ರಾಹುಲ್ ಗಾಂಧಿಯವರ ಟ್ವಿಟರ್ ಖಾತೆಗೆ ಕಿಡಿಗೇಡಿಗಳು ಕನ್ನ (ಹ್ಯಾಕ್) ಹಾಕಿರುವ ಸಂಗತಿ ಇಂದು ಸಂಜೆ ಬೆಳಕಿಗೆ ಬಂದಿದೆ.
ನವದೆಹಲಿ (ನ.30): ರಾಹುಲ್ ಗಾಂಧಿಯವರ ಟ್ವಿಟರ್ ಖಾತೆಗೆ ಕಿಡಿಗೇಡಿಗಳು ಕನ್ನ (ಹ್ಯಾಕ್) ಹಾಕಿರುವ ಸಂಗತಿ ಇಂದು ಸಂಜೆ ಬೆಳಕಿಗೆ ಬಂದಿದೆ.
ರಾಹುಲ್ ಅವರು ಟ್ವಿಟರ್ ನಲ್ಲಿ ಸುಮಾರು 1.21 ಮಿಲಿಯನ್ ಫಾಲೋವರ್ಸ್ ಗಳನ್ನು ಹೊಂದಿದ್ದು ಅವರೆಲ್ಲರಿಗೂ ಸರಣಿ ನಿಂದನೆ ಟ್ವಿಟ್ ಗಳು ಹೋಗಿದೆ.
'ಲೀಜಿಯನ್' ಎನ್ನುವ ತಂಡ ಈ ಕೃತ್ಯ ಎಸಗಿರಬಹುದೆಂದು ಶಂಕಿಸಲಾಗಿದೆ. ರಾಹುಲ್ ಗಾಂಧಿ ಹಾಗೂ ಅವರ ಕುಟುಂಬದ ಬಗ್ಗೆ ನಿಂದನಾತ್ಮಕ ಟ್ವೀಟ್ ಮಾಡಲಾಗಿದೆ.
