‘ಗುರುನಾನಕರ ಬಗ್ಗೆ ಮಾತಾಡಿದ ರಾಹುಲ್ ಕ್ಷಮೆಯಾಚಿಸಲಿ’

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 24, Aug 2018, 6:22 PM IST
Rahul Gandhi should apologise for 1984 anti-Sikh riots: BJP
Highlights

ಸಿಖ್ ಗುರು ಗುರುನಾನಕ ಅವರ ಕುರಿತಾಗಿ ಮಾತನಾಡಿರುವ ರಾಹುಲ್ ಗಾಂಧಿ ಕೂಡಲೆ ಕ್ಷಮೆ ಯಾಚಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ. ಬರ್ಲಿನ್ ನಲ್ಲಿ ಮಾತನಾಡುತ್ತ ರಾಹುಲ್ ಗಾಂಧಿ ವೈವಿಧ್ಯತೆಯಲ್ಲಿ  ಏಕತೆ  ಕಾಂಗ್ರೆಸ್ ಚಿಂತನೆ ಗುರುನಾನಕ್ ಅವರ ಕಾಲದಲ್ಲಿಯೇ ಬಂದಿತ್ತು ಎಂದು ಹೋಲಿಸಿಕೊಂಡಿದ್ದು ಬಿಜೆಪಿ ಆಕ್ರೋಶಕ್ಕೆ ಕಾರಣವಾಗಿದೆ.

ನವದೆಹಲಿ[ಆ.24]  ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಭಾರತದಲ್ಲಿ ದ್ವೇಷವನ್ನು ಹರಡುತ್ತಿದೆ. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಯುವಜನಾಂಗಕ್ಕೆ ಉದ್ಯೋಗ ಇಲ್ಲದಂತಾಗಿದ್ದು, ಭವಿಷ್ಯ ಅತಂತ್ರದಿಂದ ಕೂಡಿದೆ ಎಂದು ಆರೋಪಿಸಿದ್ದ ರಾಹುಲ್ ಗಾಂಧಿ ವರನ್ನು ಬಿಜೆಪಿ ತರಾಟೆಗೆ ತೆಗೆದುಕೊಂಡಿದೆ.  

ರಾಹುಲ್ ಗಾಂಧಿ ತಮ್ಮಭಾಷಣದಲ್ಲಿ ಗುರುನಾನಕ್ ಅವರನ್ನು ಎಳೆದು ತಂದಿದ್ದಾರೆ. ಸಂಬಂಧವಿಲ್ಲದ ರೀತಿ ಆರೋಪಗಳನ್ನು ಮಾಡಿದ್ದಾರೆ. 1984 ರ ಸಿಖ್ ದಂಗೆಯಲ್ಲಿ ಅವರದ್ದೆ ಪಕ್ಷದ ಪಾತ್ರವಿದೆ. ಹಾಗಾಗಿ ರಾಹುಲ್ ಗಾಂಧಿ ಕೂಡಲೆ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದೆ.

ರಾಹುಲ್ ಒಬ್ಬಪ್ರಬುದ್ಧ ರಾಜಕಾರಣಿ. ಭಾರತದ ಘನತೆಯನ್ನು ಬೇರೆ ದೇಶದಲ್ಲಿ ಹರಾಜು ಹಾಕುವ ಕೆಲಸ ಮಾಡುತ್ತಿದ್ದಾರೆ. ದೇಶದ ಸಮಗ್ರತೆ ಕೊಂಡಾಡಬೇಕಾದವರೆ ಹೀಗೆ ಮಾಡಬಹುದಾ ಎಂದು ಬಿಜೆಪಿ ವಕ್ತಾರ ಸುಭಾಂಶು ತ್ರಿವೇದಿ ಪ್ರಶ್ನೆ ಮಾಡಿದ್ದಾರೆ.

loader