ಗೌರಿ ಲಂಕೇಶ್ ಹತ್ಯೆ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ನೀಡಿರುವ ಹೇಳಿಕೆ ವಿವಾದ ಸೃಷ್ಟಿಸಿದೆ. ತಮ್ಮ ಹೆಳಿಕೆಯಲ್ಲಿ ಆರ್​ಎಸ್​ಎಸ್ ವಿರುದ್ಧ ರಾಹುಲ್ ಗಾಂಧಿ ನೇರ ವಾಗ್ದಾಳಿ ನಡೆಸಿದ್ದಾರೆ.

ನವದೆಹಲಿ(ಸೆ.06): ಗೌರಿ ಲಂಕೇಶ್ ಹತ್ಯೆ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ನೀಡಿರುವ ಹೇಳಿಕೆ ವಿವಾದ ಸೃಷ್ಟಿಸಿದೆ. ತಮ್ಮ ಹೆಳಿಕೆಯಲ್ಲಿ ಆರ್​ಎಸ್​ಎಸ್ ವಿರುದ್ಧ ರಾಹುಲ್ ಗಾಂಧಿ ನೇರ ವಾಗ್ದಾಳಿ ನಡೆಸಿದ್ದಾರೆ.

ಗೌರಿ ಲಂಕೇಶ್ ಹತ್ಯೆ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಆರ್​​ಎಸ್​ಎಸ್ ವಿರುದ್ಧ ನೇರ ವಾಗ್ಧಾಳಿ ನಡೆಸಿದ್ದಾರೆ. ಆರ್'ಎಸ್'ಎಸ್ ಹಾಗೂ ಬಿಜೆಪಿ ವಿರುದ್ಧ ಮಾತೆತ್ತಿದವರ ಮೇಲೆ ಒತ್ತಡ ಹೇರುವುದು, ದಾಳಿ ನಡೆಯುವುದು ಹಾಗೂ ಕೊಲೆಗೈಯ್ಯುವುದು ನಡೆಯುತ್ತಲೇ ಬಂದಿದೆ. ದೇಶದಲ್ಲಿ ಕೇವಲ ಒಂದೇ ಸಿದ್ಧಾಂತವಿರಬೇಕು ಎಂದು ಹೀಗೆ ಮಾಡುತ್ತಾರೆ ಎನ್ನುವ ಮೂಲಕ ಆರ್'ಎಸ್'ಎಸ್'ನ್ನು ನೇರವಾಗಿ ಟೀಕಿಸಿದ್ದಾರೆ.