Asianet Suvarna News Asianet Suvarna News

ಸಿದ್ದರಾಮಯ್ಯಗೆ ರಾಹುಲ್‌ ಗಾಂಧಿ ಕೊಟ್ಟ ಖಡಕ್ ಸೂಚನೆ

ಸಮ್ಮಿಶ್ರ ಸರ್ಕಾ​ರಕ್ಕೆ ಧಕ್ಕೆ​ಯಾ​ಗು​ವಂತಹ ನಡ​ವ​ಳಿಕೆ ತೋರ​ದಂತೆ ಕಾಂಗ್ರೆಸ್‌ ಶಾಸ​ಕ​ರನ್ನು ನಿಯಂತ್ರಿಸಿ’ ಎಂದು ಎಐ​ಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಕಾಂಗ್ರೆಸ್‌ನ ರಾಜ್ಯ ನಾಯ​ಕ​ತ್ವಕ್ಕೆ ತಾಕೀತು ಮಾಡಿ​ದ್ದಾ​ರೆ.

Rahul Gandhi Warns To Siddaramaiah About Dissident Leader
Author
Bengaluru, First Published Jan 31, 2019, 7:23 AM IST

ನವದೆಹಲಿ :  ‘ಲೋಕ​ಸಭೆ ಚುನಾ​ವಣೆ ಸಮೀ​ಪಿ​ಸಿ​ರುವ ಈ ಹಂತ​ದಲ್ಲಿ ರಾಜ್ಯದ ಸಮ್ಮಿಶ್ರ ಸರ್ಕಾ​ರಕ್ಕೆ ಧಕ್ಕೆಯಾದರೆ ಹಾಗೂ ಜೆಡಿ​ಎಸ್‌ ಜತೆಗಿನ ಮೈತ್ರಿಗೆ ಧಕ್ಕೆ​ಯಾ​ದರೆ ದೇಶಾ​ದ್ಯಂತ ಕಾಂಗ್ರೆಸ್‌ ಮೇಲೆ ಕೆಟ್ಟ ಪರಿ​ಣಾಮ ಬೀರ​ಲಿದೆ. ಹೀಗಾಗಿ ಸಮ್ಮಿಶ್ರ ಸರ್ಕಾ​ರಕ್ಕೆ ಧಕ್ಕೆ​ಯಾ​ಗು​ವಂತಹ ನಡ​ವ​ಳಿಕೆ ತೋರ​ದಂತೆ ಕಾಂಗ್ರೆಸ್‌ ಶಾಸ​ಕ​ರನ್ನು ನಿಯಂತ್ರಿಸಿ’ ಎಂದು ಎಐ​ಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಕಾಂಗ್ರೆಸ್‌ನ ರಾಜ್ಯ ನಾಯ​ಕ​ತ್ವಕ್ಕೆ ತಾಕೀತು ಮಾಡಿ​ದ್ದಾ​ರೆ.

ಸಮ್ಮಿಶ್ರ ಸರ್ಕಾ​ರ​ದಲ್ಲಿ ಉಂಟಾ​ಗಿ​ರುವ ಹೊಂದಾ​ಣಿಕೆ ಕೊರತೆ ಹಿನ್ನೆ​ಲೆ​ಯಲ್ಲಿ ಶಾಸ​ಕಾಂಗ ಪಕ್ಷದ ನಾಯಕ ಸಿದ್ದ​ರಾ​ಮಯ್ಯ ಹಾಗೂ ಕೆಪಿ​ಸಿಸಿ ಅಧ್ಯಕ್ಷ ದಿನೇಶ್‌ ಗುಂಡೂ​ರಾವ್‌ ಅವ​ರನ್ನು ದೆಹ​ಲಿಗೆ ಕರೆ​ಸಿ​ಕೊಂಡ ರಾಹುಲ್‌ ಗಾಂಧಿ ಅವರು ಈ ತಾಕೀತು ನೀಡಿ​ದರು ಎಂದು ಮೂಲ​ಗಳು ತಿಳಿ​ಸಿ​ವೆ.

‘ವೈಯ​ಕ್ತಿಕ ಒತ್ತಡಗಳು ಏನೇ ಇದ್ದರೂ ಮೈತ್ರಿಗೆ ಧಕ್ಕೆ​ಯಾ​ಗು​ವಂತಹ ಹೇಳಿ​ಕೆ​ಗ​ಳನ್ನು ಯಾರೂ ನೀಡ​ಬಾ​ರದು. ಈ ವಿಷ​ಯ​ವನ್ನು ಕಾಂಗ್ರೆಸ್‌ ಶಾಸ​ಕ​ರಿಗೆ ಸ್ಪಷ್ಟ​ಪ​ಡಿಸಿ. ಇದಾದ ನಂತ​ರವೂ ಯಾರಾ​ದರೂ ಮೈತ್ರಿ ಸರ್ಕಾ​ರದ ವಿರುದ್ಧ ಹೇಳಿಕೆ ನೀಡಿ​ದರೆ, ಅವರ ವಿರುದ್ಧ ಕ್ರಮ ಕೈಗೊಳ್ಳಿ’ ಎಂದು ಸಿದ್ದ​ರಾ​ಮಯ್ಯ ಹಾಗೂ ದಿನೇಶ್‌ ಗುಂಡೂ​ರಾ​ವ್‌ಗೆ ಸೂಚಿ​ಸಿ​ದರು ಎನ್ನ​ಲಾ​ಗಿ​ದೆ.

‘ಲೋಕ​ಸಭೆ ಚುನಾ​ವಣೆ ಈ ಹಂತ​ದಲ್ಲಿ ಜೆಡಿ​ಎಸ್‌ ಜತೆ ಮೈತ್ರಿಯನ್ನು ಕಾಂಗ್ರೆಸ್‌ ಕಡಿ​ದು​ಕೊಂಡರೆ ಅದು ದೇಶಾ​ದ್ಯಂತ ಪಕ್ಷದ ಮೇಲೆ ಕೆಟ್ಟಪರಿ​ಣಾಮ ಬೀರು​ತ್ತದೆ. ಈ ಸೂಕ್ಷ್ಮ​ವನ್ನು ಶಾಸ​ಕರು ಅರಿ​ತು​ಕೊ​ಳ್ಳ​ಬೇಕು. ಕ್ಷೇತ್ರದ ಕೆಲಸ ಹಾಗೂ ವರ್ಗಾ​ವಣೆ ಸೇರಿ​ದಂತೆ ಯಾವುದೇ ದೂರು​ಗ​ಳಿ​ದ್ದರೂ ಅದು ಪಕ್ಷದ ಮಟ್ಟ​ದಲ್ಲಿ ಚರ್ಚೆ​ಯಾ​ಗಲಿ. ಬಹಿ​ರಂಗ​ವಾಗಿ ಯಾರೂ ಹೇಳಿಕೆ ನೀಡದಂತೆ ಶಾಸ​ಕ​ರಿಗೆ ಸ್ಪಷ್ಟ​ವಾಗಿ ತಿಳಿಸಿ’ ಎಂದು ಅವರು ಹೇಳಿ​ದರು ಎಂದು ಮೂಲ​ಗಳು ಹೇಳಿ​ವೆ.

ಸಿದ್ದು ಸಮ​ಜಾ​ಯಿ​ಷಿ:

ಈ ವೇಳೆ ಸಿದ್ದ​ರಾ​ಮಯ್ಯ ಅವರು, ಕ್ಷೇತ್ರದ ಅಭಿ​ವೃದ್ಧಿ ಹಾಗೂ ವರ್ಗಾ​ವಣೆ ವಿಚಾ​ರ​ದಲ್ಲಿ ನಿರ್ಲಕ್ಷ್ಯ ತೋರು​ತ್ತಿ​ರು​ವು​ದ​ರಿಂದ ಒತ್ತ​ಡಕ್ಕೆ ಒಳ​ಗಾಗಿ ಪಕ್ಷದ ಕೆಲ ಶಾಸ​ಕರು ಅಸ​ಮಾ​ಧಾನ ತೋರ್ಪ​ಡಿ​ಸಿ​ರಬ​ಹುದು. ಆದ​ರೆ, ಸಮ್ಮಿಶ್ರ ಸರ್ಕಾ​ರ​ವನ್ನು ಸಂಕ​ಷ್ಟಕ್ಕೆ ದೂಡುವಂತಹ ನಡ​ವ​ಳಿ​ಕೆಯ​ನ್ನು ಕಾಂಗ್ರೆಸ್‌ ಶಾಸ​ಕರು ತೋರಿಲ್ಲ. ಬಿಜೆ​ಪಿಯ ಆಪ​ರೇ​ಷನ್‌ ಕಮ​ಲದ ಪರಿ​ಣಾ​ಮ​ವಾಗಿ ಸರ್ಕಾ​ರಕ್ಕೆ ಸಂಕಷ್ಟಉಂಟಾ​ದರೆ ಅದರ ಹೊಣೆ​ಯನ್ನು ಕಾಂಗ್ರೆಸ್‌ ಮೇಲೆ ಹಾಕಲು ಜೆಡಿ​ಎಸ್‌ ನಾಯ​ಕತ್ವ ಈ ವಿಚಾ​ರ​ವನ್ನು ದೊಡ್ಡದು ಮಾಡು​ತ್ತಿ​ದೆ ಎಂದು ಸಮ​ಜಾ​ಯಿಷಿ ನೀಡಿ​ದರು ಎಂದು ಮೂಲ​ಗಳು ಹೇಳಿ​ವೆ.

ಕೆಲ ಶಾಸ​ಕರು ತಮ್ಮ ಕ್ಷೇತ್ರದ ಕೆಲಸ ಕಾರ್ಯ​ಗಳು ನಡೆ​ಯದ ಬಗ್ಗೆ ಕೆಲ ಶಾಸ​ಕರು ಬಹಿ​ರಂಗ ಅಸ​ಮಾ​ಧಾನ ವ್ಯಕ್ತ​ಪ​ಡಿ​ಸಿ​ರ​ಬ​ಹುದು. ಆದರೆ, ಇದನ್ನು ಜೆಡಿ​ಎಸ್‌ ನಾಯ​ಕರು ದೊಡ್ಡ​ದಾಗಿ ಬಿಂಬಿ​ಸು​ತ್ತಿ​ದ್ದಾರೆ. ಇಷ್ಟಕ್ಕೂ ಈ ಶಾಸ​ಕರು ಸಮ್ಮಿಶ್ರ ಸರ್ಕಾ​ರ​ವ​ನ್ನಾ​ಗಲಿ ಅಥವಾ ಮುಖ್ಯ​ಮಂತ್ರಿ ಕುಮಾ​ರ​ಸ್ವಾಮಿ ಅವ​ರನ್ನು ನೇರ​ವಾಗಿ ಟೀಕಿ​ಸಿಲ್ಲ. ಇನ್ನು ತಾವು ಸೇರಿ​ದಂತೆ ಕಾಂಗ್ರೆ​ಸ್‌ನ ಯಾವೊಬ್ಬ ಪ್ರಮುಖ ನಾಯ​ಕರು ಸರ್ಕಾ​ರದ ವಿರುದ್ಧ ಒಂದು ಹೇಳಿ​ಕೆ​ಯನ್ನು ನೀಡಿಲ್ಲ. ವಾಸ್ತ​ವ​ವಾಗಿ ಕಾಂಗ್ರೆಸ್‌ ಶಾಸ​ಕರ ಕ್ಷೇತ್ರ​ಗ​ಳಿಗೆ ಸಂಬಂಧಿ​ಸಿ​ದಂತೆ ಅಭಿ​ವೃದ್ಧಿ ವಿಷ​ಯ​ದ​ಲ್ಲಿ ತಾರ​ತಮ್ಯ ನಡೆ​ದಿದೆ. ಹೀಗಾಗಿ, ಶಾಸ​ಕ​ರಲ್ಲಿ ಸರ್ಕಾ​ರದ ಕಾರ್ಯ​ ವೈ​ಖರಿ ಬಗ್ಗೆ ಅಸ​ಮಾ​ಧಾ​ನ​ವಿದೆ. ಆದರೆ, ಅತೃಪ್ತ ಶಾಸ​ಕ​ರನ್ನು ಹೊರ​ತು ​ಪ​ಡಿಸಿ ಸಮ್ಮಿಶ್ರ ಸರ್ಕಾ​ರಕ್ಕೆ ಧಕ್ಕೆ​ಯಾ​ಗು​ವಂತಹ ನಡ​ವ​ಳಿ​ಕೆ​ಯನ್ನು ತೋರಿಲ್ಲ’ ಎಂದು ಸಿದ್ದ​ರಾ​ಮಯ್ಯ ಸಮ​ರ್ಥಿ​ಸಿ​ಕೊಂಡರು ಎನ್ನ​ಲಾ​ಗಿ​ದೆ.

ಮೈತ್ರಿ ಬಗ್ಗೆ ಚರ್ಚೆ:

ಇದ​ಲ್ಲದೆ, ಮುಂಬರುವ ಲೋಕಸಭಾ ಚುನಾವಣೆಯನ್ನು ಒಟ್ಟಾಗಿ ಎದುರಿಸಲು 10 ರಿಂದ 12 ಸೀಟಿನ ಬೇಡಿಕೆ ಇಟ್ಟಿರುವ ಜೆಡಿಎಸ್‌ ಪಟ್ಟಿಗೆ ಯಾವ ರೀತಿಯ ತಂತ್ರಗಾರಿಕೆ ರೂಪಿಸಬೇಕು ಎಂಬ ಬಗ್ಗೆಯೂ ಈ ಸಂದ​ರ್ಭ​ದಲ್ಲಿ ಚರ್ಚೆ ನಡೆ​ಯಿತು ಎನ್ನ​ಲಾ​ಗಿ​ದೆ.

ದೆಹಲಿಯಲ್ಲಿನ ರಾಹುಲ್‌ ಗಾಂಧಿ ನಿವಾಸದಲ್ಲಿ ಸುಮಾರು 45 ನಿಮಿಷಗಳ ಕಾಲ ಕಾಂಗ್ರೆಸ್‌ನ ಸಂಘಟನಾ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಸಮ್ಮುಖದಲ್ಲಿ ಈ ಸಭೆ ನಡೆದಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿನ 28 ಸೀಟುಗಳನ್ನು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮಧ್ಯೆ ಹಂಚಿಕೆ ನಡೆಸಲು ಅನುಸರಿಸಬೇಕಾದ ಸೂತ್ರಗಳ ಬಗ್ಗೆಯೂ ರಾಹುಲ್‌ ಗಾಂಧಿಯ ಜೊತೆ ಪ್ರಾಥಮಿಕ ಹಂತದ ಚರ್ಚೆ ನಡೆಸಲಾಗಿದೆ. ಸದ್ಯ ತಾನು ಹೊಂದಿರುವ ಲೋಕಸಭಾ ಸ್ಥಾನಗಳನ್ನು ಜೆಡಿಎಸ್‌ಗೆ ಬಿಟ್ಟುಕೊಡಬಾರದು ಎಂಬ ಇಂಗಿತವನ್ನು ರಾಜ್ಯದ ನಾಯಕರು ಹೈಕಮಾಂಡ್‌ ಮುಂದಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ವೇಳೆ ಸೀಟು ಹಂಚಿಕೆ ಮತ್ತು ಕ್ಷೇತ್ರಾವಾರು ಹಂಚಿಕೆ ಬಗ್ಗೆಯೂ ಹೈಕಮಾಂಡ್‌ ತನ್ನ ನಿಲುವನ್ನು ತಿಳಿಸಬೇಕು ಎಂದು ಸಿದ್ದರಾಮಯ್ಯ ಮತ್ತು ದಿನೇಶ್‌ ಗುಂಡೂರಾವ್‌ ರಾಹುಲ್‌ ಗಾಂಧಿ ಅವರನ್ನು ಕೋರಿದ್ದಾರೆ. ಹಾಗೆಯೇ ಮುಂದಿನ ಸಭೆಯನ್ನು ಜೆಡಿಎಸ್‌ ವರಿಷ್ಠ ದೇವೇಗೌಡ ಅವರೊಂದಿಗೆ ನಡೆಸಿದರೆ ಒಳಿತು ಎಂಬ ಸಲಹೆಯನ್ನು ಸಿದ್ದರಾಮಯ್ಯ ಅವರು ರಾಹುಲ… ಗಾಂಧಿ ಅವರಿಗೆ ನೀಡಿದ್ದಾರೆ ಎನ್ನಲಾಗಿದೆ.

Follow Us:
Download App:
  • android
  • ios