ಕೇರಳದ ಪ್ರವಾಹ ರಾಷ್ಟ್ರೀಯ ಮಟ್ಟದ ಪಕ್ಷಗಳ ನಡುವಿನ ವಾಕ್ ಸಮರಕ್ಕೂ ಒಂದು ರೀತಿಯಲ್ಲಿ ವೇದಿಕೆಯಾಗಿದೆ. ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸಂತ್ರಸ್ಥರ ನೆರವಿಗೆ ಕೇಂದ್ರ ಸರಕಾರ ಕೂಡಲೇ ಧಾವಿಸಬೇಕು ಎಂದು ಒತ್ತಾಯಿಸಿದ್ದಾರೆ.
ನವದೆಹಲಿ[ಆ.11] ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರವಾಹ ಪೀಡಿತ ಕೇರಳಕ್ಕೆ ಕೂಡಲೇ ಹಣ ಬಿಡುಗಡೆ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿಗೆ ಒತ್ತಾಯಿಸಿದ್ದಾರೆ. ಸಂತ್ರಸ್ಥರಿಗೆ ಪರಿಹಾರ ಮತ್ತು ಪುನರ್ವಸತಿ ಕಲ್ಪಿಸಲು ಕೇರಳ ಸರ್ಕಾರಕ್ಕೆ ಕೇಂದ್ರ ಸರಕಾರ ಸ್ಪಂದಿಸಬೇಕು ಎಂದು ಪತ್ರ ಬರೆದು ಒತ್ತಾಯಿಸಿದ್ದಾರೆ.
ಕೇರಳದ ಮೀನುಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. 30 ಕ್ಕೂ ಅಧಿಕ ಮಂದಿ ಜಲಪ್ರಳಯಕ್ಕೆ ತುತ್ತಾಗಿದ್ದಾರೆ. ಕೇಂದ್ರ ಸರಕಾರ ಕೂಡಲೆ ಸಕಲ ನೆರವು ನೀಡಬೇಕು ಎಂದು ಒತ್ತಾಯ ಮಾಡಿದ್ದಾರೆ. ಇನ್ನೊಂದು ಕಡೆ ಟ್ವೀಟ್ ಮಾಡಿರುವ ರಾಹುಲ್ ಕೇರಳದ ಸ್ಥಿತಿ ಶೀಘ್ರವಾಗಿ ಸುಧಾರಿಸಲಿ ಎಂದು ಪ್ರಾರ್ಥಿಸಿದ್ದಾರೆ.
ಇನ್ನೊಂದು ಕಡೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾಗೆ ತಿರುಗೇಟು ನೀಡಿರುವ ರಾಹುಲ್, ದಲಿತರ ಮೇಲಿನ ದೌರ್ಜನ್ಯದ ದಾಖಲೆ ಸಮಯವಿದ್ದಾಗ ಓದಿ ಎಂದು ನೀವು ನನಗೆ ಹೇಳಿದ್ದೀರಿ. ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ದಲಿತರ ಮೇಲೆ ಯಾವ ಯಾವ ಸಂದರ್ಭದಲ್ಲಿ ದೌರ್ಜನ್ಯವಾಗಿದೆ ಎಂಬ ಲೆಕ್ಕವನ್ನು ನೀಡಿದ್ದಾರೆ.
