ಜೆಡಿಎಸ್‌ಗೆ ಯಾವುದೇ ಸಿದ್ಧಾಂತ, ವಿಚಾರಧಾರೆ ಇಲ್ಲ ಎಂದು ಆರೋಪಿಸಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ತಾವು ಯಾರ ಪರವಿದ್ದೀರಿ ಎಂಬುದನ್ನು ಸ್ಪಷ್ಟಪಡಿಸುವಂತೆ ಸವಾಲು ಎಸೆದಿದ್ದಾರೆ.

ಮೈಸೂರು/ಮಂಡ್ಯ : ಜೆಡಿಎಸ್‌ಗೆ ಯಾವುದೇ ಸಿದ್ಧಾಂತ, ವಿಚಾರಧಾರೆ ಇಲ್ಲ ಎಂದು ಆರೋಪಿಸಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ತಾವು ಯಾರ ಪರವಿದ್ದೀರಿ ಎಂಬುದನ್ನು ಸ್ಪಷ್ಟಪಡಿಸುವಂತೆ ಸವಾಲು ಎಸೆದಿದ್ದಾರೆ.

ಮಂಡ್ಯ ಜಿಲ್ಲೆಯ ಕೆ.ಆರ್‌.ಪೇಟೆ, ಪಾಂಡವಪುರ, ಶ್ರೀರಂಗಪಟ್ಟಣ ಮತ್ತು ಮೈಸೂರು ನಗರಗಳಲ್ಲಿ ಭಾನುವಾರ ನಡೆದ ಕಾಂಗ್ರೆಸ್‌ನ ಜನಾಶೀರ್ವಾದ ಯಾತ್ರೆಯುದ್ದಕ್ಕೂ ಅವರು ಜೆಡಿಎಸ್‌ ಅನ್ನು ಸಂಘಪರಿವಾರದ ಬಿ ಟೀಂ ಎಂಬಂತಹ ಮಾತುಗಳನ್ನು ಪುನರುಚ್ಚರಿಸಿದರು. ಜೆಡಿಎಸ್‌ ಅಂದರೆ ಜನತಾದಳ ಸೆಕ್ಯುಲರ್‌ ಅಲ್ಲ, ಜನತಾದಳ ಸಂಘ ಪರಿವಾರ ಎಂದು ಅವರು ಮೂದಲಿಸಿದರು.

ಧರ್ಮ ಧರ್ಮಗಳ ಮಧ್ಯೆ, ಜಾತಿ ಜಾತಿಗಳ ಮಧ್ಯೆ ಜಗಳ ಮಾಡಿಸುವ ಬಿಜೆಪಿ ಒಂದೆಡೆಯಾದರೆ ಜೆಡಿಎಸ್‌ ಮತ್ತೊಂದೆಡೆ ಇದೆ. ಒಂದು ಕಾಲದಲ್ಲಿ ಜೆಡಿಎಸ್‌ ಎಂದರೆ ಜಾತ್ಯತೀತ ಎನ್ನಲಾಗಿತ್ತು. ಈ ಚುನಾವಣೆಯಲ್ಲಿ ಜನತಾದಳ ಸಂಘ ಪರಿವಾರ ಎಂಬಂತಾಗಿದೆ. ಜೆಡಿಎಸ್‌ಗೆ ಯಾವುದೇ ಸಿದ್ಧಾಂತ, ವಿಚಾರಧಾರೆ ಇಲ್ಲ. ಕರ್ನಾಟಕದಲ್ಲಿ ಜೆಡಿಎಸ್‌ ಬಿಜೆಪಿ ಪರವಾಗಿ ಇದೆಯೇ ಇಲ್ಲವೋ ಎಂಬುದನ್ನು ಜನರಿಗೆ ತಿಳಿಸಬೇಕು ಎಂದು ಆಗ್ರಹಿಸಿದರು.

ತಾವು ಬಡ ರೈತರ ಪರವಾಗಿದ್ದೀರಾ ಅಥವಾ ಬಂಡವಾಳಶಾಹಿಗಳ ಪರವಾಗಿದ್ದೀರಾ ಎಂಬುದನ್ನು ಜನ ನಿಮ್ಮಿಂದಲೇ ಕೇಳಲು ಬಯಸಿದ್ದಾರೆ. ಚುನಾವಣೆ ಕೆಲವೇ ದಿನದಲ್ಲಿ ಬರುತ್ತಿದೆ. ಇದೊಂದು ಸೈದ್ಧಾಂತಿಕ ಹೋರಾಟ. ಇದಕ್ಕಾಗಿ ಇಡೀ ಕಾಂಗ್ರೆಸ್‌ ಕಾರ್ಯಕರ್ತರು ಒಂದಾಗಿದ್ದಾರೆ. ಪ್ರತಿ ಬೂತ್‌ನಲ್ಲಿಯೂ ಬಿಜೆಪಿಗೆ ಸೋಲಿನ ರುಚಿ ತೋರಿಸಲು ಕಾಂಗ್ರೆಸ್‌ ಕಾತರವಾಗಿದೆ ಎಂದು ಅವರು ಹೇಳಿದರು.

ಬಿಜೆಪಿ ಮತ್ತು ಜೆಡಿಎಸ್‌ ಬಿ ಟೀಮ್‌ ಮಿತ್ರರು. ಬಿಜೆಪಿಯವರು ಹೆಚ್ಚು ಸುಳ್ಳು ಹೇಳುತ್ತಾರೆ. ಯಾವುದೇ ಕೆಲಸ ಮಾಡುವುದಿಲ್ಲ. ಜೆಡಿಎಸ್‌ನವರು ಅವಕಾಶವಾದಿಗಳು. ಅವರು ಇಬ್ಬರು ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದಿಲ್ಲ. ಕಾಂಗ್ರೆಸ್‌ ಪಕ್ಷ ಮಾತ್ರ ಅಧಿಕಾರಕ್ಕೆ ಬರಲಿದೆ ಎಂದು ತಿಳಿಸಿದರು.

ಧರ್ಮ ಧರ್ಮಗಳ ಮಧ್ಯೆ, ಜಾತಿ ಜಾತಿಗಳ ಮಧ್ಯೆ ಜಗಳ ಮಾಡಿಸುವ ಬಿಜೆಪಿ ಒಂದೆಡೆಯಾದರೆ ಜೆಡಿಎಸ್‌ ಮತ್ತೊಂದೆಡೆ ಇದೆ. ಒಂದು ಕಾಲದಲ್ಲಿ ಜೆಡಿಎಸ್‌ ಎಂದರೆ ಜಾತ್ಯತೀತ ಎನ್ನಲಾಗಿತ್ತು. ಈ ಚುನಾವಣೆಯಲ್ಲಿ ಜನತಾದಳ ಸಂಘ ಪರಿವಾರ ಎಂಬಂತಾಗಿದೆ. ಜೆಡಿಎಸ್‌ಗೆ ಯಾವುದೇ ಸಿದ್ಧಾಂತ, ವಿಚಾರಧಾರೆ ಇಲ್ಲ. ಕರ್ನಾಟಕದಲ್ಲಿ ಬಿಜೆಪಿ ಪರವಾಗಿ ಜೆಡಿಎಸ್‌ ಇದೆಯಾ ಇಲ್ಲವಾ ಎಂಬುದನ್ನು ಜನರಿಗೆ ತಿಳಿಸಬೇಕು.

- ರಾಹುಲ್‌ ಗಾಂಧಿ, ಕಾಂಗ್ರೆಸ್‌ ಅಧ್ಯಕ್ಷ