ಮತ್ತೆ ಪ್ರಧಾನಿ ಮೋದಿ ಮೇಲೆ ರಾಹುಲ್ ಗಾಂಧಿ ವಾಗ್ದಾಳಿ! ರಫೆಲ್ ಒಪ್ಪಂದ ಹಗರಣ ಬಯಲು ಕೇವಲ ಆರಂಭವಷ್ಟೇ! ಮುಂದಿನ ದಿನಗಳಲ್ಲಿ ಮತ್ತಷ್ಟು ಹಗರಣ ಬಯಲು ಮಾಡುವೆ! ಮೋದಿ ಚೌಕಿದಾರನಲ್ಲ, ಅವರೊಬ್ಬ ಕಳ್ಳ ಎಂದು ಜರೆದ ರಾಹುಲ್  

ನವದೆಹಲಿ(ಸೆ.25): ರಫೆಲ್ ಯುದ್ಧ ವಿಮಾನ ಖರೀದಿ ಒಪ್ಪಂದ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. 

ಹಗರಣದ ಕುರಿತು ಮುಂದಿನ ದಿನಗಳಲ್ಲಿ ಸರ್ಕಾರದ ಹಲವು ತಪ್ಪುಗಳನ್ನು ಬಹಿರಂಗಪಡಿಸುವುದಾಗಿ ಎಚ್ಚರಿಕೆಯನ್ನು ರಾಹುಲ್ ನೀಡಿದ್ದಾರೆ. 

ಸ್ವಕ್ಷೇತ್ರ ಅಮೇಥಿಗೆ ಭೇಟಿ ನೀಡಿದ್ದ ರಾಹುಲ್ ಗಾಂಧಿ, ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ್ದು, ಮುಂದಿನ 3 ತಿಂಗಳುಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಹಲವು ತಪ್ಪುಗಳನ್ನು ಬಹಿರಂಗಪಡಿಸುವುದಾಗಿ ಈ ವೇಳೆ ರಾಹುಲ್ ಹೇಳಿದ್ದಾರೆ.

Scroll to load tweet…

ಭ್ರಷ್ಟಾಚಾರವನ್ನು ತೊಲಗಿಸುವುದಾಗಿ ಹೇಳಿಕೊಂಡು ಅಧಿಕಾರಕ್ಕೆ ಬಂದ ವ್ಯಕ್ತಿಯೊಬ್ಬರು ಅನಿಲ್ ಅಂಬಾನಿಯವರಿಗೆ 30 ಸಾವಿರ ಕೋಟಿ ನೀಡಿದ್ದಾರೆ. ಇದು ಕೇವಲ ಆರಂಭವಷ್ಟೇ ಮುಂದಿನ ದಿನಗಳಲ್ಲಿ ಸರ್ಕಾರ ಮತ್ತಷ್ಟು ವೈಫಲ್ಯಗಳನ್ನು ಬಹಿರಂಗಪಡಿಸುತ್ತೇವೆಂದು ರಾಹುಲ್ ಗುಡುಗಿದರು. 

ರಫೇಲ್ ಒಪ್ಪಂದ, ವಿಜಯ್ ಮಲ್ಯ, ಲಲಿತ್ ಮೋದಿ, ನೋಟು ನಿಷೇಧ, ಗಬ್ಬರ್ ಸಿಂಗ್ ಟ್ಯಾಕ್ಸ್ (ಜಿಎಸ್ ಟಿ) ಈ ಎಲ್ಲಾ ಪ್ರಕರಣಗಳಲ್ಲೂ ಮೋದಿ ಸರ್ಕಾರದ ತಪ್ಪುಗಳಾಗಿವೆ. ಈ ಎಲ್ಲಾ ಪ್ರಕರಣಗಳು ಒಂದರ ಹಿಂದೆ ಒಂದರಂತೆ ಮೋದಿಯವರು ಚೌಕಿದಾರನಲ್ಲ, ಒಬ್ಬ ಕಳ್ಳನೆಂದು ಸಾಬೀತುಪಡಿಸುತ್ತವೆ ಎಂದು ರಾಹುಲ್ ಅಭಿಪ್ರಾಯಪಟ್ಟಿದ್ದಾರೆ.