ನವದೆಹಲಿ: ‘ಕೊಡಬೇಕೆಂದರೆ ದೇಶದಲ್ಲಿ ಉದ್ಯೋಗಾವಕಾಶವೇ ಇಲ್ಲ. ಇನ್ನು ಮೀಸಲು ನೀಡಿದರೆ ಏನು ಪ್ರಯೋಜನ’ ಎಂಬ ಕೇಂದ್ರ  ಚಿವ ನಿತಿನ್ ಗಡ್ಕರಿ ಅವರ ಹೇಳಿಕೆಯನ್ನು ಕಾಂಗ್ರೆಸ್ ಪಕ್ಷ ‘ಸರಿಯಾಗೇ’ ಬಳಸಿಕೊಳ್ಳಲು ಆರಂಭಿಸಿದೆ. 

ಇದೇ ಹೇಳಿಕೆಯನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಇತರ ಪ್ರತಿಪಕ್ಷಗಳ ನಾಯಕರು ಮೋದಿ ಸರ್ಕಾರವನ್ನು ವ್ಯಂಗ್ಯವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. 

ಸೋಮವಾರ ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್, ‘ಗಡ್ಕರಿ ಅವರು ಸೂಕ್ತ ಪ್ರಶ್ನೆ ಎತ್ತಿದ್ದಾರೆ. ಪ್ರತಿ ಭಾರತೀಯರೂ ಕೇಳುತ್ತಿರುವುದು ಇದೇ ಪ್ರಶ್ನೆಯನ್ನು’ಎಂದು ಕಿಚಾಯಿಸಿದ್ದಾರೆ. ಇದೇ ವೇಳೆ ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಚವಾಣ್ ಪ್ರತಿಕ್ರಿಯಿಸಿ, ‘ಕಾಂಗ್ರೆಸ್ ಪಕ್ಷವು ನಿರುದ್ಯೋಗದ ಪ್ರಶ್ನೆ ಎತ್ತುತ್ತಿರುವುದನ್ನು ಗಡ್ಕರಿ ಅನುಮೋದಿಸಿದ್ದಾರೆ,’ಎಂದಿದ್ದಾರೆ.