ನವದೆಹಲಿ : 70ನೇ ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ದಿಲ್ಲಿಯ ರಾಜ್ ಪಥ್ ನಲ್ಲಿ ನಡೆದ ಪರೇಡ್ ವೇಳೆ ಆಸಕ್ತಿದಾಯಕ ವಿಚಾರವೊಂದು ಕಂಡು ಬಂತು. 

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಅಕ್ಕಪಕ್ಕದಲ್ಲಿ ಕುಳಿತು ಪರೇಡ್ ವೀಕ್ಷಣೆ ಮಾಡಿದರು. ಅಲ್ಲದೇ ರಾಹುಲ್ ಬಲಭಾಗದಲ್ಲಿ ಇದ್ದ ಕುರ್ಚಿಯಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಕುಳಿತಿದ್ದು ಕಂಡು ಬಂತು. 

ಕಳೆದ ವರ್ಷ ನಡೆದ ಗಣರಾಜ್ಯೋತ್ಸವದ ಸಂದರ್ಭದಲ್ಲಿ ರಾಹುಲ್ ಗಾಂಧಿಗೆ ಮೀಸಲಿಟ್ಟಿದ್ದ ಸೀಟಿನ ಬಗ್ಗೆ ಸಾಕಷ್ಟು ವಿವಾದಗಳು ಭುಗಿಲೆದ್ದಿದ್ದವು. ನಾಲ್ಕನೇ ಸಾಲಿನಲ್ಲಿ ರಾಹುಲ್ ಗಾಂಧಿಗೆ ಆಸನ ಮೀಸಲಿಡಲಾಗಿತ್ತು. 

ಈ ನಿಟ್ಟಿನಲ್ಲಿ ಕಾಂಗ್ರೆಸ್ ನಲ್ಲಿ ಪ್ರಶ್ನೆ ಎದ್ದು, ಹಿಂದಿನ ಸ್ಥಾನವನ್ನು ರಾಹುಲ್ ಗಾಂಧಿ ಆಸನದ ಸಂಬಂಧ ಅಸಮಾಧಾನ ವ್ಯಕ್ತಪಡಿಸಲಾಗಿತ್ತು. ಆದರೆ ಈ ಬಾರಿ ಬಿಜೆಪಿ ಮುಖಂಡರ ಜೊತೆಯಲ್ಲಿಯೇ  ರಾಹುಲ್ ಗೆ ಆಸನದ ವ್ಯವಸ್ಥೆ ಮಾಡಲಾಗಿತ್ತು. 

ರಾಜ್ ಪಥ್ ನಲ್ಲಿ ನಡೆದ ಗಣರಾಜ್ಯೋತ್ಸವ ಪರೇಡ್ ಅನ್ನು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬಿಜೆಪಿ ಮುಖಂಡರ ಪಕ್ಕದಲ್ಲಿಯೇ ಕುಳಿತು ವೀಕ್ಷಣೆ ಮಾಡಿದರು.