎಂದರು
