ಮೋದಿ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳಿ: ಸ್ವಾಮಿ!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 21, Jul 2018, 1:34 PM IST
Rahul Gandhi's hug to PM Modi was childish act: Subramanian Swamy
Highlights

ಲೋಕಸಬೆಯಲ್ಲಿ ಪ್ರಧಾನಿ ಅಪ್ಪಿಕೊಂಡ ರಾಹುಲ್

ಅಪ್ಪುಗೆಗೆ ಅವಕಾಶ ನೀಡಬಾರದಿತ್ತು ಎಂದ ಸ್ವಾಮಿ

ವೈದ್ಯಕೀಯ ಪರೀಕ್ಷೆಗೆ ಪ್ರಧಾನಿಗೆ ಸಲಹೆ

ರಾಹುಲ್ ವಿಷ ಚುಚ್ಚಿರಬಹುದಾದ ಸಾಧ್ಯತೆ ಎಂದ ಸ್ವಾಮಿ

ನವದೆಹಲಿ(ಜು.21): ಅವಿಶ್ವಾಸ ಗೊತ್ತುವಳಿ ಮಂಡನೆ ಚರ್ಚೆ ವೇಳೆ ಪ್ರಧಾನಿ ಮೋದಿಯನ್ನು ರಾಹುಲ್ ಗಾಂಧಿ ತಬ್ಬಿಕೊಂಡಿದ್ದನ್ನು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಟೀಕಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸುಬ್ರಮಣಿಯನ್ ಸ್ವಾಮಿ, ಪ್ರಧಾನಿ ಮೋದಿ ಅವರು ರಾಹುಲ್ ಗಾಂಧಿಗೆ ತಮ್ಮನ್ನು ಆಲಿಂಗಿಸಲು ಅವಕಾಶವನ್ನೇ ನೀಡಬಾರದಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ. ಕೂಡಲೇ ಮೋದಿ ವೈದ್ಯರ ಬಳಿ ತನ್ನ ದೇಹ ಪರೀಕ್ಷೆ ಮಾಡಿಸಿಕೊಳ್ಳುವುದು ಒಳಿತು ಎಂದು ಸ್ವಾಮಿ ಕುಹುಕವಾಡಿದ್ದಾರೆ.  

ರಾಹುಲ್ ಗಾಂಧಿಯನ್ನು ಬುದ್ದು ಎಂದು ಕರೆದಿರುವ ಸುಬ್ರಮಣಿಯನ್ ಸ್ವಾಮಿ, ಪ್ರಧಾನಿ ತಮ್ಮನ್ನು ಆಲಿಂಗಿಸಲು ರಾಹುಲ್ ಗೆ ಅವಕಾಶ ನೀಡಬಾರದಿತ್ತು ಎಂದಿದ್ದಾರೆ. ಅಲ್ಲದೇ ಉತ್ತರ ಕೊರಿಯಾ ಹಾಗೂ ರಷ್ಯಾದಲ್ಲಿ ವಿಷದ ಸೂಜಿಯನ್ನು ಚುಚ್ಚಲು ಇದೇ ರೀತಿಯ ಅಪ್ಪಿಕೊಳ್ಳುವ ತಂತ್ರವನ್ನು ಬಳಸುತ್ತಾರೆ. ಹೀಗಾಗಿ ಮೋದಿ ಆಲಿಂಗನಕ್ಕೆ ಅವಕಾಶ ನೀಡಬಾರದಿತ್ತು ಎಂದು ಸ್ವಾಮಿ ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್ ಸಂಸದ ಶಶಿ ತರೂರ್ ಪತ್ನಿ ಸುನಂದಾ ಪುಷ್ಕರ್ ದೇಹದಲ್ಲಿ ಅತಿಸೂಕ್ಷ್ಮ ರಂಧ್ರವಿತ್ತು. ಈಗ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಮೋದಿಯನ್ನು ಆಲಿಂಗನ ಮಾಡಿರುವುದರಿಂದ ಪ್ರಧಾನಿ ಸಹ ತುರ್ತಾಗಿ ಹೋಗಿ ವೈದ್ಯ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಮೋದಿಗೆ ಸುಬ್ರಮಣಿಯನ್ ಸ್ವಾಮಿ ಸಲಹೆ ನೀಡಿದ್ದಾರೆ. 

loader