ಹ್ಯಾಟ್ರಿಕ್‌ ಸೋಲಿಗೆ ರಾಹುಲ್‌ ಮೊದಲ ಪ್ರತಿಕ್ರಿಯೆ

First Published 6, Mar 2018, 10:02 AM IST
Rahul Reaction About Congress Loss Election
Highlights

ಈಶಾನ್ಯದ ಮೂರು ರಾಜ್ಯಗಳಲ್ಲಿ ಸೋಲು ಅನುಭವಿಸಿದ ಎರಡು ದಿನಗಳ ಬಳಿಕ ಮೌನ ಮುರಿದಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಪ್ರದೇಶದ ಜನರ ತೀರ್ಪನ್ನು ಗೌರವಿಸುತ್ತೇನೆ ಮತ್ತು ಅವರ ವಿಶ್ವಾಸ ಮರಳಿ ಗಳಿಸಲು ಬದ್ಧನಾಗಿದ್ದೇನೆ ಎಂದಿದ್ದಾರೆ.

ನವದೆಹಲಿ: ಈಶಾನ್ಯದ ಮೂರು ರಾಜ್ಯಗಳಲ್ಲಿ ಸೋಲು ಅನುಭವಿಸಿದ ಎರಡು ದಿನಗಳ ಬಳಿಕ ಮೌನ ಮುರಿದಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಪ್ರದೇಶದ ಜನರ ತೀರ್ಪನ್ನು ಗೌರವಿಸುತ್ತೇನೆ ಮತ್ತು ಅವರ ವಿಶ್ವಾಸ ಮರಳಿ ಗಳಿಸಲು ಬದ್ಧನಾಗಿದ್ದೇನೆ ಎಂದಿದ್ದಾರೆ.

ಕಾಂಗ್ರೆಸ್‌ ಪಕ್ಷಕ್ಕಾಗಿ ದುಡಿದ ಪ್ರತಿಯೊಬ್ಬ ಕಾರ್ಯಕರ್ತನಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದೂ ಅವರು ಟ್ವೀಟ್‌ ಮಾಡಿದ್ದಾರೆ.

ತ್ರಿಪುರ, ಮೇಘಾಲಯ, ನಾಗಾಲ್ಯಾಂಡ್‌ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಿ ಎರಡು ದಿನಗಳ ಬಳಿಕ ರಾಹುಲ್‌ ಹೇಳಿಕೆ ಹೊರಬಿದ್ದಿದೆ. ಮೇಘಾಲಯದಲ್ಲಿ ಕಾಂಗ್ರೆಸ್‌ ಅಧಿಕಾರ ಕಳೆದುಕೊಂಡಿದ್ದರೆ, ತ್ರಿಪುರ, ನಾಗಾಲ್ಯಾಂಡ್‌ನಲ್ಲಿ ಶೂನ್ಯ ಸಾಧನೆ ಮಾಡಿದೆ.

loader