ಚಂದ್ರಯಾನದಿಂದ ಬಡವರ ಹೊಟ್ಟೆತುಂಬಲ್ಲ: ರಾಹುಲ್‌| ಉದ್ಯೋಗ ಕೇಳುವವರಿಗೆ ಚಂದ್ರನ ತೋರಿಸುವ ಮೋದಿ: ರಾಗಾ ವಾಗ್ದಾಳಿ

ಲಾತೂರ್‌[ಅ.14]: ‘ದೇಶದಲ್ಲಿ ಯುವಕರು ನಿರುದ್ಯೋಗದಿಂದ ತತ್ತರಿಸುತ್ತಿದ್ದಾರೆ. 2000 ಉದ್ದಿಮೆಗಳು ಬಂದಾಗಿದ್ದು, ನಿರುದ್ಯೋಗ ಪ್ರಮಾಣ 40 ವರ್ಷದ ಗರಿಷ್ಠಕ್ಕೆ ಮುಟ್ಟಿದೆ. ಯುವಕರು ನಮಗೆ ಕೆಲಸ ಕೊಡಿ ಎಂದು ಕೇಳಿದರೆ ಪ್ರಧಾನಿ ನರೇಂದ್ರ ಮೋದಿ ಅವರು ‘ಚಂದ್ರನನ್ನು ನೋಡಿ’ ಅಂತ ಹೇಳುತ್ತಾರೆ’ ಎಂದು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ವ್ಯಂಗ್ಯವಾಡಿದ್ದಾರೆ.

ಮೋದಿ ರಾಷ್ಟ್ರಪಿತ ಎಂದ ಫಡ್ನವೀಸ್ ಪತ್ನಿ: ಟ್ವಿಟ್ಟರ್‌ ರಿಯಾಕ್ಷನ್'ಗೆ ಚಟ್ನಿ!

ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ನಿಮಿತ್ತ ಭಾನುವಾರ ಇಲ್ಲಿ ಕಾಂಗ್ರೆಸ್‌ ಪ್ರಚಾರ ರಾರ‍ಯಲಿಯಲ್ಲಿ ಮಾತನಾಡಿದ ರಾಹುಲ್‌, ‘ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸ್ಥಾಪನೆಯಾಗಿದ್ದು ಕಾಂಗ್ರೆಸ್‌ನಿಂದ. ಇಸ್ರೋ ಹಾರಿಸಿದ ರಾಕೆಟ್‌ ವರ್ಷಗಟ್ಟಲೆ ಸಂಚರಿಸಿತು. ಆದರೆ ಇದರ ಲಾಭವನ್ನು ಪಡೆದುಕೊಳ್ಳಲು ಮೋದಿ ಮುಂದಾಗಿದ್ದಾರೆ. ಚಂದ್ರನ ಬಳಿ ಉಪಗ್ರಹ ಕಳಿಸಿದರೆ ಅದು ಬಡವರರ ಹೊಟ್ಟೆತುಂಬಿಸಲ್ಲ. ದೇಶದ ಯುವಕರ ಹಸಿದ ಹೊಟ್ಟೆತುಂಬುವುದಿಲ್ಲ’ ಎಂದು ಇತ್ತೀಚಿನ ‘ಚಂದ್ರಯಾನ-2’ ಕಾರ್ಯಕ್ರಮದಲ್ಲಿ ಮೋದಿ ಭಾಗವಹಿಸಿದ್ದನ್ನು ಉದ್ದೇಶಿಸಿ ಹೇಳಿದರು.

ಮೋದಿ ಮತ್ತು ಗೃಹ ಸಚಿವ ಅಮಿತ್‌ ಶಾ ಅವರು ದೇಶ ಎದುರಿಸುತ್ತಿರುವ ಮೂಲ ಸಮಸ್ಯೆಗಳನ್ನು ಬಗೆಹರಿಸುವ ಬದಲು, ಜನರ ಗಮನ ಬೇರೆಡೆ ಸೆಳೆಯಲು ಚಂದ್ರ, ಚೀನಾ, ಪಾಕಿಸ್ತಾನ, ಕೊರಿಯಾ, ಜಪಾನ್‌, ಕಾರ್ಬೆಟ್‌ ಪಾರ್ಕ್ನತ್ತ ತಿರುಗಿಸುತ್ತಾರೆ ಎಂದೂ ರಾಹುಲ್‌ ಆರೋಪಿಸಿದರು.

ನೌಕರಿಗಾಗಿ ಮೋದಿ ಸಭೆ: ಯಾರನ್ನು ಕರೆದಿದ್ದಾರೆ ಪ್ರಧಾನಿ?

ಅಲ್ಲದೆ, ಮೋದಿ ಸರ್ಕಾರ 15 ಶ್ರೀಮಂತ ಉದ್ಯಮಿಗಳ 5.5 ಲಲಕ್ಷ ಕೋಟಿ ರು. ಸಾಲ ಮನ್ನಾ ಮಾಡಿದೆ. ಈ ಬಗ್ಗೆ ಮಾಧ್ಯಮಗಳು ಮಾತನಾಡಲ್ಲ. ಏಕೆಂದರೆ ಈ ಮಾಧ್ಯಮಗಳಿಗೆ ಉದ್ಯಮಿಗಳೇ ದೊರೆಗಳು ಎಂದೂ ಗಾಂಧಿ ಟೀಕಿಸಿದರು.