ಹೆಲಿಕಾಪ್ಟರ್ ಬೇಡ, ಓಡಾಡುವ ಸ್ವಾತಂತ್ರ್ಯ ಕೊಟ್ರೆ ಸಾಕು: ಕಾಶ್ಮೀರ ಗವರ್ನರ್‌ಗೆ ರಾಹುಲ್ ತಿರುಗೇಟು!
ಜಮ್ಮು ಕಾಶ್ಮೀರ ರಾಜ್ಯಪಾಲರಿಗೆ ರಾಹುಲ್ ಗಾಂಧಿ ತಿರುಗೇಟು| ಕಾಶ್ಮೀರ ಪ್ರವಾಸ ಮಾಡಿ ಹೆಲಿಕಾಪ್ಟರ್ ವ್ಯವಸ್ಥೆ ಮಾಡ್ತೀನಿ ಎಂದಿದ್ದ ರಾಜ್ಯಪಾಲ ಸತ್ಯಪಾಲ ಮಲಿಕ್| ಹೆಲಿಕಾಪ್ಟರ್ ಬೇಡ ಓಡಾಡುವ ಸ್ವಾತಂತ್ರ್ಯ ನೀಡಿ ಎಂದ್ರು ಕಾಂಗ್ರೆಸ್ ಮಾಜಿ ಅಧ್ಯಕ್ಷ
ಶ್ರೀನಗರ[ಆ.13]: ಜಮ್ಮು ಕಾಶ್ಮೀರ ಪ್ರವಾಸದ ಆಫರ್ ನೀಡಿದ್ದ, ಇದಕ್ಕಾಗಿ ಹೆಲಿಕಾಪ್ಟರ್ ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದ ರಾಜ್ಯಪಾಲ ಸತ್ಯಪಾಲ ಮಲಿಕ್ ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಿರುಗೇಟು ನೀಡಿದ್ದಾರೆ. ಹೆಲಿಕಾಪ್ಟರ್ ನೀಡದಿದ್ದರೂ ಪರವಾಗಿಲ್ಲ, ಆದರೆ ನನಗೆ ಹಾಗೂ ನನ್ನೊಂದಿಗೆ ಬರುವ ನಾಯಕರಿಗೆ ಕಾಶ್ಮೀರಲ್ಲಿ ಓಡಾಡುವ, ಜನಸಾಮಾನ್ಯರಿಗೆ ಭೇಟಿಯಾಗುವ ಹಾಗೂ ಯೋಧರನ್ನು ಭೇಟಿ ಮಾಡುವ ಸ್ವಾತಂತ್ರ್ಯ ನೀಡಿದರೆ ಸಾಕು ಎಂದಿದ್ದಾರೆ.
ವರುಣನ ಅಬ್ಬರಕ್ಕೆ ಕರುನಾಡು ತತ್ತರ: ಮಳೆಗೆ ಸಂಬಂಧಿಸಿದ ಎಲ್ಲಾ ಸುದ್ದಿಗಳಿಗಾಗಿ ಕ್ಲಿಕ್ಕಿಸಿ
ಈ ಕುರಿತಾಗಿ ಟ್ವೀಟ್ ಮಾಡಿರುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ 'ಜಮ್ಮು ಹಾಗೂ ಕಾಶ್ಮೀರದ ಪ್ರಿಯ ರಾಜ್ಯಪಾಲ ಮಲಿಕ್, ನಾನು ಹಾಗೂ ವಿಪಕ್ಷ ನಾಯಕರು ಜಮ್ಮು ಕಾಶ್ಮೀರ ಹಾಗೂ ಲಡಾಖ್ ಗೆ ಭೇಟಿ ನೀಡಲು ನೀವು ನೀಡಿದ ಆಮಂತ್ರಣವನ್ನು ಖುಷಿಯಿಂದ ಸ್ವೀಕರಿಸುತ್ತೇವೆ. ನಮಗೆ ನೀವು ಹೆಲಿಕಾಪ್ಟರ್ ನೀಡಬೇಕಿಲ್ಲ. ಆದರೆ ಅಲ್ಲಿ ಓಡಾಡಲು, ಜನಸಾಮಾನ್ಯರನ್ನು ಹಾಗೂ ಅಲ್ಲಿರುವ ಯೋಧರನ್ನು ಭೇಟಿಯಾಗುವ ಸ್ವಾತಂತ್ರ್ಯ ನೀಡಿ' ಎಂದಿದ್ದಾರೆ.
ಆರ್ಟಿಕಲ್ 370 ರದ್ದುಗೊಳಿಸಿದ ಬಳಿಕ ರಾಹುಲ್ ಗಾಂಧಿ ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಹಲವಾರು ಹೇಳಿಕೆಗಳನ್ನು ನೀಡಿದ್ದರು. ಇದರ ಬೆನ್ನಲ್ಲೇ ರಾಜ್ಯಪಾಲ ಸತ್ಯಪಾಲ ಮಲಿಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷನಿಗೆ ಜಮ್ಮು ಕಾಶ್ಮೀರಕ್ಕೆ ಪ್ರವಾಸ ಮಾಡುವಂತೆ ಆಪರ್ ನೀಡಿದ್ದರು. ಅಲ್ಲದೇ ಹೆಲಿಕಾಪ್ಟರ್ ಆಯೋಜಿಸುವುದಾಗಿಯೂ ತಿಳಿಸಿದ್ದರು.